ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2024 – 25ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಿಳಿಸಿದ್ದಾರೆ. ವರ್ಗಾವಣೆ (transfer) ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು ...
ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಭೂ ಸಮೀಕ್ಷೆ ಅಥವಾ ಭೂ ವಿವರಗಳನ್ನು ಪಡೆಯಲು ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ನ ಹೆಸರು ‘ದಿಶಾಂಕ್’. ದಿಶಾಂಕ್ ಅಪ್ಲಿಕೇಶನ್ ಮೂಲಕ, ನೀವು ಕೇವಲ ಒಂದು ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ನಲ್ಲಿ ನಿಮ್ಮ ಮೂಲ ಭೂ ದಾಖಲೆಗಳನ್ನು ಪಡೆಯಬಹುದು. ನಿಮ್ಮ ಭೂಮಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು. ಈ ಅಪ್ಲಿಕೇಶನ್ ಮೂಲಕ ನೀವು ಭೂಮಾಲೀಕರ ಹೆಸರು, ದಾಖಲೆಯಲ್ಲಿರುವ ಭೂಮಿಯ ವಿಸ್ತೀರ್ಣ, ಮಾಲೀಕತ್ವದ ಪ್ರಕಾರ, ಭೂಮಿಯ ಪ್ರಕಾರ, ಭೂಮಿಯ ಮೇಲಿನ ನಿರ್ಬಂಧಗಳು ಸೇರಿದೆ. ಈ ಅಪ್ಲಿಕೇಶನ್ ನಿಮಗೆ ...
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳೀಯು ನೋಂದಾಯಿತ ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ ಸಹಾಯಧನ ಮೊತ್ತವನ್ನು ರೂ. 75,000/-ಗಳಿಂದ ರೂ 1,50,000/-ಗಳಿಗೆ ಹೆಚ್ಚಿಸಲಾಗಿದೆ. ಇದನ್ನು ಮಿಸ್ ಮಾಡದೇ ಓದಿ: UPI ಬಿಟ್ಟು ನಗದು ವ್ಯವಹಾರ ನಡೆಸುತ್ತಿರುವ ವರ್ತಕರಿಗೆ ಬಿಗ್ಶಾಕ್ ಕೊಟ್ಟ GST ನೋಂದಾಯಿತ ಫಲಾನುಭವಿಗಳು ಕೆಲಸದ ಸ್ಥಳಗಳಲ್ಲಿ ಅಪಘಾತ ಉಂಟಾಗಿ ಮರಣ ಹೊಂದಿದ್ದಲ್ಲಿ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ರೂ. 5,00,000/-ಗಳಿಂದ ರೂ. 8,00,000/-ಗಳಿಗೆ ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಕಟ್ಟಡ ...
ಮೈಸೂರು: ಜೆಡಿಎಸ್- ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ಸರ್ಕರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದ ಜನರಿಗೆ ಸರಣಿ ಸುಳ್ಳುಗಳ ಮೂಲಕ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಒಂದೇ ವೇದಿಕೆಗೆ ಬರಲಿ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ...
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಡಬ ತಾಲ್ಲೂಕಿನ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು ಮತ್ತು ಮಂಗಳೂರು ನಡುವಿನ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಧರ್ಮಸ್ಥಳ ಕ್ರಾಸ್ ಬಳಿ ಸಂಭವಿಸಿದ ಈ ಘಟನೆಯಿಂದ ಕರ್ನಾಟಕದ ಅತ್ಯಂತ ಪ್ರಮುಖ ರಸ್ತೆ ಸಂಪರ್ಕಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎನ್ನಲಾಗಿದೆ. ಟ್ರಕ್‌ಗಳು, ಲಾರಿಗಳು ಮತ್ತು ಬಸ್‌ಗಳು ಸೇರಿದಂತೆ ಎಲ್ಲಾ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮಾರ್ಗವು ತೆರವುಗೊಳಿಸುವವರೆಗೆ ಅನಗತ್ಯ ಪ್ರಯಾಣಗಳನ್ನು ತಪ್ಪಿಸುವಂತೆ ಅಧಿಕಾರಿಗಳು ಪ್ರಯಾಣಿಕರ ...
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಪುತ್ರನ ಜೊತೆಗೆ ಕಾಣಿಸಿಕೊಂಡ ನಟ ದರ್ಶನ್ ಫೋಟೋ ವೈರಲ್ ಆಗಿದೆ. ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ ಚಿತ್ರತಂಡ ದರ್ಶನ್ ಜೊತೆಗೆ ಮಂಗಳವಾರ ರಾತ್ರಿ ಬೆಂಗಳೂರು ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಮಂಗಳವಾರ ರಾತ್ರಿ ದರ್ಶನ್ ಥೈಲ್ಯಾಂಡ್‌ಗೆ ತೆರಳಿರುವ ಡೆವಿಲ್ ಚಿತ್ರ ತಂಡ, ಗುರುವಾರದಿಂದ ಹಾಡಿನ ಚಿತ್ರೀಕರಣವನ್ನು ಶುರು ಮಾಡಿದೆ ಎನ್ನಲಾಗಿದೆ. ಕೊಲೆ ಪ್ರಕರಣವವೊಂದರಲ್ಲಿ ಜಾಮೀನು ಪಡೆದುಕೊಂಡ ಬಳಿಕ ನಟ ದರ್ಶನ್ ಇದೇ ಮೊದಲ ಬಾರಿಗೆ ಹೊರ ದೇಶಕ್ಕೆ ಸಿನಿಮಾವೊಂದರ ಚಿತ್ರೀಕರಣದ ಸಲುವಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ನಡುವೆ ಅವರು ...
