ಬೆಂಗಳೂರು: ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ಯೋಜನೆಯ ಅಡಿಯಲ್ಲಿ 2.50 ಲಕ್ಷ, 3 ಲಕ್ಷ ಪ್ರೋತ್ಸಾಹಧನಕ್ಕೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಯಾರಿಗೆಲ್ಲ ಪ್ರೋತ್ಸಾಹಧನ? ಎಷ್ಟು ನೀಡಲಾಗುತ್ತೆ ಗೊತ್ತಾ?
ಪರಿಶಿಷ್ಟ ಜಾತಿ ಯುವಕರು ಇತರೆ ಜಾತಿಯ ಯುವತಿಯರನ್ನು ವಿವಾಹವಾದಲ್ಲಿ, ಅಂತಹ ದಂಪತಿಗಳಿಗೆ ರೂ.2.50 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಯುವತಿಯರು ಇತರೆ ಜಾತಿಯ ಯುವಕರನ್ನು ವಿವಾಹವಾದಲ್ಲಿ, ಅಂತಹ ದಂತಿಗಳಿಗೆ ರೂ.3 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ: ಅಂತರ್ಜಾತಿ ವಿವಾಹಿತ ದಂಪತಿಗಳು ವಿವಾಹವನ್ನು ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಬೇಕು. ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಅಂತರ್ಜಾತಿ ವಿವಾಹಿತರು ಪ್ರೋತ್ಸಾಹಧನಕ್ಕಾಗಿ https://swdservices.karnataka.gov.in/swIncentive/ICM/ICMHome.aspx ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.
ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಯುವತಿಯ ವಯಸ್ಸು 18 ರಿಂದ 42 ವರ್ಷ, ಯುವಕನ ವಯಸ್ಸು 21ರಿಂದ 45 ವರ್ಷ ಆಗಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಿ.

ಶರತುಗಳು:-
1. ಪತ್ನಿ ಅಥವಾ ಪತ್ನಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಸಕ್ಷಮ ಪ್ರಾಧಿಕಾರಿಗಳಿಂದ ಜಾತಿ ಪ್ರಮಾಣ ಪತ್ರ ಪಡೆದಿರತಕ್ಕದ್ದು. ದಂಪತಿಗಳು ಕರ್ನಾಟಕ ರಾಜ್ಯದ ಖಾಯಂ ವಾಸಿಯಾಗಿರಬೇಕು. ಆದರೆ ಇತರ ರಾಜ್ಯದ ಪುರುಷ/ಮಹಿಳೆಯನ್ನು ಮದುವೆಯಾದಲ್ಲಿ ಪತಿ/ಪತ್ನಿ ಇಬ್ಬರಲ್ಲಿ ಒಬ್ಬರು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿರಬೇಕು ಮತ್ತು ಖಾಯಂ ವಾಸಿಯಾಗಿರಬೇಕು.
2. ಗುರ್ತಿಸಲ್ಪಟ್ಟ ದೇವದಾಸಿಯವರ ಮಕ್ಕಳನ್ನು ಗುರ್ತಿಸಲ್ಪಟ್ಟ ಇನ್ನೊಬ್ಬ ದೇವದಾಸಿಯವರ ಮಕ್ಕಳು ಮದುವೆ ಮಾಡಿಕೊಂಡರೆ ಪ್ರೋತ್ಸಾಹಧನ ಪಡೆಯಲು ಅರ್ಹರಿರುವುದಿಲ್ಲ.
3. ಅಂತರ್ಜಾತಿ ವಿವಾಹ, ದೇವದಾಸಿಯವರ ಮಕ್ಕಳ ವಿವಾಹ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಒಳ ಸಮುದಾಯಗಳ ವಿವಾಹ ಪ್ರಕರಣಗಳಲ್ಲಿ ಪ್ರೋತ್ಸಾಹ ಧನದಲ್ಲಿ ಶೇ.50% ರ ಮೊತ್ತವನ್ನು RTGS/NEFT ಮುಖಾಂತರ ಒಂದೇ ಕಂತಿನಲ್ಲಿ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ಜಮೆ ಮಾಡುವುದು. ಉಳಿದ ಶೇ.50%ರ ಮೊತ್ತವನ್ನು ಪತ್ನಿ-ಪತಿ ಇಬ್ಬರ ಹೆಸರಿನಲ್ಲಿ 3 ವರ್ಷಗಳ ಮುಂಚೆ ಈ ಮೊತ್ತವನ್ನು ನಗದೀಕರಿಸಿಕೊಳ್ಳಲು ಅವಕಾಶವಿರುವುದಿಲ್ಲ ಷರತ್ತಿನೊಂದಿಗೆ ಸರ್ಕಾರ/ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 3 ವರ್ಷಗಳ ಅವಧಿಗೆ ಸೀಮಿತಗೊಳಿಸಿ ನಿಶ್ಚಿತ ಠೇವಣಿಯನ್ನು (Fixed Deposit) ಇಡತಕ್ಕದ್ದು.

