ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದಿಂದ ಅಧಿಸೂಚಿಸಲಾಗಿದ್ದ ಉಳಿಕೆ ಮೂಲ ವೃಂದದಡಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶು ವೈದ್ಯಾಧಿಕಾರಿಗಳು – 342 + 58 (ಬ್ಯಾ.ಲಾ) ಹುದ್ದೆಗಳಿಗೆ 2026 ನೇ ಜನವರಿ 8 ರಂದು ಕನ್ನಡ ಭಾಷ ಪರೀಕ್ಷೆ ಮತ್ತು 2026 ನೇ ಜನವರಿ 9 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

ಪರೀಕ್ಷಾ ವೇಳಾಪಟ್ಟಿಯನ್ನು ಆಯೋಗದ ವೆಬ್‍ಸೈಟ್ https://kpsc.kar.nic.in ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ ಅನ್ನು ನೋಡಬಹುದಾಗಿದೆ ಕರ್ನಾಟಕ ಲೋಕಸೇವಾ ಆಯೋದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Competitive examination for the posts of Veterinary Officer in the Fisheries Department













Follow Me