ದಾವಣಗೆರೆ : ಬೆಳಗಿನ ಜಾವವೇ ಸಂಭವಿಸಿದ ದುರಂತ; 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

A tragic incident in Davangere in the early hours of the morning A 15-year-old boy suffers a sudden heart attack!

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಹಂಗಿಲ್ಲದೆ ಹೃದಯಾಘಾತ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಇಂತಹದ್ದೇ ಒಂದು ಮನಕಲಕುವ ಘಟನೆ ನಡೆದಿದ್ದು, 15 ವರ್ಷದ ಶಾಲಾ ಬಾಲಕನೊಬ್ಬ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.

ಇದನ್ನು ಮಿಸ್‌ ಮಾಡದೇ ಓದಿ : ಶಿವಮೊಗ್ಗದಲ್ಲಿ ದಾರುಣ ಅಂತ್ಯ : ಜಗಳ ಬಿಡಿಸಲು ಹೋದ SSLC ವಿದ್ಯಾರ್ಥಿ ಹಲ್ಲೆಗೆ ಬಲಿ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಜಾರ್ಖಂಡ್‌ನಲ್ಲಿ ಘೋರ ದುರಂತ : ಏರ್ ಅಂಬುಲೆನ್ಸ್ ಪತನ, ರೋಗಿ ಸೇರಿ ಏಳು ಮಂದಿ ಸಾವು

ಘಟನೆಯ ವಿವರ: ಜಗಳೂರು ತಾಲೂಕಿನ ಗೋಗುದ್ದು ಗ್ರಾಮದ ಮುಜಾಮಿಲ್ (15) ಮೃತಪಟ್ಟ ದುರ್ದೈವಿ. ಈತ ಗ್ರಾಮದ ಚಮನ್ ಸಾಬ್ ಹಾಗೂ ಫಾತೀಮಾ ದಂಪತಿಯ ಎರಡನೇ ಪುತ್ರನಾಗಿದ್ದು, ಹನುಮಂತಪುರ ಗ್ರಾಮದ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

heart attack
heart attack

ನಡೆದಿದ್ದೇನು: ಶಾಲೆಗೆ ರಜೆ ಇದ್ದ ಕಾರಣ ಮುಜಾಮಿಲ್ ತನ್ನ ಸ್ವಗ್ರಾಮಕ್ಕೆ ಬಂದಿದ್ದ. ಬೆಳಗಿನ ಜಾವ ಬಹಿರ್ದೆಸೆಗೆಂದು ಹೊರಗೆ ಹೋಗಿದ್ದ ಸಮಯದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಪೋಷಕರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ, ಮಾರ್ಗಮಧ್ಯೆಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಪೋಷಕರ ಆಕ್ರಂದನ: ಬೆಳೆಯುವ ಸಿರಿ ಎನ್ನಬೇಕಾದ ಮಗ ಕಣ್ಣೆದುರೇ ಮೃತಪಟ್ಟಿರುವುದು ಪೋಷಕರಿಗೆ ದಿಕ್ಕುತೋಚದಂತೆ ಮಾಡಿದೆ. ಮಗನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಕುರಿತು ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Davangere: Tragedy occurred early in the morning; Class 9 student died of heart attack