Health: ನೀವು ಹೈ ಹೀಲ್ಸ್ ಧರಿಸುತ್ತಿದ್ದೀರಾ…? ಆಪಾಯದ ಜೊತೆ ನೀವು ಹೆಜ್ಜೆ ಹಾಕುತ್ತಿದ್ದಾರ ಎಂದರ್ಥ…!

Image Credit to Original Source
Image Credit to Original Source

ಕನ್ನಡನಾಡುಡಿಜಿಟಲ್‌ಡೆಸ್ಕ್‌: ನೀವು ಹೈ ಹೀಲ್ಸ್ (High heels) ಧರಿಸದೇ ಮನೆಯಿಂದ ಹೊರಗೆ ಕಾಲಿಡುವುದಿಲ್ವ…? ಹೌದು ಎಂದಾದರೇ ನೀವು ಅದನ್ನು ಧರಿಸಿದ ನಂತರ ನಿಮಗೆ ಆಗುವ ತೊಂದರೆಗಳು ಒಂದೆರಡು ಅಲ್ಲ ಬಿಡಿ. ಹೈ ಹೀಲ್ಸ್ ಧರಿಸಿ ನಂತರ ವೈದ್ಯರ(Doctors) ಬಳಿಗೆ ಹೋದ ಅನೇಕ ಮಂದಿ ನಮ್ಮ ನಡುವಲ್ಲಿ ಇದ್ದಾರೆ. ಅಂದವಾಗಿ ಕಾಣಿಸಲೆಂದು ಧರಿಸಿದ್ದ ಹೈ ಹೀಲ್ಸ್ (High heels) ತಲೆನೋವಾಗಿ ಪರಿಣಮಿಸಿರುತ್ತದೆ.

ಅನೇಕ ಮಂದಿ ಮಹಿಳೆಯರಿಗೆ(woman) ಹೈ ಹೀಲ್ಸ್ ಧರಿಸುವುದರಿಂದ ತೊಂದರೆಯಾಗುತ್ತದೆ ಎಂದು ತಿಳಿದಿರುತ್ತದೆ ಆದರೂ ಕೂಡ ಅದನ್ನು ಧರಿಸಲು ಹಿಂಜರಿಯದೇ ಹಾಕಿಕೊಂಡು ಕಾಲುಗಳಲ್ಲಿ ಎಳೆತದ ಅನುಭವನ್ನು ಅದನ್ನು ಅನೇಕ ಮಂದಿ ತೋರಿಸಿಕೊಳ್ಳದೆ ಸುಮ್ಮನಾಗಿ ಬಿಡುತ್ತಾರೆ. ಹೈ ಹೀಲ್ಸ್ ಅನ್ನು ಧರಿಸುವುದರಿಂದ ಕಾಲುಗಳು ಊತಬರುವುದು, ಫುಟ್ ವೇರ್‍ (Footwear) ಆರಾಮದಾಯಕವಾಗಿರುವುದಲ್ಲದೆ ನಿಮ್ಮ ಕಾಲುಗಳು ಅಷ್ಟು ಅಲ್ಲ ನಿಮ್ಮ ಆರೋಗ್ಯಕ್ಕೂ ಇದು ಕುತ್ತು ತರುತ್ತದೆ ಅಷ್ಟರ ಮಟ್ಟಿಗೆ ಹೈ ಹೀಲ್ಸ್ ನಿಮ್ಮ ಪ್ರಾಣ ಹಿಂಡುತ್ತದೆ.

ಇನ್ನೂ ಹೈ ಹೀಲ್ಸ್ ಧರಿಸುವದರ ಬಗ್ಗೆ ನಮ್ಮ ವೈದ್ಯರು ಸಹ 2 ಇಂಚಿಗಿಂತ ಎತ್ತರವಾಗಿರುವುದನ್ನು ಅಪಾಯಕಾರಿ ಎಂದು ತಿಳಿಸುತ್ತಾರೆ.

