ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಿಗ್ ಪ್ಲ್ಯಾನ್ ಮಾಡಿದ್ದು, ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಸ್ವಿಚ್ ಆಫ್ ಪ್ಲ್ಯಾನ್ ಮಾಡಿದೆ.
ಇದನ್ನು ಮಿಸ್ ಮಾಡದೇ ಓದಿ : ಅಮೆರಿಕದಲ್ಲಿ ಸಾವಿರಾರು ಬಳಕೆದಾರರಿಗೆ ChatGPT ಡೌನ್: ವರದಿ
ಇದನ್ನು ಮಿಸ್ ಮಾಡದೇ ಓದಿ : ಮ್ಯಾನ್ಮಾರ್‌ನಲ್ಲಿ 5.9 ತೀವ್ರತೆಯ ಭೂಕಂಪ, ಕೋಲ್ಕತ್ತಾದಲ್ಲಿ ಭೂಕಂಪನ
ಪ್ರತಿ ಮನೆಯಲ್ಲಿ ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಮೊಬೈಲ್ ಮತ್ತು ಟಿವಿಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಹೌದು, ರಾಜ್ಯದಲ್ಲಿ ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆಗಾಗಿ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್, ಟಿವಿ ಸ್ವಿಚ್ ಆಫ್ ಮಾಡಿಸುವಂತೆ ಟಾಸ್ಕ್ ನೀಡಲಾಗಿದೆ.

ಮೊಬೈಲ್ ಗೀಳಿಂದ ಓದಿನಿಂದ ವಿದ್ಯಾರ್ಥಿಗಳು ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಟಾಸ್ಕ್ ನೀಡಲು ಮುಂದಾಗಿದೆ. ಓದಿನ ಕಡೆ ಗಮನಹರಿಸಲು ಈ ಟಾಸ್ಕ್, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಸ್ವಿಚ್ ಆಫ್ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಡಂಗೂರ ಬಾರಿಸಿ ಜಾಗೃತಿ ಮೂಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಪೋಷಕರು ಈ ನಿಯಮವನ್ನು ಎಷ್ಟು ಪಾಲಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
TV and mobile off until SSLC exams are over