ಬೆಂಗಳೂರು: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ 19,20 ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ.ಕಳೆದ ಮೂರು ತಿಂಗಳಿನಿಂದ 19,20 ನೇ ಕಂತಿನ ಹಣಕ್ಕಾಗಿ ರಾಜ್ಯದ ಮಹಿಳೆಯರು ಕಾಯುತ್ತಿರುವುದು ನಿಮಗೆಲ್ಲ ತಿಳಿದಿದೆ. ಗೃಹಲಕ್ಷ್ಮಿ ಯೋಜನೆಯ ಹಣದಿಂದ ಹಲವು ಮಂದಿ ಮಹಿಳೆಯರು ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದು, ಹಲವು ಮಂದಿ ಹಸು, ಆಡು ಸೇರಿದಂತೆ ತಮ್ಮಜೀವನಕ್ಕಾಗಿ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿರುವುದು ಕೂಡ ಉಂಟು.

ಈ ನಡುವೆ ಬಾಕಿ ಉಳಿದಿರುವ ಎರಡು ತಿಂಗಳ ಹಣ ಬಿಡುಗಡೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.ಹೌದು, ಜನವರಿ ತಿಂಗಳ ಹಣವನ್ನ ಮಹಿಳಾ ಫಲಾನುಭವಿಗಳ ಖಾತೆಗೆ ರಾಜ್ಯ ಸರ್ಕಾರ ಈಗಾಗಲೇ ಬಿಡುಗಡ ಮಾಡಿದ್ದು, ಫಲಾನುಭಾವಿಗಳು ಪಡೆದುಕೊಂಡಿದ್ದಾರೆ ಅದರಂತೆ, ಈಗ ವ ಫೆಬ್ರವರಿ, ಮಾರ್ಚ್(19,20 ನೇ) ಕಂತಿನ ಗೃಹ ಲಕ್ಷ್ಮಿ ಯೋಜನೆ ಹಣವನ್ನು ಹಣ ಶೀಘ್ರವೇ ಫಲಾನುಭವಿಗಳ ಖಾತೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುವುದು ಅಂತ ತಿಳಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ಪಡೆದುಕೊಳ್ಳುತ್ತಾರೆ.
gruha lakshmi scheme
Follow Me