ಆಹಾರ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಸಹಕರಿಸಿ : ಡಾ.ಹೆಚ್ ಕೃಷ್ಣ

Help ensure adequate delivery of food schemes to beneficiaries Dr. H Krishna

ಶಿವಮೊಗ್ಗ : ಜಿಲ್ಲೆಯಲ್ಲಿ ಆಹಾರ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಮೂಲಕ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ತಿಳಿಸಿದರು.

ಕರ್ನಾಟ ರಾಜ್ಯ ಆಹಾರ ಆಯೋಗವು ಶಿವಮೊಗ್ಗ ಜಿಲ್ಲಾ ಪ್ರವಾಸ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಜಿ.ಪಂ ಸಭಾಂಗಣದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟಿçÃಯ ಆಹಾರ ಭದ್ರತೆ ಕಾಯ್ದೆಯು ಆಹಾರ ಹಕ್ಕಿಗೆ ಕಾನೂನಾತ್ಮಕ ಭದ್ರತೆ ನೀಡಿದ್ದು ಸರ್ಕಾರ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ವಿವಿಧ ಆಹಾರ ಯೋಜನೆಗಳಾದ ಅನ್ನಭಾಗ್ಯ, ಪಿಎಂ ಪೋಷಣ್, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಮಾತೃ ವಂದನಾ, ಗರ್ಭಿಣಿ, ಬಾಣಂತಿಯರಿಗೆ, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ, ಸರ್ಕಾರಿ ವಸತಿನಿಲಯಗಳಲ್ಲಿ ನೀಡುವ ಆಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಆಹಾರ, ಅಪೌಷ್ಟಿಕತೆವುಳ್ಳ ಮಕ್ಕಳಿಗೆ ನೀಡುವ ಆಹಾರ ಸೇರಿದಂತೆ ಸರ್ಕಾರ ನೀಡುತ್ತಿರುವ ಸಮಗ್ರ ಆಹಾರ ಯೋಜನೆಗಳನ್ನು ಗ್ರಾಮ ಮಟ್ಟದಿಂದ ಜಿಲ್ಲೆಯ ಮಟ್ಟದವರೆಗೆ ಸಮರ್ಪಕವಾಗಿ ಜಾರಿಗೊಳಿಸಲು, ಫಲಾನುಭವಿಗಳಿಗೆ ಗುಣಮಟ್ಟದೊಂದಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಕಾನೂನು ಅರಿವು ಪಡೆದ ಮಕ್ಕಳು ಅಪರಾಧಗಳನ್ನು ತಡೆಯಬಹುದು ನ್ಯಾ.ಅಭಯ ಧನಪಾಲ ಚೌಗಲಾ

ಈ ಎಲ್ಲ ಆಹಾರ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳ್ಳುತ್ತಿವಿಯೇ ಎಂದು ಪರಿಶೀಲಿಸಲು ನ್ಯಾಯಬೆಲೆ ಅಂಗಡಿಗಳು, ವಿವಿಧ ಹಾಸ್ಟೆಲ್‌ಗಳು, ಮಧ್ಯಾಹ್ನ ಬಿಸಿಯೂಟ ನೀಡುವ ಶಾಲೆಗಳು, ಅಂಗನವಾಡಿ ಕೇಂದ್ರಗಳು, ತಾಲ್ಲೂಕು ಕಚೇರಿ, ನಿರಾಶ್ರಿತರ ಕೇಂದ್ರಗಳನ್ನು ಭೇಟಿ ನೀಡಿ ಪರಿಶೀಲಿಸಿ, ಲೋಪದೋಷಗಳು ಕಂಡು ಬಂದ ಕಡೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ.

ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಮುಖ್ಯವಾಗಿ ಸ್ವಚ್ಚತೆ ಇಲ್ಲದಿರುವುದು. ದಾಸ್ತಾನು ತಾಳೆ ಆಗದಿರುವುದು, ಜಾಗೃತಿ ಸಮಿತಿ ಸದಸ್ಯರ ಹೆಸರನ್ನು ಫಲಕದಲ್ಲಿ ಹಾಕದಿರುವುದು, ತೂಕದ ಮಷೀನ್‌ನಲ್ಲಿ ಲೋಪ, ಕೆಲವೆಡೆ ಕಂಪ್ಯೂಟರ್ ಮತ್ತು ಪ್ರಿಂಟರ್ ಇಲ್ಲದಿರುವುದು ಕಂಡು ಬಂದಿದೆ.

