ಬೆಂಗಳೂರು: ರಾಜಕೀಯ ಚರ್ಚೆ, ಮಾತುಕತೆ ನಡುವೆ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಸದಾಶಿವನಗರದಲ್ಲಿರವ ಅವರ ನಿವಾಸದಲ್ಲಿ ಇಂದು ಚಿಕ್ಕನಾಯಕನಹಳ್ಳಿಯ ಹಂದನಕೆರೆಯ ಅಜ್ಜಯ್ಯನ ಗದ್ದುಗೆ ಆಗಮಿಸಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ಅವರ ನಿವಾಸಕ್ಕೆ ಅಜ್ಜಯ್ಯನ ಗದ್ದುಗೆ ಆಗಮಿಸಿದ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ಅವರ ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಈ ನಡುವೆ ಕೆಲವು ದಿನಗಳ ಹಿಂದೆ . ಹಾಸನ ಜಿಲ್ಲೆ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿತ್ತು. ಆಗ ಡಿಕೆಶಿವಕುಮಾರ್ ಅವರು ಕುಟುಂಬ ಸಮೇತ ನಿವಾಸದ ಒಳಗೆ ವಿಶೇಷ ಪೂಜೆ ನೇರವಿಸಿದ್ದರು.
ಇದನ್ನು ಮಿಸ್ ಮಾಡದೇ ಓದಿ: ಕೆಪಿಎಸ್‍ಸಿಯಿಂದ ಭೂಮಾಮಾಪಕರ ಹುದ್ದೆಗಳ ಅಧಿಸೂಚನೆ ರದ್ದು
ಇದನ್ನು ಮಿಸ್ ಮಾಡದೇ ಓದಿ: ಕಾರು ಅಪಘಾತದಲ್ಲಿ ‘IAS ಅಧಿಕಾರಿ ಮಹಾಂತೇಶ್ ಬೀಳಗಿ’ ದುರ್ಮರಣ

ಡಿಕೆ ಶಿವಕುಮಾರ್ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಮೊರೆಹೋಗಿದ್ದಾರು. ಜುಲೈ 26 ಕ್ಕೆ ಸಿದ್ದೇಶ್ವರ ಸನ್ನಿಧಾನಕ್ಕೆ ಡಿಕೆಶಿ ಭೇಟಿ ನೀಡಿದ್ದರು. ಹರಕೆ ಸಲ್ಲಿಸಿ ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದ ಡಿಸಿಎಂ ಡಿಕೆಶಿ ಪ್ರಾರ್ಥನೆ ಮಾಡಿದ್ದ ಬಳಿಕ ಅವರ ಮನೆಗೆ ಹಾಸನ ಜಿಲ್ಲೆ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದ ಹಿನ್ನಲೆಯಲ್ಲಿ ಅಂದು ಅವರು ಪೂಜೆ ಸಲ್ಲಿಸಿದ್ದರು.

ಈ ನಡುವೆ ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ರಾಹುಲ್ ಗಾಂಧಿ ಬೇಜಾರು ಆಗಿದ್ದಾರೆ ಎನ್ನಲಾಗಿದೆ. ಬಿಹಾರ ವಿಧಾನಸಭೆಯಲ್ಲಿ ಹೀನಾಯ ಸೋಲಿನಿಂದ ಮನಸ್ಸು ಕೆಡಿಸಿಕೊಂಡಿರುವ ರಾಹುಲ್ ಗಾಂಧಿ ತಮ್ಮ ಆಪ್ತರ ಬಳಿ ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ರಾಹುಲ್ ಗಾಂಧಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
Amidst political discussions and negotiations, DK Shivakumar has gone to God. It is said that he has reached the seat of his grandfather, Ajjayya, in Handanakere, Chikkanayakanahalli, today at his residence in Sadashivanagara.













Follow Me