ಬೆಂಗಳೂರು: ಸದ್ಯ ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು, ಒಂದು ಕಡೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನು ಮತ್ತೊಂದು ಕಡೆ ಇಕ್ಬಾಲ್ ಹುಸೇನ್ ಜನವರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನೋಡಿದಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: BSF ಟ್ರೇಡ್ಸ್‌ಮ್ಯಾನ್ ಪ್ರವೇಶ ಹಾಲ್ ಟಿಕೇಟ್ ಬಿಡುಗಡೆ, ಹೀಗೆ ಡೌನ್‌ಲೋಡ್ ಮಾಡಿ…!
ಇದರ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರೇ ಕರ್ನಾಟಕದ ನೆಕ್ಸ್ಟ್ ಸಿಎಂ ಎಂದು ಹಲವು ಪೋಸ್ಟ್ಗಳು ಹರಿದಾಡುತ್ತಿವೆ. ಹೌದು ಒಂದು ಕಡೆ ರಾಜ್ಯಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ ಮತ್ತೊಂದು ಕಡೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರಿಗೆ ಸಿಎಂ ವೇಷ ತುದಿಸಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗು ರೀಲ್ಸ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ d_boss_club_koppala_2 ಎನ್ನುವ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಒಂದು ರೂಲ್ಸ್ ಅಭಿಮಾನಿಗಳು ಹರಿಬಿಟ್ಟಿದ್ದಾರೆ. ಆದರೆ ಈ ಒಂದು ಪೋಸ್ಟ್ AI ನಿಂದ ರಚನೆ ಮಾಡಿದ್ದು ಬೆಂಗಳೂರಿನ ವಿಧಾನಸೌಧದ ಮುಂದೆ ದರ್ಶನ್ ಪಂಚೆ ಶರ್ಟ್ ತೊಟ್ಟು ಸಿಎಂ ನಂತೆ ಪೋಸ್ ಕೊಡುವ ರೀತಿ ಎಡಿಟ್ ಮಾಡಲಾಗಿದೆ. ಹಿಂದೆಯೂ ಕೂಡ AI ಮುಖಾಂತರ ನಟ ಸುದೀಪ್ ಹಾಗೂ ಯಶ್ ಅವರು ದರ್ಶನಿಗೆ ಜೈಲಿಗೆ ಊಟ ಕೊಡುವ ಹಾಗೆ ಹಾಗೂ ಅವರನ್ನು ಜಲಿನಿಂದ ತಪ್ಪಿಸಿಕೊಳ್ಳುವ ಹಾಗೆ ಎಡಿಟ್ ಮಾಡಿ ವಿಡಿಯೋ ಒಂದನ್ನು ಅಭಿಮಾನಿಗಳು ರಚಿಸಿದ್ದರು.
Actor Darshan, the CM of Karnataka, this post is going viral…!












Follow Me