ಸ್ಟೆಲಿಟೋ ಹೈ ಹೀಲ್ಸ್ ಸೇರಿದಂತೆ 2 ಇಂಚಿಗಿಂತ ಅತಿ ಎತ್ತರದ ಚಪ್ಪಲ್ಲಿಗಳನ್ನು ಧರಿಸುವುದರಿಂದ ನಮ್ಮ ಮೊಣಕಾಲು ಹಾಗೂ ಬ್ಯಾಕ್ಪೆನ್ (ಬೆನ್ನು ನೋವು) ಹೆಚ್ಚಾಗಿ ಕಾಡುತ್ತದೆ, ಇನ್ನೂ ನಡಿಗೆಯು ಸುಲಭವಾಗಿ ಆಗುವುದಿಲ್ಲ ನಡೆಯುವ ಸಮಯದಲ್ಲಿ ಮುಗ್ಗರಿಸಿ ಬೀಳುವ ಅಪಾಯದ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಇದರ ಜೊತೆಗೆ ನಡಿಗೆಯಲ್ಲಿಯೂ ಅಸಮತೋಲನ ಉಂಟಾಗುತ್ತದೆ. ಇವೆಲ್ಲವುದರ ಅರಿವಿದದ್ದರೂ ಕೂಡ ಕೆಲ ಹೆಣ್ಣು ಮಕ್ಕಳು ಹೈ ಹೀಲ್ಸ್ ಅನ್ನು ಹಾಕಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೈ ಹೀಲ್ಸ್ ಅನ್ನು ಧರಿಸುವುದರಿಂದ ನಮ್ಮಲ್ಲಿ ಶೇಕಡ 20 ಮಂದಿ ಹೆಣ್ಣು ಮಕ್ಕಳು ಅರಾಮದಾಯಕವಲ್ಲದ ಶೂಗಳನ್ನು ಧರಿಸುತ್ತಾರೆ. ಶೇಕಡ 73 ಮಂದಿ ಮಹಿಳೆಯರು ಪಾದರಕ್ಷೆಗೆ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಾರೆ. ಎಂದು ಅಧ್ಯಾಯನಗಳಿಂದ ತಿಳಿದು ಬರುತ್ತದೆ.

Image Credit to Original Source
Image Credit to Original Source

ಹೈ ಹೀಲ್ಸ್ನಿಂದಾಗುವ ತೊಂದರೆಗಳು ಹೀಗಿವೆ:

  • ಕಾಳುಗಳ ಚರ್ಮ ಒರಟಾಗುವುದು ಮತ್ತು ಹಿಮ್ಮಡಿಗಳಲ್ಲಿ ಒಂದೇ ಸಮನೆ ನೋವು ಕಾಣಿಸಿಕೊಳ್ಳುತ್ತದೆ.
  • ಪಾದಗಳ ಹೆಬ್ಬೆರಳು ಸಂಧುಗಳ ದೊಡ್ಡದಾಗುವುದು, ಹೆಬ್ಬರಳುಗಳಲ್ಲಿ ಊತ ಬರುವುದು ಕಾಣಿಸಿಕೊಳ್ಳುತ್ತದೆ.
  • ಕಾಲುಗಳ ನರಗಳ ಎಳೆತ ಮತ್ತು ನೋವು, ಉಗುರುಗಳು, ಬೆಳೆಯದಿರುವುದು ಸೇರಿದಂತೆ ಇನ್ನೀತ್ತರ ನೋವುಗಳು ಕಾಣಿಸಿಕೊಳ್ಳುತ್ತದೆ.
  • ಹಿಮ್ಮಡಿಗೆ ಸಂಬಂಧಪಟ್ಟ ರೋಗಗಳು ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ
  • ಹೈ ಹೀಲ್ಸ್ ಬಳಸುವುದರಿಂದ ಶರೀರದ ಪಾದಗಳ ಮೇಲೆ ಒತ್ತಡ ಹೆಚ್ಚಾಗಿ ಒತ್ತಡ ಬಿದ್ದು ಉಗುರುಗಳು ಕಠಿಣ ಹಾಗೂ ದಪ್ಪವಾಗುತ್ತವೆ. ಅವುಗಳು ದುರ್ವಾಸನೆಯುಕ್ರ ಫಂಗಸ್ ಉಂಟಾಗುವ ಅಪಾಯವು ಸಹ ಇರುತ್ತದೆ.
  • ಅನೇಕ ಬಾರಿ ಇದರ ಬಳಕೆಯಿಂದ ಕಾಳುಗಳು ಊತಗೊಳ್ಳುವ ಸನ್ನಿವೇಶ ಕೂಡ ನಿರ್ಮಾಣವಾಗುತ್ತದೆ
    ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಿ
  • ಒಂದು ವೇಳೆ ನಿಮಗೆ ಹೈ ಹೀಲ್ಸ್ ಬಳಕೆ ಇಲ್ಲದೇ ಇರಲಾಗದೇ ಹೋದರೆ ಹೈ ಹೀಲ್ಸ್ ನ ಅಳತೆಯಲ್ಲಿ ಕಡಿಮೆ ಮಾಡಿಕೊಳ್ಳುತ್ತ ಬನ್ನಿ.
  • ತೆಳುವಾದ ಉದ್ದವಾದ ಮತ್ತು ಪೆನ್ಸಿಲ್ ಹೀಲ್ ಬದಲು ಪ್ಲಾಟ್ ಪಾರಂ ಹೀಲ್, ಫ್ಲ್ಯಾಟ್ ಹೀಲ್, ಚಪ್ಪಟೆ, ಆಗಲ, ಇತ್ಯಾದಿ ಸ್ಪೈಲ್ ನ ಹೀಲ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಇನ್ನೂ ದೂರದ ಕೆಲಸಕ್ಕೆ ಹೋಗುವ ಸಮಯದಲ್ಲಿ ಟೆನಿಸ್, ಶೂಸ್, ಅಥಾವ ಫ್ಯ್ಲಾಟ್ ಹೀಲ್ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ
Image Credit to Original Source
Image Credit to Original Source