ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಳಿ ಸಿಲುಕಿರುವ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡುತ್ತಾ, ಬಿಜೆಪಿಯವರು ಬೇರೆ ಪಕ್ಷದವರ ಮೇಲೆ ಲಂಚದ ಆರೋಪವನ್ನು ಸುಲಭವಾಗಿ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಶಾಸಕರೇ ಲಂಚದ ಆರೋಪದಲ್ಲಿ ಸಿಲುಕಿದ್ದಾರೆ. ಲೋಕಾಯುಕ್ತರ ತನಿಖೆ ನಡೆಯಲಿ ಎಂದು ತಿಳಿಸಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಇಂದು ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾಗಂಗೋತ್ರಿ ಹಾಗೂ ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಹೊನ್ನಾರು ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Siddaramaiah
Siddaramaiah

ಇಂದಿನಿಂದ 26 ರ ವರೆಗೆ ಕಲಾಸಕ್ತರಿಗೆ ನಾಟಕಗಳನ್ನು ವೀಕ್ಷಿಸುವ ಸದವಕಾಶ ದೊರೆತಿದೆ. ನಾಟಕ ತಂಡಗಳು ಐವತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ರಂಗೋತ್ಸವ ಅತ್ಯಂತ ಸೂಕ್ತವಾಗಿದೆ ಎಂದರು.

ಉಮಾಶ್ರೀ, ಪ್ರಕಾಶ್ ರಾಜ್ ಸೇರಿದಂತೆ ಬಹುತೇಕ ರಂಗಭೂಮಿಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ನಟನೆ ಎಲ್ಲರಿಗೂ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂದೇಶಗಳುಳ್ಳ ಸಿನಿಮಾಗಳು ವಿರಳ : ಹಿಂದಿನ ಕಾಲದ ಸಿನಿಮಾಗಳಲ್ಲಿ ಸಂದೇಶಗಳಿರುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಸಮಾಜಕ್ಕೆ ಸಂದೇಶಗಳುಳ್ಳ ಸಿನಿಮಾಗಳು ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತಾಗಿದೆ ಎಂದರು.

ರಂಗಭೂಮಿ ಹಿನ್ನೆಲೆಯ ಕಲಾವಿದರು ಹೆಚ್ಚು ಪಳಗಿರುತ್ತಾರಲ್ಲದೆ ಜನಪ್ರಿಯರೂ ಆಗಿರುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀ, ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರಾಜ್, ಹಿರಿಯ ಕಲಾವಿದರಾದ ದತ್ತಣ್ಣ, ಗಿರಿಜಾ ಲೋಕೇಶ್, ನಟ, ನಿರ್ದೇಶಕ ಟಿ. ಎಸ್ ನಾಗಾಭರಣ, ಹೊನ್ನಾರು ರಂಗೋತ್ಸವ ಸಂಚಾಲಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದರು.

It is the BJP who blames others who have been accused of bribery – Chief Minister Siddaramaiah