ಇಎಸ್‌ಐಸಿ : ಜ.31 ರ ವರೆಗೆ ನೋಂದಣಿಗೆ ಅವಕಾಶ

esic

ಬಳ್ಳಾರಿ : ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯಡಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾಯಿಕೊಳ್ಳಲು ಜ.31 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಯುವರಾಜ ಎಸ್.ವಿ ಅವರು ತಿಳಿಸಿದ್ದಾರೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆಯು ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ಇದರಡಿ ನೋಂದಾಯಿಸಿಕೊಳ್ಳಲು 31ನೇ ಡಿಸೆಂಬರ್ 2025 ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ- ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ

ಇದನ್ನು ಮಿಸ್‌ ಮಾಡದೇ ಓದಿ : ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರನಿಗೆ ಚಾಕು ಇರಿತ

ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‌ಇ ಅಡಿ ಇನ್ನು ನೋಂದಣಿಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಇರುವ ಅವಧಿಯನ್ನು ಜ.31 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‌ಐಸಿ ಪೋರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು.
ಈ ಯೋಜನೆಯಿಂದ ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಯ ಬೇಡಿಕೆಯಿಲ್ಲದೆ ನೋಂದಣಿಗೆ ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ.

ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬದ್ಧಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದಲ್ಲದೇ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ಗುತ್ತಿಗೆ ವಲಯದ ಕಾರ್ಮಿಕರು ಇಎಸ್‌ಐ ಕಾಯ್ದೆಯಡಿ ದೊರೆಯುವ ಅಗತ್ಯ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ. ಇದರೊಂದಿಗೆ ಇಎಸ್‌ಐಸಿಯು ಅಗತ್ಯ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತದ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ESIC : Registration allowed till Jan. 31