ಬಳ್ಳಾರಿ: ಪ್ರಸ್ತಕ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದಯೋಜನೆಯ (Prime Minister’s Fisheries Scheme) ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಫಲಾನುಭವಿ ಆಧಾರಿತ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
*ಅರ್ಹ ತಾಲ್ಲೂಕುಗಳ ಗ್ರಾಮಗಳು:*
ಕಂಪ್ಲಿ: ತಾಲ್ಲೂಕಿನ ಉಪ್ಪಾರಹಳ್ಳಿ, ಬೆಳುಗೋಡುಹಾಳು, ಸಣಾಪುರ, ಮುದ್ದಾಪುರ-02, ಮುದ್ದಾಪುರ-10, ರಾಮಸಾಗರ, ಕಣವಿ ತಿಮ್ಮಲಾಪುರ, ದೇವಸಮುದ್ರ, ಚಿಕ್ಕ ಜಾಯಿಗನೂರು, ಹಿರೇ ಜಾಗನೂರು, ಹಂಪದೇವನಹಳ್ಳಿ, ಜವುಕು, ಮೆಟ್ರಿ, ದೇವಲಾಪುರ, ಸುಗ್ಗೇನಹಳ್ಳಿ, ಸೋಮಲಾಪುರ, ಮಾವಿನಹಳ್ಳಿ, ಹೊನ್ನಳ್ಳಿ, ನೆಲ್ಲುಡಿ, ಕೊಟ್ಟಾಲ್ ಕ್ಯಾಂಪ್, ಎಮ್ಮಿಗನೂರು.
ಬಳ್ಳಾರಿ: ತಾಲ್ಲೂಕಿನ ಹಿರೇಹಡ್ಲಿಗಿ, ಬಸರಕೋಡು, ಸಿಂಧುವಾಳ, ಎರ್ರಿಗುಡಿ, ತಂಬ್ರಹಳ್ಳಿ, ಬ್ಯಾಲಚಿಂತೆ, ಮೀನಹಳ್ಳಿ, ಪರಮದೇವನಹಳ್ಳಿ, ಕುಂಟನಹಾಳು, ಬುರನಾಯಕನಹಳ್ಳಿ.
ಕುರುಗೋಡು: ತಾಲ್ಲೂಕಿನ ಮುಷ್ಟಗಟ್ಟ, ಕೆರೆಕೆರೆ, ಸೋಮಲಾಪುರ ಮತ್ತು ಸಿರುಗುಪ್ಪ ತಾಲ್ಲೂಕಿನ ಹಳೆಕೋಟೆ, ಕರ್ಚಿಗನೂರು, ಸಾಲಿಗನೂರು, ಅಕ್ಕತಂಗಿರಹಾಳು, ಮಿಟ್ಟೆಸುಗೂರು.

ಸಂಡೂರು: ತಾಲ್ಲೂಕಿನ ಮಲ್ಲಾಪುರ-72, ಹುಲಿಕುಂಟ-73, ಹಿರೇಕೇರಿಯಗಿನಹಳ್ಳಿ, ಅಂಕಮ್ಮನಹಾಳ್, ತೊಣಸಿಗೆರೆ, ಕನಕಪುರ -ಬಿ.ಸಿ, ಯರ್ರಯ್ಯನಹಳ್ಳಿ, ಅಗ್ರಹಾರ, ಎಸ್.ಹೆಚ್.ಆರ್.ಒ. ಓಬಳಾಪುರ, ದೇವರ ಬೂದೇನಹಳ್ಳಿ, ಸಿದ್ದಾಪುರ, ಮುರಾರಿಪುರ, ನರಸಿಂಗಪುರ, ವಿಠ್ಠಲನಗರ, ಲಿಂಗದಹಳ್ಳಿ, ಮಾಲಾಪುರ, ತುಮಟಿ, ರಾಜಪುರ, ರಾಮಸಾಗರ, ಲಕ್ಕಲಹಳ್ಳಿ, ಗ್ರಾಮಗಳಿಂದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಂದ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಜೀವಂತ ಮೀನು ಮಾರಾಟ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.90 ರಷ್ಟು ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಡಿ.20 ಕೊನೆಯ ದಿನವಾಗಿದ್ದು, ಸಂಬAಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಮತ್ತು ಕುರುಗೋಡು ತಾಲ್ಲೂಕುಗಳಿಗೆ ಸಂಬAಧಿಸಿದAತೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ (ಮೊ.7406508971), ಸಂಡೂರು ತಾಲ್ಲೂಕಿಗೆ ಸಂಬAಧಿಸಿದAತೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಡೂರು (ಮೊ.7204911897) ಮತ್ತು ಮೀನುಗಾರಿಕೆ ಉಪನಿರ್ದೇಶಕರ ಕಚೇರಿ (ಮೊ.9449593156) ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Applications invited for subsidy under the Prime Minister’s Fisheries Scheme












Follow Me