ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ವಸತಿ ಸಹಿತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ವಸತಿ ಸಹಿತ ಪೊಲೀಸ್ ಸಬ್-ಇನ್ಸೆಕ್ಟರ್(PSI) ಆಯ್ಕೆ ಪೂರ್ವ ತರಬೇತಿಯನ್ನು 75 ದಿನಗಳ ಅವಧಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶಿಷ್ಯವೇತನ, ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ರೀತಿಯ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ನಿಗದಿತ ತರಬೇತಿ ಕೇಂದ್ರದಲ್ಲಿಯೇ ಇದ್ದು, ಸದರಿ ತರಬೇತಿಯನ್ನು ಪಡೆಯುವುದು.
ಇದನ್ನು ಮಿಸ್ ಮಾಡದೇ ಓದಿ : ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಸ್ಟಿರಬೇಕು..? ಇಲ್ಲಿದೆ ಮಾಹಿತಿ
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ ಪೊಲೀಸ್ ಸಬ್ -ಇನ್ಸೆಕ್ಟರ್(PSI) ಆಯ್ಕೆ ಪೂರ್ವ ತರಬೇತಿಯನ್ನು ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಮಾತ್ರ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಸ್ವಾಮ್ಯತೆಗೆ 3. ಕೇಂದ್ರ/ರಾಜ್ಯ ಸರ್ಕಾರದ/ಅನುದಾನಿತ ಸಂಸ್ಥೆಗಳ/ಸಾರ್ವಜನಿಕ ಒಳಪಟ್ಟ ಸಂಸ್ಥೆಗಳಲ್ಲಿನ ನೌಕರರು ಸದರಿ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಮತ್ತು ತರಬೇತಿ ಪಡೆಯಲು ಅರ್ಹರಿರುವುದಿಲ್ಲ.
- ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಸಾಮಾನ್ಯ ಅರ್ಹತೆಗಳು

a) ರಾಜ್ಯದ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2(ಎ), 3(ಎ) ಅಥವಾ 3(ಬಿ) ಗಳಿಗೆ ಸೇರಿರಬೇಕು. ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ – ರೂ.8.00 ಲಕ್ಷಗಳು.
b) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
c) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಎತ್ತರ, ತೂಕ, ಎದೆಯ ಸುತ್ತಳತೆಗಳು ಕರ್ನಾಟಕ ಪೊಲೀಸ್ ಸೇವೆಗಳ ನೇಮಕಾತಿ ಪ್ರಾಧಿಕಾರ ನಿಗದಿಪಡಿಸಿರುವಂತೆ ಇರಬೇಕು.
d) ವಿದ್ಯಾರ್ಹತೆ- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
e) ವಯೋಮಿತಿ (13.02.2026ಕ್ಕೆ ಅನ್ವಯಿಸುವಂತೆ):
ಕನಿಷ್ಠ ವಯಸ್ಸು: 21 ವರ್ಷ.
ಗರಿಷ್ಠ ವಯಸ್ಸು: 27 ವರ್ಷ.
ಅಭ್ಯರ್ಥಿಯ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರವನ್ನು jpg/JPEG format ನಲ್ಲಿ upload ಮಾಡಬೇಕು (300 KB ಒಳಗಡೆ ಇರುವಂತೆ).
ದಾಖಲೆಗಳನ್ನು pdf format ನಲ್ಲಿ upload ಮಾಡಬೇಕು (300 KB ಒಳಗಡೆ ಇರುವಂತೆ).
ಅಂತಿಮವಾಗಿ ಅರ್ಜಿಯನ್ನು submit ಮಾಡುವ ಮುನ್ನ ಎಲ್ಲಾ ಅಂಶಗಳು ಸರಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಖಚಿತ ಪಡಿಸಿಕೊಳ್ಳಬೇಕು. ಸರಿಯಾದ ಮಾಹಿತಿ ನೀಡದ/ಅಪೂರ್ಣ ಇರುವ ಅರ್ಜಿಗಳು/ದಾಖಲೆಗಳನ್ನು ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಯು ತಪ್ಪು ಮಾಹಿತಿ ನೀಡಿರುವುದು/ಅನರ್ಹ ಅಭ್ಯರ್ಥಿಯೆಂದು ಯಾವುದೇ ಹಂತದಲ್ಲಿ ಕಂಡು ಬಂದಲ್ಲಿ, ಅಂತಹ ಅಭ್ಯರ್ಥಿಯ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.
