Dinesh Gundu Rao | ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ : ಸಚಿವ ದಿನೇಶ್ ಗುಂಡೂರಾವ್

Health Minister Dinesh Gundu Rao

ಬೆಳಗಾವಿ: ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ವಿಧಾನ ಪರಿಷತ್ ಕಲಾಪದ ವೇಳೆ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡುವಂತಹ ಖಾಸಗಿ ಆಸ್ಪತ್ರೆಗಳನ್ನು ನಿರ್ದಿಷ್ಟವಾಗಿ ಗುರುತಿಸಿರುವುದಿಲ್ಲ.

ಇದನ್ನು ಮಿಸ್‌ ಮಾಡದೇ ಓದಿ: ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪಾರದರ್ಶಕ: ಸಚಿವ ಬಿ.ಎಸ್.ಸುರೇಶ

ಇದನ್ನು ಮಿಸ್‌ ಮಾಡದೇ ಓದಿ: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡಬೇಕಿರೋದು ಕೇಂದ್ರ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಇದನ್ನು ಮಿಸ್‌ ಮಾಡದೇ ಓದಿ: ಲೋಕೋಪಯೋಗಿ ಇಲಾಖೆಯ ಗ್ರೂಪ್-ಎ, ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು

ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಿರುವ ಬಗ್ಗೆ, ಜಿಲ್ಲಾ, ಕೆ.ಪಿ.ಎಂ.ಇ. ನೋಂದಣಿ ಮತ್ತು ಕುಂದು ಕೊರತೆ ನಿವಾರಣಾ ಪ್ರಾಧಿಕಾರದಲ್ಲಿ ಯಾವುದೇ ದೂರುಗಳು ಸಾರ್ವಜನಿಕರಿಂದ ಸ್ವೀಕೃತವಾಗಿರುವುದಿಲ್ಲ.
ದೂರುಗಳು ಬಂದಲ್ಲಿ ನಿಯಮ ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಕೆಪಿಎಂಇ ಅಧಿನಿಯಮದ ಸೆಕ್ಷನ್ 15 ಉಪಬಂಧ 1ರನ್ವಯ ಕ್ರಮ ಜರುಗಿಸಲಾಗುವುದು ಎಂದರು.

ಗರ್ಭಿಣಿಯರಿಗೆ ತಪಾಸಣೆ ಮಾಡುವ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಅನುಸರಿಬೇಕಾದ ನೀತಿ ನಿಯಮಗಳಿದ್ದು,ನಿಯಮ ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಕೆ.ಪಿ.ಎಂ.ಇ, ಅಧಿನಿಯಮದ ಸೆಕ್ಷನ್15 ಉಪಬಂಧ 1ರನ್ವಯ ಕ್ರಮ ಜರುಗಿಸಲಾಗುವುದು ಎಂದರು.

dinesh gundu rao
dinesh gundu rao

 

Minister Dr. Sharan Prakash Patil
Minister Dr. Sharan Prakash Patil

ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ಬಿಮ್ಸ್ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿರುವುದಿಲ್ಲ : ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಳಗಾವಿ: ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ಬಿಮ್ಸ್ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ ನಾಗರಾಜು ಅವರು ಚುಕ್ಕೆ ಗುರುತಿನ ಪ್ರಶ್ನೆಯಡಿ ತಪ್ಪಿತಸ್ಥ ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಪ್ರಸ್ತಾಪಿಸಿದ ಸಮಯದಲ್ಲಿ ಉತ್ತರಿಸಿದ ಸಚಿವರು, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯದಿಂದ ಒಬ್ಬ ರೋಗಿಯ ಹೊಟ್ಟೆಯ ಗಡ್ಡೆ ಬದಲಿಗೆ ಕರುಳನ್ನು ತೆಗೆದು ಹಾಕಲಾಗಿದೆ ಎಂದು ಸುದ್ದಿಯಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪರಿಶೀಲಿಸಲಾಗಿ, ರೋಗಿಯು ದೀರ್ಘಕಾಲದ ಮದ್ಯವ್ಯಸನಿ ಹಾಗೂ ತಂಬಾಕು ಅಗಿಯುವ ಇತಿಹಾಸವನ್ನು ಹೊಂದಿದ್ದು, ರೋಗಿಗೆ ಅಪೇಂಡಿಕ್ಸ್ ಕರುಳಿನ ರಂದ್ರ ಇರುವುದು ತಾಲ್ಲೂಕ ಆಸ್ಪತ್ರೆಯಿಂದ ನೀಡಿದ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಕಾರಣ, ಈ ರೋಗಿಗೆ ನಿಯಮಿತ ತನಿಖೆಗಳು, ಯುಎಸ್‍ಜಿ ಪರೀಕ್ಷೆ, ಸೋನಾಗ್ರಾಫಿ ಪರೀಕ್ಷೆಗಳನ್ನು ನಡೆಸಿದಾಗ ಅಪೇಂಡಿಕ್ಯೂಲರ್ ರಂದ್ರ ಇರುವುದು ಕಂಡುಬರುತ್ತದೆ.

2025ನೇ ಜೂನ್ 26 ರಂದು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಲ್ಯಾಪೆÇ್ರೀಟಮಿ ನಡೆಸಲಾಗಿದ್ದು, ಅಪೇಂಡಿಕ್ಸ್ ತುದಿಯಲ್ಲಿ ಉಬ್ಬಿಕೊಂಡಿರುವುದು ಕಂಡುಬಂದ ನಿಮಿತ್ತ ಅಪೇಂಡಿಸೆಕ್ಟಮಿ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕರುಳನ್ನು ಪರೀಕ್ಷಿಸಿದ್ದು, ಕರುಳು ಸಾಮಾನ್ಯವಾಗಿದ್ದುದರಿಂದ ತೆಗೆದಿರುವುದಿಲ್ಲವೆಂದು ಸಂಸ್ಥೆಯು ವರದಿಯಲ್ಲಿ ಸಲ್ಲಿಸಿರುತ್ತದೆ. ಕಾಲಕಾಲಕ್ಕೆ ರೋಗಿಗೆ ಚಿಕಿತ್ಸೆ / ಪರೀಕ್ಷೆ ನಡೆಸುತ್ತಿದ್ದಾಗ್ಯೂ ವೈದ್ಯಕೀಯ ಸಲಹೆಯ ವಿರುದ್ಧವಾಗಿ ರೋಗಿಯನ್ನು ರೋಗಿಯ ಸಂಬಂಧಿಕರು 2025ನೇ ಜೂನ್ 22 ರಂದು ಬಿಮ್ಸ್ ಸಂಸ್ಥೆಯಿಂದ ಕರೆದೊಯ್ಯಲಾಗಿದೆ. ರೋಗಿಗೆ ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯತೆ ಆಗಿರುವುದಿಲ್ಲ ಎಂದು ಸಚಿವರು ತಿಳಿಸಿದರು.

Action will be taken against private hospitals that perform unnecessary caesarean deliveries to collect money: Minister Dinesh Gundu Rao