ಗಂಗಾವತಿ : ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಇನ್ನೆರಡು ವಾರದಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಜೋಡಿಯೊಂದು ಪ್ರಿವೆಡ್ಡಿಂಗ್ ಶೂಟಿಂಗ್‌ಗೆ (Pre Wedding Photoshoot) ಹೋಗಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ನಡೆದಿದೆ.
ಕರಿಯಪ್ಪ ಮಡಿವಾಳ್ ಹನುಮನಹಟ್ಟಿ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ಜೋಡಿ. 5 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿ.21ರಂದು ಮದುವೆ ನಿಶ್ಚಯವಾಗಿತ್ತು. ಅದರ ಪ್ರಯುಕ್ತ ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯದ ಕಡೆ ತೆರಳು ಮರಳುತ್ತಿದ್ದರು.
ಇದನ್ನು ಮಿಸ್ ಮಾಡದೇ ಓದಿ: : ಕರ್ನಾಟಕ ‘TET ಪರೀಕ್ಷೆ ಕೀ-ಉತ್ತರ’ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ
ಕವಿತಾರನ್ನು ತಮ್ಮ ಗಂಗಾವತಿಯ ಮನೆಗೆ ಬಿಟ್ಟು ಹೋಗಲು ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕ್ವಾರಿಯ ಲಾರಿಯೊಂದು ಬೈಕ್ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕರಿಯಪ್ಪ ತೀವ್ರವಾಗಿ ಗಾಯಗೊಂಡು ಗಂಗಾವತಿ ಆಸತ್ರೆಯಲ್ಲಿ ಮೃತಪಟ್ಟಿದಾರೆ.
ಈ ನಡುವೆ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ಮಾಡಿದೆ. ಬೀದಿ ನಾಯಿ ದಾಳಿಯಿಂದ 3 ವರ್ಷದ ಸಾಹಿತ್ಯ ಎನ್ನುವ ಬಾಲಕಿಗೆ ಗಂಭೀರವಾದ ಗಾಯಗಳಾಗಿದೆ ದಾವಣಗೆರೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಗಾಯಗೊಂಡ ಮಗುವಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ ಸಾಹಿತ್ಯ ಮನೆ ಮುಂದೆ ಆಟವಾಡುತ್ತಿದ್ದಳು.ಆ ವೇಳೆ ಏಕಾಏಕಿ ಬಿದಿ ನಾಯಿ ದಾಳಿ ಮಾಡಿದೆ. ಮಗುವಿನ ಮುಖಕ್ಕೆ ಕಚ್ಚಿ ತೀವ್ರ ಗಾಯಗೊಳಿಸಿದೆ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
A lorry collided with a bike while coming from the pre-wedding shoot: the couple who was to get married in a few days died!












Follow Me