ದಾವಣಗೆರೆ : ದಾವಣಗೆರೆ ರೌಂಡ್ ಟೇಬಲ್ 76 ಹಾಗೂ ದಾವಣಗೆರೆ ಲೇಡೀಸ್ ಸರ್ಕಲ್ 168 ರ ಖಾಸಗಿ ಸಂಘಟನೆ ಸಹಯೋಗದಲ್ಲಿ ದಾವಣಗೆರೆ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ರೇಡಿಯಂಟ್ ಬೇಬಿ ವಾರ್ಮರ್, ಇಸಿಜಿ ಯಂತ್ರ ಹಾಗೂ ಇರೋ ಸ್ಕ್ಯಾನ್ ಪ್ರೋಬ್‌ಗಳನ್ನು ದಾನವಾಗಿ ನೀಡಲಾಯಿತು.

ಈ ದಾನ ಕಾರ್ಯಕ್ರಮವು ಏರಿಯಾ ಚೇರ್‌ಪರ್ಸನ್ ಕಾರ್ಯದರ್ಶಿ ಹಾಗೂ ಖಜಾಂಚಿ ಡಾ| ಪೂಜಾ ಮಹಾಜನ್, ಏರಿಯಾ ಪ್ರಾಜೆಕ್ಟ್ ಕನ್ವೀನರ್ ಅಭಿಷೇಕ್ ಶೆಟ್, ಸಹನಾ ಎಸ್.ಎಲ್. ಹಾಗೂ ದಾವಣಗೆರೆ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸುದೀಪ್ ಕುಮಾರ್.ಹೆಚ್.ಸಿ, ಅವರ ಸಾನಿಧ್ಯದಲ್ಲಿ ನಡೆಯಿತು.
ದಾವಣಗೆರೆ ರೌಂಡ್ ಟೇಬಲ್ 76 ರ ಪರವಾಗಿ ಅಧ್ಯಕ್ಷ ಆದಿತ್ಯ ಜಿ.ಜಿ, ಕಾರ್ಯದರ್ಶಿ ಅನುಪ್ ರಿಟ್ಟಿ, ಖಜಾಂಚಿ, ಧನುಷ್ ಹಾಗೂ ದಾವಣಗೆರೆ ಬೇಡೀನ್ ಸರ್ಕಲ್ 168 ರ ಅಧ್ಯಕ್ಷೆ ಅಡಿ ಡಾ| ಚೈತ್ರಾ ಎನ್.ಟಿ’ ಮತು ಡಾ। ಶ್ರೇಯಾ, ವೈದ್ಯಕೀಯ ಅಧೀಕ್ಷಕರಾದ ಡಾ.ಮಧು ಎಸ್.ಪಿ ಉಪಸ್ಥಿತರಿದ್ದರು.
ವ್ಯಕ್ತಿ ಕಾಣೆ : ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಹನಗವಾಡಿ ಗ್ರಾಮದ ಮಾಲತೇಶ ಬಿನ್ ಬಸಪ್ಪ ಸುಮಾರು 30 ವರ್ಷ ಇವರು ಹೇಳದೇ ಕೇಳದೇ ಮನೆಯಿಂದ ಹೋದವರು ಇದೂವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ.
ವ್ಯಕ್ತಿಯ ಚಹರೆ: 5.3 ಅಡಿ ಎತ್ತರ, ದುಂಡು ಮುಖ, ಕಪ್ಪು ಮೈ ಬಣ್ಣ, ತೆಳುವಾದ ಮೈಕಟ್ಟು, ಮೈ ಮೇಲೆ ಕೆಲವು ಅಚ್ಚೆಗಳ ಗುರುತು ಇರುತ್ತದೆ. ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಅಂಗಿ ನೀಲಿ ನೈಟ್ ಪ್ಯಾಂಟ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ಮೊ.ಸಂ:9480803249, 08192-272012, 259213, 253400, 253100 ನ್ನು ಸಂಪರ್ಕಿಬಹುದೆAದು ಠಾಣಾಧಿಕಾರಿ ತಿಳಿಸಿದ್ದಾರೆ.