Darshan Thoogudeepa: ಏರ್‌ಪೋರ್ಟ್‌ನಲ್ಲಿ ಪುತ್ರನ ಜೊತೆಗೆ ಕಾಣಿಸಿಕೊಂಡ ನಟ ದರ್ಶನ್ ಫೋಟೋ ವೈರಲ್‌..!

Darshan's photo revealed at the airport

ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಪುತ್ರನ ಜೊತೆಗೆ ಕಾಣಿಸಿಕೊಂಡ ನಟ ದರ್ಶನ್ ಫೋಟೋ ವೈರಲ್‌ ಆಗಿದೆ.  ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ ಚಿತ್ರತಂಡ ದರ್ಶನ್ ಜೊತೆಗೆ ಮಂಗಳವಾರ ರಾತ್ರಿ ಬೆಂಗಳೂರು ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಮಂಗಳವಾರ ರಾತ್ರಿ ದರ್ಶನ್ ಥೈಲ್ಯಾಂಡ್‌ಗೆ ತೆರಳಿರುವ ಡೆವಿಲ್‌ ಚಿತ್ರ ತಂಡ, ಗುರುವಾರದಿಂದ ಹಾಡಿನ ಚಿತ್ರೀಕರಣವನ್ನು ಶುರು ಮಾಡಿದೆ ಎನ್ನಲಾಗಿದೆ. ಕೊಲೆ ಪ್ರಕರಣವವೊಂದರಲ್ಲಿ ಜಾಮೀನು ಪಡೆದುಕೊಂಡ ಬಳಿಕ ನಟ ದರ್ಶನ್‌ ಇದೇ ಮೊದಲ ಬಾರಿಗೆ ಹೊರ ದೇಶಕ್ಕೆ ಸಿನಿಮಾವೊಂದರ ಚಿತ್ರೀಕರಣದ ಸಲುವಾಗಿ ವಿದೇಶಕ್ಕೆ ತೆರಳಿದ್ದಾರೆ.

Darshan's photo revealed at the airport

ಈ ನಡುವೆ ಅವರು ವಿದೇಶಕ್ಕೆ ಚಿತ್ರೀಕರಣದ ಸಲುವಾಗಿ ಪಾಸ್‌ಪೋರ್ಟ್‌ ಅವಶ್ಯಕತೆ ಇತ್ತು, ಆದರೆ ಪಾಸ್‌ಪೋರ್ಟ್ ಕೋರ್ಟ್ ವಶದಲ್ಲಿದ್ದ ಕಾರಣ ಮತ್ತು ವಿದೇಶಕ್ಕೆ ತೆರಳುವುದಕ್ಕೆ ಕೋರ್ಟ್‌ ನ ಅನುಮತಿ ಬೇಕಾಗಿದ್ದ ಕಾರಣ ದರ್ಶನ್ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡು.

ಇದನ್ನು ಮಿಸ್ ಮಾಡದೇ ಓದಿ: ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಮಗಳು ಇಲ್ಲಿವೆ..!

ಇದನ್ನು ಮಿಸ್ ಮಾಡದೇ ಓದಿ:  ಯೋಜನೆಯ 20ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ..!

ಡೆವಿಲ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಅಲ್ಲಿ ಸರಿ ಸುಮಾರು ಹತ್ತು ದಿವಸಗಳ ಕಾಲ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ನಡುವೆ ಈ ಹಾಡಿನ ಚಿತ್ರೀಕರಣದೊಂದಿಗೆ ಸಿನಿಮಾದ ಶೂಟಿಂಗ್‌ ಕೂಡ ಮುಕ್ತಾಯವಾಗಲಿದೆ ಎನ್ನಲಾಗಿದೆ.

Darshan's photo revealed at the airport

ಈ ಇನ್ನೂ ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದಂತೆ, ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಇಂದು ನಡೆಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಪೀಠ ನಟ ದರ್ಶನ್‌ ಸೇರಿದಂತೆಒಟ್ಟು 7 ಮಂದಿಗೆ ನೀಡಿದ್ದ ಜಾಮೀನು ಅನ್ನು ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಕೋರಿದ್ದ ಹೈಕೋರ್ಟ್‌ನ ಆದೇಶದ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ.

ಕಳೆದ ಡಿಸೆಂಬರ್‌ 13ರಂದು ಕರ್ನಾಟಕ ಹೈಕೋರ್ಟ್ ದರ್ಶನ್, ಪವಿತ್ರಗೌಡ, ಪ್ರದೂಶ್, ಜಗದೀಶ್, ಲಕ್ಷ್ಮಣ್, ಅನುಕುಮಾರ್ ಹಾಗೂ ನಾಗರಾಜುಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.