ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Pradhan Mantri Krishi Sinchai Yojana

ಶಿವಮೊಗ್ಗ : 2025-26ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಲ್ಲಾ ವರ್ಗಗಳ ಆಸಕ್ತ ರೈತರಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ.

ಇದನ್ನು ಮಿಸ್‌ ಮಾಡದೇ ಓದಿ : ಈ ದಿಕ್ಕಿನಲ್ಲಿ ಪೂರ್ವಜರು ಫೋಟೋ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ಪಿತೃ ದೋಷ ಅಂಟುವುದು ಖಚಿತ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಈ ಯೋಜನೆಯಡಿ 5 ಎಕರೆವರೆಗಿನ ಪ್ರದೇಶಕ್ಕೆ ಶೇಕಡಾ 90% ರಷ್ಟು ಸಹಾಯಧನ ಹಾಗೂ ಮೇಲ್ಪಟ್ಟ ಪ್ರದೇಶಕ್ಕೆ ಶೇಕಡಾ 45% ರ ದರದಂತೆ ಸಹಾಯಧನವನ್ನು ಒಟ್ಟಾರೆ ಗರಿಷ್ಠ 12.50 ಎಕರೆ ಪ್ರದೇಶದವರೆಗೆ ನೀಡಲು ಅವಕಾಶವಿದ್ದು, ಈಗಾಗಲೇ 7 ವರ್ಷಗಳ ಹಿಂದೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯಧನ ಪಡೆದಿರುವ ರೈತರು ಅವುಗಳು ಹಾಳಾಗಿದ್ದಲ್ಲಿ ಪುನಃ ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡಲ್ಲಿ ಅವರೂ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಸಹಾಯಧನವನ್ನು ಯೋಜನೆಯ ಮಾರ್ಗಸೂಚಿ ಹಾಗೂ ಅನುದಾನ ಲಭ್ಯತೆ ಮತ್ತು ಜೇಷ್ಠತೆಯ ಅನುಸಾರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ/ತಾಲೂಕು ಮಟ್ಟದ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸುವAತೆ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Application Invitation for Subsidy under Agricultural Irrigation Scheme

ಕಾಣೆಯಾಗಿದ್ದಾರೆ : ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳAದು ನಾಲ್ವರು ಕಾಣೆಯಾಗಿದ್ದು, ವಿವರ ಕೆಳಕಂಡAತಿವೆ.

ನಗರದ ಹೊಸಮನೆ ಬಲಭಾಗದ 2ನೇ ಕ್ರಾಸ್ ವಾಸಿ ಸ್ವಾಮಿ ಎಂಬುವವರ ತಮ್ಮ ಶಿವು ಜಿ. ಬಿನ್ ಗಂಗಾ ಭೋವಿ ಎಂಬ 29 ವರ್ಷದ ವ್ಯಕ್ತಿ ಮೇ 2025 ರಲ್ಲಿ ಮನೆಯಿಂದ ಜೆಸಿಬಿ ಡ್ರೆöÊವರ್ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.

ನಗರದ ಬಸವನಗಂಗೂರು ವಾಸಿ ಹಾಲೇಶಪ್ಪ ಎಂಬುವವರ ಮಗ ನ್ಯೂಮಂಡ್ಲಿ ವಾಸಿ ಲೋಹಿತ ಎಂಬ 36 ವರ್ಷದ ವ್ಯಕ್ತಿ ಆಗಸ್ಟ್ 2025 ರಲ್ಲಿ ಟೈಲ್ಸ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.

ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಹತ್ತಿರ ಶ್ರೀ ಮಲ್ಲಿಕಾರ್ಜುನ ನಿಲಯ, ಇ ಬ್ಲಾಕ್ ವಾಸಿ ಬಿ.ಎಂ. ಸಿದ್ದಯ್ಯ ಬಿನ್ ಮಲ್ಲಯ್ಯ ಎಂಬ 64 ವರ್ಷದ ವ್ಯಕ್ತಿ ಫೆಬ್ರವರಿ 2025ರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.3 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.

ಗಾಡಿಕೊಪ್ಪ ಗಂಧರ್ವ ಬಾರ್ ಹಿಂಭಾಗ ವಾಸಿ ಸಚಿನ್ ಈ ಬಿನ್ ಈಶ್ವರ ಎಂ. ಹೆಚ್. ಎಂಬ 19 ವರ್ಷದ ಯುವಕ ಸೆಪ್ಟಂಬರ್ 2024 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ದುಂಡುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ

ಈ ಮೇಲ್ಕಂಡ 4 ಜನ ವ್ಯಕ್ತಿಗಳ ಸುಳಿವು ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ನಂ.: 100 ಅಥವಾ ದೂ.ಸಂ.: 08182-261400 261424/ 9480803308/ 9480803373 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.