ಮಂಡ್ಯ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಪೇಂಟ್ ತರಲು ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಅಂಗಡಿ ಮಾಲೀಕ ಮೇಲೆತ್ತುವಷ್ಟರಲ್ಲಿ ಈರಣ್ಣಯ್ಯ ಅಸುನೀಗಿದ್ದಾರೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪೇಂಟ್ ತರಲು ಹೋದ ವ್ಯಕ್ತಿ ಕಾರ್ಡಿಯಾ ಅಟ್ಯಾಕ್ ನಿಂದ ಪೇಂಟ್ ಅಂಗಡಿಯಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತಕ್ಕೆ ಬಲಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ರಾಜ್ಯದ `ಪಡಿತರ ಚೀಟಿ’ದಾರರಿಗೆ ಗುಡ್ ನ್ಯೂಸ್ : ಫೆಬ್ರವರಿಗೆ ‘ಇಂದಿರಾ ಕಿಟ್’ ವಿತರಣೆ…!
ಇದನ್ನು ಮಿಸ್ ಮಾಡದೇ ಓದಿ: ಕೇಂದ್ರ ಸರ್ಕಾರದಿಂದ 2026ನೇ ಸಾಲಿನ `ಸಾರ್ವತ್ರಿಕ ರಜಾದಿನಗಳ ಪಟ್ಟಿ’ ಬಿಡುಗಡೆ

ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ(58) ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ತೆರಳಿದ್ದ ಈರಣ್ಣಯ್ಯ.ಈ ವೇಳೆ ಏಕಾಏಕಿ ನಿಂತಲ್ಲೆ ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೆ ಈರಣ್ಣಯ್ಯ ಸಾವನ್ನಪ್ಪಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













Follow Me