ಅಮರಾವತಿ: ವಿಶ್ವಪ್ರಸಿದ್ಧ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲದ ಪವಿತ್ರತೆ ಕಾಪಾಡಲು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅಮೃತಸರದ ಸ್ವರ್ಣಮಂದಿರ (Golden Temple) ಮಾದರಿಯಲ್ಲಿ ತಿರುಮಲಕ್ಕೂ ಪ್ರತ್ಯೇಕ ಕಾನೂನು ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ತಪ್ಪು ಮಾಡಿದರೆ ಇನ್ಮುಂದೆ ಕ್ರಿಮಿನಲ್ ಕೇಸ್ : ಅಸೆಂಬ್ಲಿಯಲ್ಲಿನ ಸಿಎಂ ಚೇಂಬರ್ನಲ್ಲಿ ನಡೆದ ಸಚಿವರೊಂದಿಗಿನ ಮಹತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಈ ಹೊಸ ಕಾನೂನು ಜಾರಿಗೆ ಬಂದರೆ: ದೇಗುಲದ ನಿಯಮ ಉಲ್ಲಂಘಿಸುವವರ ವಿರುದ್ಧ ನೇರವಾಗಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿದೆ. ತಿರುಮಲದ ಆಚರಣೆಗಳಿಗೆ ಧಕ್ಕೆ ತರುವ ಘಟನೆಗಳನ್ನು ತಡೆಯಲು ಇದು ಬ್ರಹ್ಮಾಸ್ತ್ರವಾಗಲಿದೆ.
ಇದನ್ನು ಓದಿ : ಗ್ರಾಹಕರಿಗೆ ಬಿಗ್ ರಿಲೀಫ್ : ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ! ಇಂದಿನ ಲೇಟೆಸ್ಟ್ ದರ ಇಲ್ಲಿದೆ
ಸ್ವರ್ಣಮಂದಿರದ ಕಾನೂನುಗಳನ್ನು ಕೂಡಲೇ ಅಧ್ಯಯನ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅನ್ಯಧರ್ಮೀಯರಿಗೆ ಡಿಕ್ಲರೇಷನ್ ಕಡ್ಡಾಯ

ತಿರುಮಲ ತಿರುಪತಿ ದೇವಸ್ಥಾನದ (TTD) ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಅನ್ಯಧರ್ಮೀಯರು ಶ್ರೀವಾರಿ ದರ್ಶನ ಪಡೆಯಬೇಕಾದರೆ ‘ಡಿಕ್ಲರೇಷನ್’ (ಘೋಷಣಾಪತ್ರ) ನೀಡುವುದು ಕಡ್ಡಾಯವಾಗಿದೆ. ತಮಗೆ ವೆಂಕಟೇಶ್ವರ ಸ್ವಾಮಿಯ ಮೇಲೆ ನಂಬಿಕೆ ಇದೆ ಎಂದು ಸಹಿ ಹಾಕಿದ ನಂತರವಷ್ಟೇ ಅವರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ನಿಯಮವನ್ನು ಯಾವುದೇ ಲೋಪವಿಲ್ಲದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿಎಂ ಆದೇಶಿಸಿದ್ದಾರೆ.
ಸರ್ಕಾರದ ಮುಂದಿನ ನಡೆ ಏನು : ತಿರುಮಲವನ್ನು ಕೇವಲ ಪ್ರವಾಸಿ ತಾಣವಾಗಿ ನೋಡದೆ, ಅದರ ಅಧ್ಯಾತ್ಮಿಕ ಘನತೆಯನ್ನು ಎತ್ತಿಹಿಡಿಯುವುದು ಸರ್ಕಾರದ ಗುರಿಯಾಗಿದೆ. ಟಿಟಿಡಿ ಆಡಳಿತ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ ತಗ್ಗಿಸಿ, ಶಿಸ್ತು ಕಾಪಾಡಲು ಈ ಹೊಸ ಕಾಯ್ದೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
Declaration mandatory for non-religious people in Tirupati!