ಬೆಂಗಳೂರು: ಹಾವು ಕಡಿದಿದೆಯೇ? ಆತಂಕ ಪಡದಿರಿ – ಸರಿಯಾದ ಮುನ್ನೆಚ್ಚರಿಕೆಯಿಂದ ಜೀವ ಉಳಿಸಬಹುದು. ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಮಗಳ ಕುರಿತು ಇಲ್ಲಿ ತಿಳಿಯಿರಿ. ಅಂದ ಹಾಗೇ ಹಾವು ಕಡಿತವು ಕರ್ನಾಟಕ (Karnataka) ಸಾಂಕ್ರಾಮಿಕ ರೋಗಗಳ ಕಾಯ್ದೆ, ಸೆಕ್ಷನ್ 3 ರ ಅಡಿಯಲ್ಲಿ ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿತವಾಗಿದೆ. ಹಾವು ಕಚ್ಚಿದ ಸಂದರ್ಭದಲ್ಲಿ • ಹೆದರದಿರಿ. ಹಾವು ಕಚ್ಚಿದ ವ್ಯಕ್ತಿಯನ್ನು ಸಮಾಧಾನವಾಗಿರಿಸಿ. • ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ. • ಹಾವು ಕಚ್ಚಿದ ದೇಹದ ಭಾಗವನ್ನು ಏನೂ ಮಾಡದಿರಿ • ಹಾವು ...
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಕ್ಲಿನಿಕಲ್ ಅಧ್ಯಯನಗಳ ಸರಣಿಯು ಕೋವಿಡ್ -19 ಸೋಂಕು ಮತ್ತು ಕೋವಿಡ್ ಲಸಿಕೆ (Covid vaccines) ಎರಡಕ್ಕೂ ಸಂಬಂಧಿಸಿದ ಗಮನಾರ್ಹ ನರವೈಜ್ಞಾನಿಕ ಸಮಸ್ಯೆಗಳನ್ನು ಬಹಿರಂಗಪಡಿಸಿದೆ. ನಿಮ್ಹಾನ್ಸ್‌ನ (NIMHAN) ನರವಿಜ್ಞಾನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಎಂ ಅವರ ನೇತೃತ್ವದಲ್ಲಿ, ಈ ಅಧ್ಯಯನಗಳು ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ಲಸಿಕೆ ಅಭಿಯಾನ ಎರಡನ್ನೂ ಒಳಗೊಂಡಿದ್ದು, ವೈರಸ್ ಮತ್ತು ಅದಕ್ಕೆ ಜಾಗತಿಕ ಪ್ರತಿಕ್ರಿಯೆಯು ಕೇಂದ್ರ ಮತ್ತು ಬಾಹ್ಯ ನರಮಂಡಲದ ಮೇಲೆ ಹೇಗೆ ಪರಿಣಾಮ ಬೀರಿದೆ ...
ಬೆಂಗಳೂರು: 2023-24 ಮತ್ತು 2024-25ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಅರ್ಹತೆ ಹೊಂದಿದವರು ಯುವನಿಧಿ (YUVANIDHI SCHEME) ಯೋಜನೆಯ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿರುತ್ತದೆ. ಯುವನಿಧಿ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಆಯಾ ಜಿಲ್ಲೆಗಳ ವಿಶ್ವವಿದ್ಯಾನಿಲಯ(University) ಹಾಗೂ ಜಿಲ್ಲೆಯಾದ್ಯಂತ ಇರುವ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮಾ ಕಾಲೇಜುಗಳು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ(District Employment Exchange Centre) ವಿಶೇಷ ನೋಂದಣಿ ಕೌಂಟರ್ ತೆರೆಯಲಾಗಿದೆ. ಇದಲ್ಲದೇ ಗ್ರಾಮಒನ್, ಕರ್ನಾಟಕಒನ್, (KarnatakaOne)ಮತ್ತು ಸೇವಾ ...
ಮೈಸೂರು : ರಾಜ್ಯದಲ್ಲಿ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme ) ಕೂಡ ಒಂದಾಗಿದ್ದು, ಈಗಾಗಲೇ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಸಾಮಾಜಿಕವಾಗಿ ಮಾದರಿಯಾಗಿದ್ದಾರೆ. ಆದರೆ ಇದೀಗ ಮೂರು ತಿಂಗಳಿಗೊಮ್ಮೆ ಗ್ರಹಲಕ್ಷ್ಮಿ ಹಣ ಹಾಕುತ್ತೇವೆ ಪ್ರತಿ ತಿಂಗಳು ಹಾಕೋಕೆ ಕೆಲವು ತೊಡಕುಗಳಿವೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್ಎಂ ರೇವಣ್ಣ (HM Revanna) ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರದಲ್ಲಿ 1 ಲಕ್ಷ 20 ಸಾವಿರ ...
Follow Me