ಧಾರವಾಡ: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ‘ವಿದ್ಯಾಕಾಶಿ’ ಧಾರವಾಡದಲ್ಲಿ ಇಂದು ಕಿಚ್ಚು ಹತ್ತಿಕೊಂಡಿದೆ. ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಾವಿರಾರು ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳು ಬೀದಿಗಿಳಿದು ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ : ಪೋಡಿ ಅಂದ್ರೇನು? ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಸರ್ಕಾರದ ವಿರುದ್ಧ ಭರವಸೆ ಭಂಗದ ಆರೋಪ : ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಯುವಕರು ಪಟ್ಟು ಹಿಡಿದಿದ್ದಾರೆ. “ನಮಗೆ ಬರಿ ಭರವಸೆ ಬೇಡ, ಅಧಿಕೃತ ನೋಟಿಫಿಕೇಶನ್ ಬೇಕು” ಎಂಬ ಕೂಗು ಧಾರವಾಡದ ರಸ್ತೆ ರಸ್ತೆಗಳಲ್ಲಿ ಮೊಳಗುತ್ತಿದೆ.
ರಸ್ತೆಗಳಲ್ಲೇ ಕುಳಿತ ವಿದ್ಯಾರ್ಥಿಗಳು: ಹೈರಾಣಾದ ಪೊಲೀಸರು : ಸಾವಿರಾರು ಸಂಖ್ಯೆಯಲ್ಲಿ ಯುವಕರು ಏಕಾಏಕಿ ರಸ್ತೆಗಿಳಿದಿದ್ದರಿಂದ ಧಾರವಾಡದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದರೂ, ವಿದ್ಯಾರ್ಥಿಗಳು ಸ್ಥಳದಿಂದ ಕದಲು ಒಪ್ಪದೆ ಉಗ್ರ ರೂಪ ತಾಳಿದ್ದಾರೆ.

ಪ್ರತಿಭಟನಾಕಾರರ ಪ್ರಮುಖ 3 ಬೇಡಿಕೆಗಳು ಇಲ್ಲಿವೆ: ತಕ್ಷಣದ ಅಧಿಸೂಚನೆ: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿಳಂಬ ಮಾಡದೆ ತಕ್ಷಣ ನೋಟಿಫಿಕೇಶನ್ ಹೊರಡಿಸಬೇಕು.
ವಿಳಂಬಕ್ಕೆ ಬ್ರೇಕ್: ಅರ್ಜಿ ಸಲ್ಲಿಕೆಯಿಂದ ನೇಮಕಾತಿವರೆಗಿನ ಪ್ರಕ್ರಿಯೆಯಲ್ಲಿ ಆಗುತ್ತಿರುವ ಕಾಲಹರಣ ತಪ್ಪಿಸಬೇಕು.
ಬಾಕಿ ಫಲಿತಾಂಶ: ಈಗಾಗಲೇ ಪರೀಕ್ಷೆ ಬರೆದು ವರ್ಷಗಳಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಶೀಘ್ರ ನ್ಯಾಯ ಒದಗಿಸಬೇಕು.
Huge battle of job seekers in Dharwad! Thousands of students protest by holding photos of Congress leaders