ಅರ್ಜಿಯನ್ನು ಒಮ್ಮೆ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿಯನ್ನು ಸಲ್ಲಿಸಿದ ನಂತರ edit ಅಥವಾ delete option ಗೆ ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಿದ ನಂತರ, ಅರ್ಜಿಯ ಪ್ರತಿಯನ್ನು Print ತೆಗೆದುಕೊಂಡು ಅಭ್ಯರ್ಥಿಗಳು ತಮ್ಮ ಬಳಿ ಇಟ್ಟುಕೊಳ್ಳುವುದು ಮತ್ತು ಇಲಾಖೆಯಿಂದ ಕೋರಿದಾಗ ಅದರ ಪ್ರತಿ ಸಲ್ಲಿಸುವುದು.
ಸದರಿ ವಸತಿ ಸಹಿತ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಆಯ್ಕೆ ಪೂರ್ವ ತರಬೇತಿಯನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನೀಡಲಾಗುವುದು. ಅಭ್ಯರ್ಥಿಗಳು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸುವುದು. ಭೌತಿಕ ಗುರಿಯು ಪ್ರತಿ ವಿಭಾಗಕ್ಕೆ ಗರಿಷ್ಠ 390 ಆಗಿರುತ್ತದೆ.
a) ಪುರುಷ ಅಭ್ಯರ್ಥಿಗಳಿಗೆ: ತರಬೇತಿಯನ್ನು ಬೆಂಗಳೂರು ನಗರ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ನೀಡಲಾಗುವುದು. ಅರ್ಜಿ ಸಲ್ಲಿಸುವಾಗ ಈ 3 ವಿಭಾಗಗಳಲ್ಲಿ ಯಾವುದರಲ್ಲಿ ಬೇಕು ಎಂಬ ಆದ್ಯತೆಯನ್ನು ನೀಡುವುದು. ಅಭ್ಯರ್ಥಿಗಳು ಪದವಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಮೆರಿಟ್ ಮತ್ತು ಆದ್ಯತೆ ಆಧಾರದ ಮೇಲೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಲಾಗುವುದು.

b) ಮಹಿಳಾ ಅಭ್ಯರ್ಥಿಗಳಿಗೆ: ಮೈಸೂರು ವಿಭಾಗದಲ್ಲಿ ಮಾತ್ರ ತರಬೇತಿಯನ್ನು ನೀಡಲಾಗುವುದು. ಬೇರೆ ವಿಭಾಗದಲ್ಲಿ ಅವಕಾಶವಿರುವುದಿಲ್ಲ. ಪದವಿಯ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಸದರಿ ಪರೀಕ್ಷಾ ಪೂರ್ವ ತರಬೇತಿಯ ಅವಧಿಯು ಅಂದಾಜು 75 ದಿನಗಳದ್ದಾಗಿದ್ದು, ಒಂದು ವೇಳೆ ತರಬೇತಿಯ ಅವಧಿಯನ್ನು ಇಲಾಖಾವತಿಯಿಂದ ವಿಸ್ತರಿಸಿದಲ್ಲಿ, ಆ ಅವಧಿಗೂ ಅಭ್ಯರ್ಥಿಗಳು ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಆಯ್ಕೆ ಪ್ರಕ್ರಿಯೆ:
a) ಪ್ರವರ್ಗವಾರು ಮೀಸಲಾತಿ: ಪ್ರವರ್ಗ-1 (15%), 2ಎ (53%), 3ಎ (15%), 3ಬಿ (17%).
b) ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಯನ್ನು ಪದವಿಯ ಅಂಕಗಳು, ಪ್ರವರ್ಗ ಮತ್ತು ವಯೋಮಿತಿಯನ್ನು ಅನುಸರಿಸಿ ಮಾಡಲಾಗುವುದು.
c) ಅಂತಿಮವಾಗಿ ಎತ್ತರ, ತೂಕ, ಎದೆಯ ಸುತ್ತಳತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳು ಈ ತರಬೇತಿಯನ್ನು ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿರುತ್ತದೆ.
ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.02.2026
ಸಹಾಯವಾಣಿ: 8050770004 (ಸಮಯ ಬೆಳಿಗ್ಗೆ 10.00 ರಿಂದ ಸಂಜೆ 5.30ರ ವರೆಗೆ, ರಜಾ ದಿನಗಳನ್ನು ಹೊರತುಪಡಿಸಿ
Applications invited for PSI pre-selection training