ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಸುರಕ್ಷತಾ ಅಭ್ಯಾಸ ಕ್ರಮಗಳು ಕುರಿತು ರೈತರ ಜಾಗೃತಿ ಕಾರ್ಯಕ್ರಮ

Meat and milk

ಶಿವಮೊಗ್ಗ : ಪಶುವೈದ್ಯಕೀಯ ಮಹಾ ವಿದ್ಯಾಲಯ, ವಿನೋಬನಗರ ಶಿವಮೊಗ್ಗ ಇಲ್ಲಿ, ರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರ, ನವದೆಹಲಿ ಹಾಗೂ ರಾಷ್ಟ್ರೀಯ ಮಾಂಸ ಸಂಶೋಧನೆ ಸಂಸ್ಥೆ, ಹೈದರಾಬಾದ್ ಇವರಿಂದ ಪ್ರಾಯೋಜಿತ, “ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಸುರಕ್ಷತಾ ಅಭ್ಯಾಸ ಕ್ರಮಗಳು” ಎಂಬ ವಿಷಯದ ಮೇಲೆ ಒಂದು ದಿನದ “ರೈತರ ಜಾಗೃತಿ ಕಾರ್ಯಕ್ರಮ” ವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೈದರಾಬಾದ್ ರಾಷ್ಟ್ರೀಯ ಮಾಂಸ ಸಂಶೋಧನೆ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಬಿ. ಬಾರ್ಬುದೆ ವಹಿಸಿದ್ದರು, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಬಸವರಾಜ ಆವಟಿ ಹಾಗೂ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಜಿ..ಕೆ. ಗಿರಿಜೇಶ್ ರವರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಡಾ. ಬಾಬುರತ್ನ ಎ., ಶಿವಮೊಗ್ಗ ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ. ಜಿ.. ಮಂಜುಳ ಪಶುವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಟಿ.ತಿರುಮಲೇಶ್ ಇವರುಗಳು ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅರುಣ್ ಖರಾಟೆ, ಉಪಸ್ಥಿತರಿದ್ದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

Meat and milk
Meat and milk

ಈ ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ, ರೇಷ್ಮೆ ಇಲಾಖೆ , ಶಿವಮೊಗ್ಗ ಹಾಲು ಒಕ್ಕೂಟ ಹಾಗೂ ಮಹಾವಿದ್ಯಾಲಯದ ವಿವಿಧ ವಿಭಾಗಗಳಿಂದ ಆಕರ್ಷಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ಮತ್ತು ಈ ವಸ್ತು ಪ್ರದರ್ಶನದಲ್ಲಿ ಪುಂಗನೂರು ದೇಶಿ ಆಕಳು ತಳಿ, ಬೀಟಲ್, ಶಿರೋಹಿಯಂತಹ ಮೇಕೆ ತಳಿಗಳು, ಬನ್ನೂರು ಕುರಿ ತಳಿ ಮತ್ತು ವಿವಿಧ ಕುಕ್ಕುಟ ತಳಿಗಳಾದ ಬಾತು ಕೋಳಿ, ಸಿಲ್ಕಿ ಕೋಳಿ, ಮೈಸೂರು ನಾಟಿ ಕೋಳಿ, ಗೌಜಲ ಹಕ್ಕಿ, ಕಡಕನಾಥ್ ಕೋಳಿ, ಸೋನಾಲಿಯಂತಹ ದೇಶಿ ತಳಿಗಳನ್ನು ಪ್ರದರ್ಶಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸುತ್ತಮತ್ತಲ ಜಿಲ್ಲೆಗಳಿಂದ ಸುಮಾರು 400 ಜನ ರೈತರು ಭಾಗವಹಿಸಿ ಅನೇಕ ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಂವಾದ ನಡೆಸಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಕಾರ್ಯಕ್ರಮದ ಲಾಭ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಅನೇಕ ಔಷಧಿ ಕಂಪನಿಗಳು, ಕೃಷಿ ಉಪಕರಣಗಳ ತಯಾರಿಕಾ ಕಂಪನಿಗಳವರು ಬಾಗವಹಿಸಿ, ತಮ್ಮ –ತಮ್ಮ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟರು. ತೆಂಗು, ಬಾಳೆ, ಅಡಿಕೆ, ಕರಿ ಮೆಣಸು, ಭತ್ತ, ಸಪೋಟಾ, ಮಾವು ಬೆಳೆಗಳ ಬಗ್ಗೆ ಹಾಗೂ ಒಳನಾಡು ಮೀನುಗಳಾದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ, ಮೃಗಾಲ ಗೆಂಡೆ ಇತ್ಯಾದಿ ಮೀನಿನ ತಳಿಗಳು, ವಿವಿಧ ಜೇನು ತಳಿಗಳು. 40 ಕ್ಕೂ ಹೆಚ್ಚಿನ ಮೇವಿನ ಬೆಳೆಗಳ ವಿವಿಧ ತಳಿಗಳು, ರೇಷ್ಮೆ ಹುಳುಗಳ ಸಾಕಾಣಿಕೆ, ಔಷಧಿ ಸಸ್ಯಗಳು, ಎರೆಹುಳು ಗೊಬ್ಬರ, ವಿವಿಧ ರೀತಿಯ ಜಾನುವಾರು ಕೊಟ್ಟಿಗೆಗಳ ಮಾದರಿಗಳು, ಜೈವಿಕ ಅನಿಲ ಉತ್ಪಾದನೆಯ ಮಾದರಿಗಳು ಪ್ರಮುಖ ಅಕರ್ಷಣೆಯಾಗಿದ್ದವು.

ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾಂಸ ಮತ್ತು ಹಾಲು ಉತ್ಪನ್ನಗಳ ಸುರಕ್ಷತಾ ಕ್ರಮಗಳ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿ ರೈತರಿಗೆ ಅರಿವು ಮೂಡಿಸಿದರು.