ನವದೆಹಲಿ: ನೀವು ಆಗಾಗ್ಗೆ ಹಣವನ್ನು ಹಿಂಪಡೆಯಲು ಎಟಿಎಂ(ATM) ಬಳಸುತ್ತಿದ್ದರೆ, ನೀವು ಓದಲೇ ಬೇಕಾದ ಸುದ್ದಿ ಇದಾಗಿದ್ದು, ಹಾಗಾಗಿ ಮೇ 1, 2025 ರಿಂದ, ನೀವು ನಿಯಮಿತವಾಗಿ ಎಟಿಎಂಗಳಿಂದ (ATM) ಹಣವನ್ನು ಹಿಂಪಡೆಯುವಾಗ ಹೆಚ್ಚಿನ ವಹಿವಾಟು ಶುಲ್ಕವನ್ನು ನೀಡಬೇಕಾಗಿದೆ.
ಉಚಿತ (Free) ವಹಿವಾಟು ಮಿತಿಯನ್ನು ಮೀರುವ ಗ್ರಾಹಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮೋದಿಸಿದ ಎಟಿಎಂ ವಹಿವಾಟು ಶುಲ್ಕದ ಹೆಚ್ಚಳದಿಂದ ಪರಿಣಾಮವನ್ನು ಗ್ರಾಹಕರು ಹೊರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ.

ಆರ್‌ಬಿಐನ (RBI) ಹೊಸ ನಿಯಮದ ಅಡಿಯಲ್ಲಿ ಬ್ಯಾಂಕ್ (BANK) ಗ್ರಾಹಕರು ತಮ್ಮ ಉಚಿತ ಮಾಸಿಕ ಮಿತಿಯನ್ನು ಬಳಸಿದ ನಂತರ ಪ್ರತಿ ವಹಿವಾಟಿಗೆ ಪ್ರಸ್ತುತ 21 ರೂ.ಗಳ ಬದಲು 23 ರೂ.ಗಳನ್ನು ಪಾವತಿಸಬೇಕಾಗುತ್ತದೆ. ನಗದು ಹಿಂಪಡೆಯುವಿಕೆಯ ಮೇಲೆ ಹೆಚ್ಚು ಅವಲಂಬಿತರಾಗಿರುವ ಗ್ರಾಹಕರು ಮೇ 1 ರಿಂದ ಜಾರಿಗೆ ಬರುವ ಹೆಚ್ಚಳದಿಂದ ಪರಿಣಾಮ ಬೀರುತ್ತಾದೆ ಎನ್ನಲಾಗಿದೆ.

ಉಚಿತ ವಹಿವಾಟು ಮಿತಿ ಒಂದೇ ಆಗಿರುತ್ತದೆ: ಹೆಚ್ಚಳದ ಹೊರತಾಗಿಯೂ, ಉಚಿತ ವಹಿವಾಟುಗಳ ಸಂಖ್ಯೆ ಬದಲಾಗುವುದಿಲ್ಲ. ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂಗಳನ್ನು ಬಳಸಿಕೊಂಡು ತಿಂಗಳಿಗೆ ಐದು ಉಚಿತ (free) ವಹಿವಾಟುಗಳನ್ನು ಮಾಡಬಹುದು. ಮೆಟ್ರೋ ಪ್ರದೇಶಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟುಗಳಿಗೆ ಮತ್ತು ಮೆಟ್ರೋ (metro) ಅಲ್ಲದ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟುಗಳಿಗೆ ಗ್ರಾಹಕರು ಇತರ ಬ್ಯಾಂಕುಗಳ ಎಟಿಎಂಗಳನ್ನು ಬಳಸಬಹುದಾಗಿದೆ.

ಸಾಂದರ್ಭಿಕವಾಗಿ, ಬಹುಶಃ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಎಟಿಎಂ ಬಳಸುವ ಗ್ರಾಹಕರು ಹೆಚ್ಚು ಚಿಂತಿಸಬೇಕಾಗಿಲ್ಲ. ಉಚಿತ ವಹಿವಾಟಿನ ಮಿತಿಯೊಳಗೆ ಉಳಿಯಲು ಮತ್ತು ಅತಿಯಾದ ಶುಲ್ಕವನ್ನು ತಡೆಗಟ್ಟಲು, ನಿಯಮಿತವಾಗಿ ಹಣವನ್ನು ಹಿಂಪಡೆಯುವ ಜನರು ತಮ್ಮ ಬ್ಯಾಂಕುಗಳು ನಿರ್ವಹಿಸುವ ಎಟಿಎಂಗಳನ್ನು ಬಳಸಲು ಮತ್ತು ಡಿಜಿಟಲ್ ಪಾವತಿ (Digital Payments) ವಿಧಾನಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿದೆ.
Bank customers: ATM withdrawal charges to be hiked from May 1
Follow Me