ಶಿವಮೊಗ್ಗ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಜನರಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಟ ದರ್ಶನ್ ಹುಟ್ಟು ಹಬ್ಬದಂದು ಪವಿತ್ರಾ ಗೌಡಗೆ ಬಿಗ್ ಶಾಕ್ : ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ
ramadan 2026 : ರಂಜಾನ್ ಉಪವಾಸ ಯಾವಾಗ ಶುರು
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಅಲೆಮಾರಿ/ಅರೆಅಲೆಮಾರಿ ಸಮುದಾಯ,, ಒಕ್ಕಲಿಗೆ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪಜಾತಿ ಸಮುದಾಯಗಳನ್ನು ಹೊರತುಪಡಿಸಿ ಮಡಿವಾಳ ಮಾಚಿದೇವ ಸಮುದಾಯಕ್ಕೆ ಮಾತ್ರ ಸೇರಿದವರಾಗಿರಬೇಕು.ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಕುಟುಂಬದ ವಾರ್ಷಿಕ ವರಮಾನ 3.00 ಲಕ್ಷಗಳ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರು ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು.

ಆಸಕ್ತರು ಸೇವಾಸಿಂಧು ಪೋರ್ಟಲ್ http://sevasindhukarnataka.gov.in ನ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಆನ್‌ಲೈನ್ ಮೂಲಕ ಮಾರ್ಚ್ 6 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದರೆ. ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://kmmdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ಥೆ, ಕೆ.ಇ.ಬಿ. ಸರ್ಕಲ್ ಹತ್ತಿರ,ಶಿವಮೊಗ್ಗ. ದೂ,ಸಂ: 08182-229634 ನ್ನು ಸಂಪರ್ಕಿಸುವುದು
Applications are invited from Madiwala Machideva Development Corporation to avail subsidy under the Food Channel Scheme.