4. ನಿಶ್ಚಿತ ಠೇವಣಿ ಅವಧಿಯೊಳಗೆ ಪತಿ ನಿಧನರಾಗಿದ್ದಲ್ಲಿ ಪತ್ನಿ ಹೆಸರಿಗೆ ಮತ್ತು ಪತ್ನಿ ನಿಧನರಾದಲ್ಲಿ, ಮಕ್ಕಳಿದ್ದರೆ, ಅವರ ಮಕ್ಕಳ ಹೆಸರಿಗೆ ವರ್ಗಾಯಿಸುವುದು. ಮಕ್ಕಳು ಇಲ್ಲದಿದ್ದಲ್ಲಿ ಪತಿ ಹೆಸರಿಗೆ ವರ್ಗಾಯಿಸುವುದು.
5. ಅಂತರ್ಜಾತಿ ವಿವಾಹವಾಗಿ ಈ ಸೌಲಭ್ಯ ಪಡೆಯುವ ಯುವತಿಯರ ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಠ 42 ಒಳಗಿರತಕ್ಕದ್ದು.
6. ಯುವಕರು ಕನಿಷ್ಠ 21 ವರ್ಷದಿಂದ ವಯೋಮಿತಿಯೊಳಗಿರತಕ್ಕದ್ದು. 45 ವರ್ಷ
7. ದಂಪತಿಗಳ ಒಟ್ಟಾರೆ ವಾರ್ಷಿಕ ಆದಾಯವು ರೂ. 5.00 ಲಕ್ಷಗಳ ಒಳಗಿರತಕ್ಕದ್ದು. ಈ ಕ್ರ.ಸಂ.2ರ ಸರ್ಕಾರದ ಆರ್ದೆಶದಲ್ಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್ಜಾತಿ ವಿವಾಹವಾದ ಪ್ರಕರಣಗಳಿಗೆ ಸಹ ಅನ್ವಯಿಸುತ್ತದೆ. 8. ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ww.sw.kar.nic.in ವಿಳಾಸದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನದ ಆನ್ಲೈನ್ ತಂತ್ರಾಂಶದಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸುವುದು.
9. ಎಲ್ಲಾ ಅಂತರ್ಜಾತಿ ವಿವಾಹ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಒಳ ಸಮುದಾಯಗಳ ವಿವಾಹ ಪ್ರಕರಣಗಳಲ್ಲಿ ದಂಪತಿಗಳು ಮಠ/ಮಂದಿರ ಮತ್ತು ಯಾವುದೇ ಸ್ಥಳದಲ್ಲಿ ಮದುವೆಯಾದರು. ಮದುವೆಯಾದ ದಿನದಿಂದ 18 ತಿಂಗಳ ಒಳಗೆ ವಿವಾಹದ ಬಗ್ಗೆ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿಕೊಂಡು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸತಕ್ಕದ್ದು. ಈ ಅವಧಿ ಮೀರಿದ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವಂತಿಲ್ಲ.
ಅರ್ಜಿಯ ಅರ್ಹತೆ
10. ಆನ್ಲೈನ್ನಲ್ಲಿ ಸ್ವೀಕೃತವಾಗಿರುವ ಅರ್ಜಿ ಪರಿಶೀಲಿಸಿ ಅನುದಾನ ಲಭ್ಯತೆ ಹಾಗೂ ಜೇಷ್ಟತೆಯ ಆಧಾರದಲ್ಲಿ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಪ್ರೋತ್ಸಾಹಧನವನ್ನು ಮಂಜೂರು ಮಾಡುವುದು.
11. ಅಂತರ್ಜಾತಿ ವಿವಾಹ ಯೋಜನೆ ಅಡಿಯಲ್ಲಿ ಜೀವನದಲ್ಲಿ ಗಂಡು/ಹೆಣ್ಣು ಒಮ್ಮೆ ಮಾತ್ರ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ಅರ್ಹರು. (2ನೇ ಬಾರಿ ಮದುವೆಯಾದಲ್ಲಿ ಅರ್ಹರಿರುವುದಿಲ್ಲ).
12, ಅಂತರ್ಜಾತಿ ವಿವಾಹ ಯೋಜನೆ ಅಡಿ ಪ್ರೋತ್ಸಾಹ ಧನ ಪಡೆದವರು ಸರಳ ವಿವಾಹ ಕಾರ್ಯಕ್ರಮದಡಿ ಧನ ಸಹಾಯ ಪಡೆಯಲು ಅರ್ಹರಿರುವುದಿಲ್ಲ.
13. ವಿವಾಹ ಯೋಜನೆ అ ಮದುವೆಯಾದವರು ನಿರುದ್ಯೋಗಿ ಆಗಿದ್ದಲ್ಲಿ ಸ್ವಯಂ ಉದ್ಯೋಗ ಇತ್ಯಾಧಿ ಯೋಜನೆಗಳಲ್ಲಿ ಇವರುಗಳಿಗೆ ಆದ್ಯತೆ ನೀಡುವುದು.
14.ರಾಜ್ಯ ಸರ್ಕಾರದಿಂದ ಈ ಯೋಜನೆ ಅಡಿ ಪ್ರೋತ್ಸಾಹ ಧನ ಪಡೆದವರು ಡಾ:ಅಂಬೇಡ್ಕರ್ ಫೌಂಡೇಶನ್, ನವದೆಹಲ ಇವರಿಂದ ಮತ್ತೆ ಪೋತಾಹದನ ಪಡೆಯಲು ಅರ್ಹರಿರುವುದಿಲ್ಲ
15. ಪರಿಶಿಷ್ಟ ಜಾತಿಯ ಪುರುಷ/ಮಹಿಳೆಯು ಅಂತ ಧರ್ಮಿಯ (Religion) ವಿವಾಹವಾದ ಪ್ರಕರಣಗಳನ್ನು ಪ್ರೋತ್ಸಾಹ ಧನಕ್ಕಾಗಿ ಪರಿಗಣಿಸುವಂತಿಲ್ಲ.
Application Invitation for Inter-caste Marriage Incentive Apply for the grant as follows












Follow Me