Help ensure adequate delivery of food schemes to beneficiaries Dr. H Krishna
Help ensure adequate delivery of food schemes to beneficiaries Dr. H Krishna

ಅಶೋಕ ನಗರ, ಶೇಷಾದ್ರಿಪುರ ಹಾಗೂ ಹೊಸನಗರ ತಾಲ್ಲೂಕಿನ ಹುಂಚದ ನ್ಯಾಯಬೆಲೆ ಅಂಗಡಿ ಸೇರಿ ಒಟ್ಟು 03 ನ್ಯಾಯಬೆಲೆ ಅಂಗಡಿಗಳಲ್ಲಿ ಕಂಡುಬAದ ಲೋಪಕ್ಕಾಗಿ ಅವರ ಪರವಾನಗಿ ಅಮಾನತು ಮಾಡಲಾಗಿದೆ. ಅಣ್ಣಾನಗರದ ಹರ್ಷಿತಾ ಸ್ಟೋರ್ಸ್ ನ್ಯಾಯಬೆಲೆ ಅಂಗಡಿ, ಗುತ್ಯಪ್ಪ ಕಾಲೋನಿಯ ನಾಗರಿಕ ಸೇವಾ ಸಂಘ ನ್ಯಾಯಬೆಲೆ ಅಂಗಡಿ ಗಾಡಿಕೊಪ್ಪದ ಶಿವಮೂರ್ತಿ ನ್ಯಾಯಬೆಲೆ ಅಂಗಡಿಗಳಿಗೆ ಮತ್ತು ಕಸಬ ರೈತ ಸಂಪರ್ಕ ಕೇಂದ್ರಕ್ಕೆ ನೋಟಿಸ್ ನೀಡಲು ಸೂಚಿಸಲಾಗಿದೆ.

ಎಂಎಸ್‌ಪಿಸಿ ಗೆ ಭೇಟಿ ನೀಡಿದ ವೇಳೆ ಅಕ್ಕಿ ಮತ್ತು ಗೋಧಿ ದಾಸ್ತಾನು ವ್ಯತ್ಯಾಸ ಕಂಡು ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ಕೃಷಿ ಜಂಟಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ಸರ್ಕಾರ ಕಲ್ಯಾಣ ಇಲಾಖೆಗಳ ಮೂಲಕ ನಡೆಸಲಾಗುತ್ತಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ವೇಳೆ ಸ್ವಚ್ಚತೆ ಕೊರತೆ, ಆಹಾರ ಗುಣಮಟ್ಟದಲ್ಲಿ ಕೊರತೆ ಕಂಡು ಬಂದಿತು. ಕೆಲವೆಡೆ ಶುದ್ದ ಕುಡಿಯುವ ನೀರಿನ ಘಟಕಗಳ ಸಮಸ್ಯೆ, ಕಂಪ್ಯೂಟರ್ ರಿಪೇರಿ, ಸಿಸಿ ಟಿವಿ ಸರಿಯಾಗಿಲ್ಲದಿರುವುದು, ವಿದ್ಯಾರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಆಗದಿರುವುದು, ಬಿಸಿನೀರು ಸೌಲಭ್ಯ ಇಲ್ಲದಿರುವುದು, ಶೌಚಾಲಯ ರಿಪೇರಿ, ಮೆನು ಪ್ರಕಾರ ಆಹಾರ ನೀಡದಿರುವುದು, ಕ್ರೀಡಾ ಸಾಮಗ್ರಿ ಕೊರತೆ, ಹಾಸಿಗೆ,ಮಂಚ ಕೊರತೆ ಇರುವುದು ಕಂಡು ಬಂದಿದ್ದು ಸಂಬAಧಿಸಿದ ವಾರ್ಡನ್ ಮತ್ತು ಅಧಿಕಾರಿಗಳಿಗೆ ಇವುಗಳನ್ನು ಒದಗಿಸುವಂತೆ ಸೂಚನೆ ನೀಡಿದ ಅವರು ಸರ್ಕಾರಿ ರಜೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಿಂದ ಮನೆಗೆ ಹೋಗುವಂತೆ ಒತ್ತಾಯಿಸಬಾರದು ಎಂದು ತಿಳಿಸಿದರು.

ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಕೊಡುವುದನ್ನೇ ನಿಲ್ಲಿಸಿದ ಅನುದಾನಿತ ಶಾಲೆಯಲ್ಲಿ ಮಕ್ಕಳ ಅನುಮತಿ ಪಡೆದು ಮೊಟ್ಟೆ ನೀಡಲಾಗಿದೆ ಎಂದು ತಿಳಿಸಿದರು.ದುರ್ಗಿಗುಡಿ ಮತ್ತು ಕೆಆರ್ ಪುರಂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ವೇಳೆ, ಅಡುಗೆ ಸಾಮಗ್ರಿ ದಾಸ್ತಾನಿನಲ್ಲಿ ವ್ಯತ್ಯಾಸ, ವಹಿಗಳ ಅಸಮರ್ಪಕ ನಿರ್ವಹಣೆ, ಅಡುಗೆ ಮಾಡುವಲ್ಲಿ ಸಮಸ್ಯೆಗಳನ್ನು ಗುರುತಿಸಿ ಈ ಶಾಲೆಗಳ ಮುಖ್ಯಸ್ಥರ ವಿರುದ್ದ ಶಿಸ್ತಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.ಕರ್ತವ್ಯ ಲೋಪವೆಸಗಿರುವ ಕೆಲವು ಹಾಸ್ಟೆಲ್‌ಗಳ ವಾರ್ಡನ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಪಡಿಸಲು ಸೂಚಿಸಿದ್ದು, ಈ ಬಗ್ಗೆ ಶೀಘ್ರವಾಗಿ ಕ್ರಮ ವಹಿಸಬೇಕೆಂದರು. ಸಭೆಯಲ್ಲಿ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ ದೊಡ್ಡಲಿಂಗಣ್ಣನವರ್, ವಿಜಯಲಕ್ಷ್ಮಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.