ಶಿವಮೊಗ್ಗ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಯುವ ಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ನಡುವೆ ಇನ್ನೊಂದು ಘಟನೆ ನಡೆದಿದ್ದು, ಈಗ ಜನತೆಯಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ.
ರಾಜ್ಯದಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮದುವೆಯಾದ ಮರುದಿನವೇ ಕುಸಿದು ಬಿದ್ದು ನವ ವರ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಯುವಕ ಮದುವೆಯಾದ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಮೇಶ್(30) ಮೃತಪಟ್ಟವರು.
ಇದನ್ನು ಮಿಸ್ ಮಾಡದೇ ಓದಿ: ಕರ್ನಾಟಕ ಟಿಇಟಿ 2025 ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ, ಇಲ್ಲಿದೆ ನೇರವಾದ ಲಿಂಕ್,

ಭಾನುವಾರ ಹರಪನಹಳ್ಳಿ ಸಮೀಪದ ಬಂಡ್ರಿಯ ಯುವತಿಯನ್ನು ರಮೇಶ್ ಮದುವೆಯಾಗಿದ್ದರು. ವಧುವಿನ ಮನೆಗೆ ನವ ದಂಪತಿ ತೆರಳಿದ್ದಾರೆ. ದೇವರ ಕೋಣೆಗೆ ಹೋಗಿ ಕೈಮುಗಿದು ಹೊರ ಬರುತ್ತಿದ್ದಂತೆ ರಮೇಶ್ ಹೃದಯಾಘಾತದಿಂದ ಕುಸಿತು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದಾರೆ.

ನವೆಂಬರ್ 30ರಂದು ಶಿವಮೊಗ್ಗದ ಬಿ. ಹೆಚ್. ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಅವರ ಮದುವೆ ನೆರವೇರಿತ್ತು. ಮದುವೆಯ ನಂತರ ಡಿ.1 ರಂದು ವಧುವಿನ ಮನೆಗೆ ತೆರಳಲು ದಂಪತಿಗಳು ಹರಪ್ಪನಹಳ್ಳಿಯ ಬಂಡ್ರಿಗೆ ಆಗಮಿಸಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ವರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. . ರಮೇಶ್ ಅವರ ಅಂತ್ಯಕ್ರಿಯೆಯನ್ನು ಶಿವಮೊಗ್ಗದ ಹೊಸಕೊಪ್ಪ ಗ್ರಾಮದಲ್ಲಿ ನೆರವೇರಿಸಲಾಗಿದ್ದು, ಮದುವೆಯ ಮರುದಿನವೇ ಗಂಡನನ್ನು ಕಳೆದುಕೊಂಡ ವಧುವಿನ ಆಕ್ರಂದನ ಮುಗಿಲು ಮುಟ್ಟಿದೆ.
Another horrific tragedy in the state, the groom dies of a heart attack the day after his wedding












Follow Me