Kodi Shree Swamiji New Predictions | ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಕೋಡಿಶ್ರೀ ಭವಿಷ್ಯ

Kodi Shree Swamiji New Predictions
Kodi Shree Swamiji New Predictions

ಬೆಂಗಳೂರು: ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಅಂತ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ಅವರು ಕೆಆರ್ ಪೇಟೆಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಡುತ್ತ ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು ರಾಜ್ಯ ರಾಜಕಾರಣದ ತತ್ವ ಆದರ್ಶಗಳು ಮಾಯವಾಗಿದ್ದು, ದಿಕ್ಕುತಪ್ಪಿದೆ ಎಂದು ಹೇಳಿದರು. ಇದಲ್ಲದೇ ನಾಯಕತ್ವದ ಗೊಂದಲ, ಗುದ್ದಾಟ ಎಲ್ಲವೂ ಮಕರ ಸಂಕ್ರಾಂತಿ ಬಳಿಕ ಬಗೆಹರಿಯಲಿದೆ ಎಂದಿದ್ದಾರೆ ಅಂಥ ತಿಳಿಸಿದರು. ನಾಯಕತ್ವದ ಗುದ್ದಾಟ, ಒಳಜಗಳಗಳು ಎಲ್ಲವೂ ಸಂಕ್ರಾಂತಿ ಬಳಿಕ ಬಗೆಹರಿಯಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಇದನ್ನು ಮಿಸ್‌ ಮಾಡದೇ ಓದಿ: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಸಾವು

ಇದನ್ನು ಮಿಸ್‌ ಮಾಡದೇ ಓದಿ: `ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 8868 ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಇನ್ನು ರಾಷ್ಟ್ರ ರಾಜಕಾರಣದ ಬಗ್ಗೆಯೂ ಕೂಡ ಕೋಡಿಶ್ರೀ ಸ್ವಾಮೀಜಿ ಭವಿಷ್ಯ ನುಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಶಾಸ್ತ್ರ ಹೇಳುವವನಲ್ಲ, ಶಾಸ್ತ್ರಕಾರನಲ್ಲ, ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ರಾಷ್ಟ್ರ ರಾಜಕಾರಣದಲ್ಲಿ ಯುಗಾದಿ ಬಳಿಕ ಸಮಸ್ಯೆಗಳು ಎದುರಾಗಲಿವೆ ಅಂತ ತಿಳಿಸಿದರು. ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂ***ಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಸಿದರು.

Kodi Shree Swamiji New Predictions
Kodi Shree Swamiji New Predictions

ಮದ್ದೂರು ಪಟ್ಟಣದ ಟಿ.ಬಿ. ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ

ಇನ್ನೂ ಮಂಗಳವಾರ ಮದ್ದೂರು ಪಟ್ಟಣದ ಟಿ.ಬಿ. ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ವಿಷಯ ಕುರಿತು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಸಭೆ ನಡೆಯಿತು.

2025 -26 ನೇ ಸಾಲಿನ ವಾರ್ಷಿಕ ಬಜೆಟ್ ನಲ್ಲಿ  ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಘೋಷಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ವಿಸ್ತೃತ ಯೋಜನಾ ವರದಿಯನ್ನೂ ತಯಾರಿಸಲಾಗಿದೆ . ಮದ್ದೂರು ಪಟ್ಟಣದ ಟಿ.ಬಿ. ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆಯು ಜನ ನಿಬಿಡ ಹಾಗೂ ವಾಣಿಜ್ಯ ಚಟುವಟಿಕೆಯುಳ್ಳ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಅಧಿಕ ವಾಹನ ಸಂಚಾರವಿದ್ದು ಪುರಸಭೆಯ ಸುಪರ್ದಿಯಲ್ಲಿರುತ್ತದೆ. ಬಿಎಂಐಸಿಎಪಿಎ ಅವರು ತಯಾರಿಸಿರುವ ಯೋಜನ ನಕ್ಷೆಯಲ್ಲಿ ಇದನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿರುತ್ತದೆ.

ರಸ್ತೆ ಅಗಲೀಕರಣ ಕಾಮಗಾರಿ ಯೋಜನಾ ವರದಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಈ ರಸ್ತೆಯನ್ನು 80 ಅಡಿ ವಿಸ್ತರಿಸಲು  ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮದ್ದೂರು ಶಾಸಕರಾದ ಕೆ ಎಂ ಉದಯ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ನಡುವೆ ಮಂಗಳೂರಿನ ಕಾವೇರಿ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿಯಾದರು

Chief Minister Siddaramaiah met AICC General Secretary K.C. Venugopal at the Cauvery Guest House in Mangaluru.
Chief Minister Siddaramaiah met AICC General Secretary K.C. Venugopal at the Cauvery Guest House in Mangaluru.

Kodi Shree Swamiji  prediction Change in state politics after Sankranti