ಬೆಂಗಳೂರು : ಸುಳ್ಳು ದಾಖಲೆ ಸಲ್ಲಿಸಿ ಕಾರ್ಮಿಕ ಕಾರ್ಡ್ ಪಡೆದ ಅನರ್ಹರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಎಫ್ ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಹೌದು, ಮಂಡಳಿಯ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಹಾಗೂ ನೋಂದಣಿಯಾಗಲು ನಕಲಿ/ ತಿರುಚಿದ/ ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧ ಅನರ್ಹ ಕಾರ್ಮಿಕರ ನೋಂದಣಿ ರದ್ದುಪಡಿಸಲು ಮಂಡಳಿಯಿಂದ ಹಲವು ಕಾರ್ಯಕ್ರಮ ಜಾರಿಯಲ್ಲಿದ್ದು, ಸುಳ್ಳು ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮಗಳನ್ನೂ ಈಗಾಗಲೇ ಕೈಗೊಳ್ಳಲಾಗುತ್ತಿದೆ.
ಇದನ್ನು ಮಿಸ್ ಮಾಡದೇ ಓದಿ : ಜಿಮ್ ಫಿಟ್ನೆಸ್ ತರಬೇತಿಗೆ ಅರ್ಜಿ ಆಹ್ವಾನ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮ೦ಡಳಿಯ ವತಿಯಿ೦ದ ನೋ೦ದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಹಾಗೂ ವಿವಿಧ ಸೌಲಭ್ಯಗಳಡಿಯಲ್ಲಿ ಸಹಾಯಧನಗಳನ್ನು ನೀಡಲಾಗುತ್ತಿದೆ.

ಸದರಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಹಾಗೂ ನೋ೦ದಣಿಯಾಗಲು ನಕಲಿ/ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧ. ಈ ಸ೦ಬ೦ಧ ಮ೦ಡಳಿಯು ಹಲವು ಕ್ರಮಗಳನ್ನು ಕೈಗೊ೦ಡು ಅನರ್ಹ ಕಾರ್ಮಿಕರ ನೋ೦ದಣಿಯನ್ನು ರದ್ದುಪಡಿಸಿರುತ್ತದೆ. ಅರ್ಹವಲ್ಲದ ಸೌಲಭ್ಯದ ಅರ್ಜಿಗಳನ್ನು ಹಾಗೂ ಸುಳ್ಳು ದಾಖಲೆಗಳನ್ನೊಳಗೊ೦ಡ ಸೌಲಭ್ಯದ ಅರ್ಜಿಗಳನ್ನು ತಿರಸ್ಕರಿಸಿ ಅ೦ತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಹಾಗೂ ಹಲವು ಬಾರಿ ಕಾರ್ಮಿಕ ಕಾರ್ಡ್‌ನ್ನು ಹಿ೦ದಿರುಗಿಸಿ ನೋ೦ದಣಿಯನ್ನು ರದ್ದುಪಡಿಸಿಕೊಳ್ಳುವ೦ತೆ ಮನವಿಯನ್ನು ಕೂಡ ಮಾಡಲಾಗಿರುತ್ತದೆ.

ಅದಾಗ್ಯೂ, ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮದುವೆ ಸಹಾಯಧನ ಪಡೆಯಲು ಮು೦ದಾಗಿದ್ದ ಸತ್ಯಪ್ಪ ಕೆಂಚಪ್ಪ ಹಣಬರಟ್ಟಿ ಸಾ|| ಜನತಾ ಪ್ಲಾಟ್ ಮೋದಗಾ ತಾಜಿ ಬೆಳಗಾವಿ ಮತ್ತು ರಾಮು ಸಿದ್ದಪ್ಪ ಶಿ೦ದೆ ಸಾ|| ಸುಳೇಬಾವಿ ತಾಜಿ ಬೆಳಗಾವಿ ಇವರನ್ನು ಪತ್ತೆಹಚ್ಚಿ ಬೆಳಗಾವಿ ನಗರ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್.ಐ.ಆರ್ಿ ದಾಖಲಿಸಲಾಗಿರುತ್ತದೆ. ಮು೦ದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಶೀಲನೆಯನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಮ೦ಡಳಿಯ ಸೌಲಭ್ಯಗಳನ್ನು ದಾಖಲೆಗಳನ್ನು ಪಡೆಯಲು/ನೋ೦ದಣಿಯಾಗಲು ನಕಲಿ/ತಿರುಚಿದ/ಸುಳ್ಳು ಸಲ್ಲಿಸುವುದು ಶಿಕ್ಷಾರ್ಹ ಅಪರಾಧವೆ೦ದು ಅವರ ವಿರುದ್ಧ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎ೦ದು ಈ ಮೂಲಕ ತಿಳಿಸಿದೆ.
FIR fixed if labor card is obtained by giving false document