ಬೆಂಗಳೂರು : ಇತ್ತೀಚಿಗೆ ಮೈಸೂರಲ್ಲಿ ಸ್ನಾನಕ್ಕೆ ಎಂದು ಗೀಸರ್ ಆನ್ ಮಾಡಿದ ವೇಳೆಯಲ್ಲಿ ಗೀಸರ್ ಅನೀಲ ಸೋರಿಕೆಯಾಗಿ ಇಬ್ಬರು ಸಹೋದರಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿರುವುದು ನಮಗೆಲ್ಲ ತಿಳಿದಿದೆ.
ಇದಲ್ಲದೇ ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ಇತ್ತೀಚೆಗಷ್ಟೇ ಸ್ನಾನ ಮಾಡುವುದಕ್ಕೆ ಬಾತ್ ರೂಮ್ ಗೆ ಹೋದ ತಾಯಿ ಮಗು ಗ್ಯಾಸ್ ಗೀಸರ್ ನಿಂದಾಗಿ ಸಾವನ್ನಪ್ಪಿರುವುದು ಕಂಡು ಬಂಧಿದೆ.ಅಂದ ಹಾಗೇ ಇದೆ ರೀತಿ ಇನ್ನು ಹಲವಾರು ದುರಂತಗಳು ನಡೆದಿದ್ದವು ಆದರೆ ಇತ್ತೀಚಿಗೆ ಅದರ ಪ್ರಮಾಣ ಹೆಚ್ಚಾಗುತ್ತಿದೆ. ಅದಲ್ಲದೇ ಅದರ ಬಳಕೆಗೆ ಜನತೆ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ.
ಇದನ್ನು ಮಿಸ್ ಮಾಡದೇ ಓದಿ: ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ, ಹೀಗೆ ಮಾಡದಿದ್ದರೆ ನಿಮಗೆ ರೇಷನ್ ಬರೋದು ಇಲ್ಲ…!
ಆದರೆ ಗೀಸರ್ ಬಳಸೋಕು ಮುನ್ನ ಅದನ್ನು ಯಾವ ರೀತಿ ಬಳಸಬೇಕು? ಯಾವ ಮುನ್ನೆಚರಿಕೆ ವಹಿಸಬೇಕು ಎನ್ನುವುದು ಹಲವು ಮಂದಿಗೆ ತಿಳಿದು ಇರೋದು ಇಲ್ಲ. ಅದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇವೆ. ಅದನ್ನು ಮಿಸ್ ಮಾಡದೇ ಓದಿ..
ಮೊದಲಿಗೆ ಗೀಸರ್ ಬಗ್ಗೆ ಮಾಹಿತಿ ತಿಳಿದುಕೊಂಡರೆ ಬಹಳ ಒಳ್ಳೆಯದು ಮನೆಯ ಬಾತ್ ರೂಮ್ ನಲ್ಲಿ ಗೀಸರ್ ಅನ್ನು ಫಿಕ್ಸ್ ಮಾಡುವ ಸಂದರ್ಭದಲ್ಲಿ, ಪರಿಣಿತರೊಂದಿಗೆ ಅಥವಾ ಎಲೆಕ್ಟ್ರೀಷಿಯನ್ ಜೊತೆಗೆ ಈ ಗೀಸರ್ ಗೆ ಸಂಬಂಧ ಪಟ್ಟ ಮಾಹಿತಿಯನ್ನು ಸರಿಯಾಗಿ ಕೇಳಿ ತಿಳಿದುಕೊಳ್ಳುವುದು ನಿಮಗೆ ಪ್ರಮುಖವಾಗಿದೆ ಕೂಡ.

