ಬೆಂಗಳೂರು : ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು ರಿಲೀಸ್ ಆಗಿ ಅಬ್ಬರಿಸುತ್ತಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ನೋಡಿ ಬಂದ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಇತ್ತ ಅವರ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಮಾಸ್ ಡೈಲಾಗ್, ಟ್ವಿಸ್ಟ್ಗಳನ್ನು ಒಳಗೊಂಡ ಕಥೆಗಳ ಮೂಲಕ ಫ್ಯಾನ್ಸ್ಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ಈ ಚಿತ್ರವನ್ನು ಫ್ಯಾನ್ಸ್ ಹೆಚ್ಚು ಖುಷಿಯಿಂದ ನೋಡುತ್ತಿದ್ದಾರೆ. ‘ನಾವು ಗೆದ್ವಿ’ ಎಂದು ಎಲ್ಲರೂ ಹಾಕಿಕೊಳ್ಳುತ್ತಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ಬಗ್ಗೆ ವಿವರ (December 11)
ಇದೆ ವೇಳೆ ಮಾಧ್ಯಮಗಳೊಂದಿಗೆ ಸಹೋದರ ದಿನಕರ್ ತೂಗುದೀಪ್ ಅವರು ಮಾತನಾಡಿ, ಸಿನಿಮಾ ರಿಲೀಸ್ ವೇಳೆ ದರ್ಶನ್ ಅಭಿಮಾನಿಗಳ ಜೊತೆ ಇರುತ್ತಾರೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಅದು ಆಗಲಿಲ್ಲ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕಾನೂನು ಆದೇಶದ ಮುಂದೆ ಎಲ್ಲರೂ ತಲೆಬಾಗಲೇಬೇಕು. ಅವರು ಜೈಲಿಗೆ ಹೋದರು ಕೂಡ ದರ್ಶನ್ ಅವರಿಗೆ ಆತಂಕ ಇತ್ತು. ಸಿನಿಮಾಗೆ ಯಾವುದೇ ತೊಂದರೆ ಆಗಬಾರದು ಅಂತ ಇತ್ತು. ನನಗೆ ಮತ್ತು ನಮ್ಮ ಅತ್ತಿಗೆಗೆ ಸಿನಿಮಾ ಕುರಿತು ಏನೇನಾಗುತ್ತೋ ಅದನ್ನು ಮಾಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ದರು ಎಂದರು.
ಇನ್ನು ದರ್ಶನ್ ಸಿನಿಮಾದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಹಾಗೆ ನಿಜ ಜೀವನದಲ್ಲಿ ಜೈಲಿಂದ ಬಂದಮೇಲೆ ರಾಜಕೀಯಕ್ಕೆ ಬರುತ್ತಾರೆ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ ಅಂತ ಕೇಳಿದಾಗ ಅದನ್ನು ಅವರ ಅಭಿಮಾನಿಗಳೇ ನಿರ್ಧರಿಸುತ್ತಾರೆ. ಸೆಲೆಬ್ರಿಟಿಗಳು ಹೇಳಿದಂತೆ ದರ್ಶನ್ ಮಾಡುತ್ತಾರೆ. ದರ್ಶನ್ ರಾಜಕಾರಣಕ್ಕೆ ಬರುತ್ತಾರೆ ಎನ್ನುವುದರ ವಿಚಾರವಾಗಿ ತಮ್ಮನಾಗಿ ನನಗೆ ಮಾಹಿತಿ ಇಲ್ಲ ಅಭಿಮಾನಿಗಳು ಇಷ್ಟಪಟ್ಟರೆ ಅವರು ಏನು ಬೇಕಾದರೂ ಮಾಡುತ್ತಾರೆ. ಅಭಿಮಾನಿಗಳಿಗೋಸ್ಕರನೇ ದರ್ಶನ್ ಇರುವುದು ಅಂತ ರಾಜಕಾರಣಕ್ಕೆ ದರ್ಶನ್ ಎಂಟ್ರಿ ಆಗುವ ಕುರಿತು ಮಾಹಿತಿ ನೀಡಿದರು.
ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರ ಇಂದು ರಾಜ್ಯಾದ್ಯಂತ 300ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು, ಬೆಳಗ್ಗೆಯಿಂದಲೇ ಎಲ್ಲಡೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನ ಶುರುವಾಗಿವೆ. ಮೊದಲ ದಿನ 1,000ಕ್ಕೂ ಹೆಚ್ಚು ಪ್ರದರ್ಶನ ಕಾಣಲಿದ್ದು, ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್ ಚಿತ್ರದ ಯಶಸ್ಸಿಗೆ ಮನವಿ ಮಾಡಿದ್ದಾರೆ.
