ನೌಕರರೇ ಗಮನಿಸಿ : ಇನ್ಮುಂದೆ ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವುದು ಮಸ್ಟ್

vidhana soudha

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಆಡಳಿತ ವ್ಯವಸ್ಥೆಯಲ್ಲಿ ಡಿಜಿಟಲ್ ಕ್ರಾಂತಿ ಮುಂದುವರಿಸಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಾಜರಾತಿ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಅಂದ ಹಾಗೇ ಇನ್ನು ಮುಂದೆ ಸಚಿವಾಲಯದ ಎಲ್ಲಾ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳ ನೌಕರರು ಕಚೇರಿಗೆ ಬಂದ ಕೂಡಲೇ ಬಯೋಮೆಟ್ರಿಕ್ ಯಂತ್ರ ಹುಡುಕುವಂತಿಲ್ಲ; ಬದಲಾಗಿ ತಮ್ಮ ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸಬೇಕಿದೆ ಅಂತ ತಿಳಿಸಿದೆ.

ಇದನ್ನು ಮಿಸ್‌ ಮಾಡದೇ ಓದಿ : ದ್ವಿತೀಯ ಪಿ.ಯು.ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಕಾಂತಾರ ದೈವದ ಕುರಿತು ಹೇಳಿಕೆ: ಕ್ರಿಮಿನಲ್ ಕೇಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ರಣವೀರ್ ಸಿಂಗ್

KAAMS ಅಪ್ಲಿಕೇಶನ್ ಈಗ ಕಡ್ಡಾಯ : ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಹೊರಡಿಸಿರುವ ನೂತನ ಆದೇಶದಂತೆ, ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಮೊಬೈಲ್ ಆಪ್ ಮೂಲಕ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಹೊಸ ನಿಯಮದ ಪ್ರಮುಖ ಅಂಶಗಳು:

ಬಯೋಮೆಟ್ರಿಕ್‌ಗೆ ವಿದಾಯ: ಪ್ರಸ್ತುತ ಕಚೇರಿಗಳಲ್ಲಿರುವ ಹಳೆಯ ಬಯೋಮೆಟ್ರಿಕ್ ಯಂತ್ರಗಳ ನಿರ್ವಹಣಾ ಅವಧಿ ಮುಗಿದಿರುವುದರಿಂದ, ಸರ್ಕಾರ ಈ ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.

ಯಾರಿಗೆ ಅನ್ವಯ: ಸಚಿವಾಲಯದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ನಿಗಮಗಳು ಮತ್ತು ಮಂಡಳಿಗಳ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಈ ನಿಯಮ ಪಾಲಿಸಬೇಕು.

ಡೌನ್‌ಲೋಡ್ ಹೇಗೆ: ನೌಕರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ‘Google Play Store’ ಅಥವಾ ‘Apple App Store’ ನಿಂದ KAAMS ಆಪ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು.

ಪಾರದರ್ಶಕತೆ ಮತ್ತು ದಕ್ಷತೆಗೆ ಆದ್ಯತೆ : ಹಾಜರಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಮತ್ತು ಎಲ್ಲಾ ಸಿಬ್ಬಂದಿಗಳು ವಿಳಂಬ ಮಾಡದೆ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಹೊಸ ತಂತ್ರಜ್ಞಾನದ ಬಳಕೆಯಿಂದ ನೌಕರರು ಕಚೇರಿಯ ಆವರಣದೊಳಗೆ ಬಂದ ತಕ್ಷಣ ಸುಲಭವಾಗಿ ತಮ್ಮ ಹಾಜರಾತಿಯನ್ನು ಗುರುತಿಸಲು ಸಾಧ್ಯವಾಗಲಿದ್ದು, ಆಡಳಿತಾತ್ಮಕ ವಿಳಂಬಕ್ಕೆ ಇದು ಬ್ರೇಕ್ ಹಾಕಲಿದೆ ಎಂದು ಸರ್ಕಾರ ಆಶಿಸಿದೆ.