
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ‘ಕುಮಾರಿ ಸಮೃದ್ಧಿ’ ಯೋಜನೆ: ಪ್ರತಿ ಮಗುವಿಗೆ 5,000 ರೂ ಠೇವಣಿ; ಮಾದರಿಯಾಗಿ ನಿಂತ ‘ಹೂಲಿ’ ಗ್ರಾಮ
ಬೆಳಗಾವಿ: ಸಮಾಜದ ಪ್ರಗತಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಅತ್ಯಂತ ದೊಡ್ಡದು. ಆದರೆ ಇಂದಿಗೂ ಅನೇಕ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಗು ಜನಿಸಿದಾಗ ಆರ್ಥಿಕ ಹೊರೆಯ ಭಾವನೆ ಮೂಡುವುದು ವಿಷಾದನೀಯ. ಈ ಮನಸ್ಥಿತಿಯನ್ನು ಬದಲಿಸಿ, ಹೆಣ್ಣು