ಜೈಲಿನಿಂದಲೇ ನಟ ದರ್ಶನ್ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ನಟ ದರ್ಶನ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ನಟ ದರ್ಶನ್ ಅಭಿಮಾನಿಗಳಿಗೆ ನೀಡಿದ ಸಂದೇಶ
ನನ್ನ ಪ್ರೀತಿಯ ಸೆಲೆಬ್ರಿಟಿಗಳೇ,
ಈ ಸಂದೇಶ ನನ್ನ ಹೃದಯದಿಂದ ಬಂದಿದೆ, ವಿಜಿ ನಿಮ್ಮೆಲ್ಲರಿಗೂ ತಲುಪಿಸುತ್ತಾಳೆ. ಅವರು ನಿಮ್ಮೆಲ್ಲರ ಪ್ರೀತಿ, ಕಾಳಜಿ, ನಿಮ್ಮ ದಣಿವರಿಯದ ಬೆಂಬಲ, ರಾಜ್ಯಾದ್ಯಂತ ನಿಮ್ಮ ಅವಿಶ್ರಾಂತ ಪ್ರಚಾರಗಳ ಬಗ್ಗೆ ಪ್ರತಿ ಬಾರಿಯೂ ನನಗೆ ತಿಳಿಸುತ್ತಿದ್ದಾರೆ. ದೂರದಿಂದ ಕೂಡ, ಪ್ರತಿ ಕ್ಷಣವೂ ನನ್ನೊಂದಿಗೆ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ.
ನಾನು ನಿಮಗೆ ಹೇಳಲು ಬಯಸುವುದೇನೆಂದರೆ… ದಯವಿಟ್ಟು ಜನರು ಏನು ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ ಅಥವಾ ಯಾವುದೇ ನಕಾರಾತ್ಮಕತೆಯು ನಿಮ್ಮ ಹೃದಯವನ್ನು ಅಲುಗಾಡಿಸಲು ಬಿಡಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ, ಮತ್ತು ಇಂದು ಎಂದಿಗಿಂತಲೂ ಹೆಚ್ಚಾಗಿ, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿ ನಾನು ನಿಂತಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ನನ್ನ ದೊಡ್ಡ ಶಕ್ತಿ ನೀವೇ. ಮತ್ತು ನಾನು ಬಯಸುವುದು ನೀವು ಕಡಿಮೆ ಚಿಂತಿಸಬೇಕು ಮತ್ತು ಆ ಪ್ರೀತಿ ಮತ್ತು ಶಕ್ತಿಯನ್ನು ನಮ್ಮ ಚಲನಚಿತ್ರ ಡೆವಿಲ್‌ನ ಕಡೆಗೆ ಹರಿಸಬೇಕು.

ನಿಮ್ಮೆಲ್ಲರಿಂದಾಗಿ ನಾನು ನಾನಾಗಿ ಉಳಿದಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿ ಪ್ರಶ್ನೆಗೆ, ಪ್ರತಿ ಅನುಮಾನಕ್ಕೆ, ಪ್ರತಿ ಧ್ವನಿಗೆ… ಪದಗಳಿಂದಲ್ಲ, ಆದರೆ ಈ ಚಿತ್ರದ ಘರ್ಜಿಸುವ ಯಶಸ್ಸಿನೊಂದಿಗೆ ಉತ್ತರಿಸಬೇಕೆಂದು ನಾನು ಬಯಸುತ್ತೇನೆ. ಅದು ನಿಮ್ಮ ಧ್ವನಿಯಾಗಿರುತ್ತದೆ. ಅದು ನಮ್ಮ ಹೇಳಿಕೆಯಾಗಿರುತ್ತದೆ. ನಿಮ್ಮ ಪ್ರಚಾರಗಳು, ನಿಮ್ಮ ಸಮರ್ಪಣೆ, ನಿಮ್ಮ ಏಕತೆ… ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವನೆ ಬರುತ್ತದೆ. ನಾನು ನಿಮ್ಮೆಲ್ಲರನ್ನು ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯಲು ಸಾಧ್ಯವಿಲ್ಲ, ನಿಮ್ಮ ಕಣ್ಣುಗಳನ್ನು ನೋಡುತ್ತೇನೆ ಮತ್ತು ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ನಂಬುವಂತೆಯೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ನಂಬುತ್ತೇನೆ. ಮತ್ತು ಸಮಯವು ಸತ್ಯವನ್ನು ಮಾತನಾಡಲು ತನ್ನದೇ ಆದ ಮಾರ್ಗವನ್ನು ಹೊಂದಿದೆ ಎಂಬುದನ್ನು ನೆನಪಿಡಿ. ಸಮಯವು ಎಲ್ಲದಕ್ಕೂ ಉತ್ತರಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
Actor Darshan’s entry into politics Big update given by brother Dinkar Tugudeepa












Follow Me