ಸಾರಿಗೆ ಇಲಾಖೆಯಲ್ಲಿ ನಕಲಿ ಸೇವಾನುಭವ ಪ್ರಮಾಣ ಪತ್ರ ಪಡೆದು ಬಡ್ತಿ ಹೊಂದಿರುವರ ವಿರುದ್ಧ ಕ್ರಮ : ಸಚಿವ ರಾಮಲಿಂಗರೆಡ್ಡಿ

ramalinga reddy
ramalinga reddy

ಬೆಳಗಾವಿ: ಸಾರಿಗೆ ಇಲಾಖೆಯಲ್ಲಿ ಲಿಪಿಕ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ನಕಲು ಸೇವಾನುಭವ ಪ್ರಮಾಣ ಪತ್ರ ಪಡೆದಿರುವುದು ರುಜುವಾತಾದಲ್ಲಿ ಅವರ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಇಲಾಖೆಯ ನೌಕರರು ನಕಲು ಸೇವಾನುಭವ ಪ್ರಮಾಣಪತ್ರ ಪಡೆದು ಸಂಜೆ ಪಾಲಿಟೆಕ್ನಿಕ್‍ನಲ್ಲಿ ಪ್ರವೇಶ ಪಡೆದು ವ್ಯಾಸಾoಗ ಮಾಡುತ್ತಿರುವುದಾಗಿ ಬಂದಿರುವ ದೂರಿನ ಕುರಿತು ವರದಿ ಸಲ್ಲಿಸುವಂತೆ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರಿಂದ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿತ್ತು.

ramalinga reddy
ramalinga reddy

ಈ ಸಂಬಂಧ ತಾಂತ್ರಿಕ ಶಿಕ್ಷಣ ಇಲಾಖೆಯು ತನಿಖೆ ನಡೆಸಿ ವರದಿಯನ್ನು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರಿಗೆ ಸಲ್ಲಿಸಿ “ಅರೆಕಾಲಿಕ ಕೋರ್ಸ್‍ಗಳ ಪ್ರವೇಶಾತಿಗೆ 02 ವರ್ಷಗಳ ತಾಂತ್ರಿಕ ಸೇವಾನುಭವದೊಂದಿಗೆ ಸಂಬಂಧಪಟ್ಟ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ದೂರಿನಲ್ಲಿ ನಮೂದಿಸಿದ 49 ಅಭ್ಯರ್ಥಿಗಳ ಪ್ರವೇಶದ ಸಂಪೂರ್ಣ ತನಿಖಾ ವರದಿಯನ್ನು ಲಗತ್ತಿಸಿ, 2 ವರ್ಷದ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದ್ದಾರೆ.

ramalinga reddy
ramalinga reddy

ಸಾರಿಗೆ ಇಲಾಖೆಯಿಂದ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಲು ಅವಕಾಶವಿಲ್ಲವಾದ್ದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯಿಂದಲೇ ಪರಿಶೀಲಿಸಲು ಕೋರಲಾಗಿದೆ ಎಂದು ತಿಳಿಸಿದರು.