ಗೀಸರ್ ಸೆಟ್ಟಿಂಗ್ ಮಾಡುವ ಕನೆಕ್ಷನ್ ನಲ್ಲಿ ಆಚೆ ಈಚೆ ಆಗಿದ್ದರೆ ಅಥವಾ ಗ್ಯಾಸ್ ಲೀಕೇಜ್ ಆಗಿದ್ದರೆ ಏನೆಲ್ಲಾ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಬಾತ್ ರೂಮ್ ನಲ್ಲಿ ಕಿಟಕಿ ಅಥವಾ ಕಿಟಕಿಯಲ್ಲಿ ಎಕ್ಸಾಸ್ಟ್ ಫ್ಯಾನ್ ಇಲ್ಲಾಂದರೆ ಏನೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಗೀಸರ್ ಟೆಂಪರೇಚರ್ ಸೆಟ್ಟಿಂಗ್ ಅನ್ನು ಎಷ್ಟು ಇಟ್ಟುಕೊಳ್ಳಬೇಕು ಹಾಗೂ ಇದಲ್ಲದೇ ಮನೆಯಲ್ಲಿ ಹಳೆಯ ಗೀಸರ್ ಗಳು ಇದ್ದರೆ, ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಲ್ಲಕ್ಕಿಂತ ಮುಖ್ಯವಾಗಿ ಮಾರು ಕಟ್ಟೆಯಲ್ಲಿ ಗುಣಮಟ್ಟದ ಗೀಸರ್ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಕೊಳ್ಳಬೇಕು.
ಸ್ನಾನ ಮಾಡುವ ಮೊದಲು ಅಗತ್ಯವಿರುವ ಪ್ರಮಾಣದ ನೀರನ್ನು ಬಿಸಿ ಮಾಡಿ ನಂತರ ಗೀಸರ್ ಅನ್ನು ಆಫ್ ಮಾಡುವುದು ಸುರಕ್ಷಿತ ವಿಧಾನವಾಗಿದೆ ಕೂಡ.
ಇದಲ್ಲದೇ ಸ್ನಾನ ಮಾಡುವಾಗ ಗೀಸರ್ ಆನ್ನಲ್ಲಿ ಇಡುವುದರಿಂದ ನಿರಂತರವಾಗಿ ಬಿಸಿನೀರು ಬರುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ತುಂಬಾ ಅಪಾಯಕಾರಿ ಅಭ್ಯಾಸವಾಗಿದ್ದು, ಹೀಗೆ ಮಾಡುವುದು ಅಪಾಯಕ್ಕೆ ಎಡೆ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ. ಗೀಸರ್ ಆನ್ನಲ್ಲಿರುವಾಗ, ನೀರು ಮತ್ತು ವಿದ್ಯುತ್ ನಿರಂತರ ಸಂಪರ್ಕ ದಲ್ಲಿ ರುತ್ತವೆ, ಇದು ವಿದ್ಯುತ್ ಆಘಾತ ಅಥವಾ ಅಧಿಕ ಬಿಸಿಯಾಗುವ ಅಪಾಯ ವನ್ನು ಹೆಚ್ಚಿಸುತ್ತದೆ ಎನ್ನವುದು ನಿಮ್ಮ ನೆನಪಿನಲ್ಲಿ ಇರಲಿ.
ಗೀಸರ್ನಲ್ಲಿನ ವೈರಿಂಗ್ ಕಾಲಾನಂತರದಲ್ಲಿ ದುರ್ಬಲಗೊಳ್ಳಬಹುದು. ಕೆಲ ವೊಮ್ಮೆ ಪ್ಲಗ್ ಸಡಿಲಗೊಳ್ಳುತ್ತದೆ ಅಥವಾ ತಂತಿಗಳು ಸವೆದುಹೋಗುತ್ತವೆ, ಶಾರ್ಟ್ ಸರ್ಕ್ಯೂಟ್ನ ಅಪಾಯವನ್ನು ಹೆಚ್ಚಿಸುತ್ತದೆ. ಪ್ಲಗ್ ಬಿಸಿಯಾಗಿದೆ ಎಂದು ನೀವು ಭಾವಿಸಿದರೆ, ಸುಟ್ಟ ತಂತಿಗಳನ್ನು ನೋಡಿದರೆ ಅಥವಾ ಸ್ವಿಚ್ನಲ್ಲಿ ಸ್ಪಾರ್ಕ್ಗಳನ್ನು ನೋಡಿದರೆ, ತಕ್ಷಣ ಗೀಸರ್ ಅನ್ನು ಆಫ್ ಮಾಡಿ ಮತ್ತು ಅನುಭವಿ ಎಲೆಕ್ಟ್ರಿಷಿಯನ್ನಿಂದ ಅದನ್ನು ಪರಿಶೀಲಿಸಲು ಹೇಳಿ. ಅದಕ್ಕೂ ಮೊದಲು ಗೀಸರ್ ಅನ್ನು ನಿರ್ವಹಿಸಬೇಡಿ.













Follow Me