ttd : ಸರ್ವ ದರ್ಶನ ಟೋಕನ್ ವಿತರಣೆಯನ್ನು ಸ್ಥಗಿತ ಟಿಟಿಡಿ

tirupati darshan

ತಿರುಪತಿ: ಜನವರಿ 25 ರಂದು ತಿರುಮಲದಲ್ಲಿ ನಡೆಯಲಿರುವ ರಥ ಸಪ್ತಮಿ ಉತ್ಸವದ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಸರ್ವ ದರ್ಶನ ಟೋಕನ್ ವಿತರಣೆಯನ್ನು ಮೂರು ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. 

ಇದನ್ನು ಮಿಸ್‌ ಮಾಡದೇ ಓದಿ : ಪಿಎಫ್‌ ಹಣ ವಾಪಸ್ಸು ಪಡೆಯುವುದು ಈಗ ಸುಲಭ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : 2 ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮೂರು ವಾರದ ಈ ದಿನದನಂದು ತಪ್ಪದೆ ಮಲಗಿದರೆ ಎಂಥ ಬಡವ ಕೂಡ ಶ್ರೀಮಂತ್ರನಾಗುತ್ತಾನೆ

tirupati darshan
tirupati darshan

ಅದರಂತೆ, ತಿರುಪತಿಯ ಮೂರು ಕೇಂದ್ರಗಳಲ್ಲಿ ಮರುದಿನ ದರ್ಶನಕ್ಕಾಗಿ ನೀಡಲಾಗುವ ಟೋಕನ್‌ಗಳನ್ನು ಜನವರಿ 23, 24 ಮತ್ತು 25 ರಂದು ವಿತರಿಸಲಾಗುವುದಿಲ್ಲ. ಜನವರಿ 23 ರಂದು ದರ್ಶನಕ್ಕಾಗಿ ಟೋಕನ್‌ಗಳನ್ನು ಗುರುವಾರ ನೀಡಲಾಗುತ್ತದೆ. ಮರುದಿನ ದರ್ಶನಕ್ಕಾಗಿ ಟೋಕನ್‌ಗಳ ವಿತರಣೆ ಜನವರಿ 26 ರಂದು ಪುನರಾರಂಭಗೊಳ್ಳುತ್ತದೆ. ತಾತ್ಕಾಲಿಕ ಅಮಾನತು ಬಗ್ಗೆ ಭಕ್ತರಿಗೆ ತಿಳಿಸಲು ಟಿಟಿಡಿ ಆಯಾ ಟೋಕನ್ ವಿತರಣಾ ಕೇಂದ್ರಗಳಲ್ಲಿ ವಿಶೇಷ ಸೂಚನಾ ಫಲಕಗಳನ್ನು ಸಹ ಹಾಕಿದೆ.

ವಿಪತ್ತು ಸಂದರ್ಭದಲ್ಲಿ ಮುಂಜಾಗ್ರತಾ ಅರಿವು ಅಗತ್ಯ

ಬಳ್ಳಾರಿ : ಯಾವುದೇ ವಿಪತ್ತುಗಳು ಸಂಭವಿಸಿದಾಗ ತತಕ್ಷಣ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಅರಿವು ಹೊಂದಬೇಕು ಎಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ತಂಡದ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಅವರು ಹೇಳಿದರು.ಸಿರುಗುಪ್ಪ ತಾಲ್ಲೂಕಿನ ದೇಶನೂರು ಗ್ರಾಮದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಆಯೋಜಿಸಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ 16 ಎನ್‌ಡಿಆರ್‌ಎಫ್ ತಂಡಗಳಿದ್ದು, ವಿಪತ್ತು ಸನ್ನಿವೇಶ ಎದುರಾದಾಗ ರಾಷ್ಟಿçÃಯ ವಿಪತ್ತು ನಿರ್ವಹಣಾ ತಂಡಗಳು ಸದಾ ಸಿದ್ಧರಿರುತ್ತಾರೆ. ಸಾರ್ವಜನಿಕರು ಸಹ ಅಗತ್ಯ ಸಹಕಾರ ನೀಡಬೇಕು ಎಂದರು.

Precautionary awareness is necessary in the event of a disaster.
Precautionary awareness is necessary in the event of a disaster.

ಜಿಲ್ಲಾಧಿಕಾರಿ ಕಚೇರಿಯ ಪ್ರಕೃತಿ ವಿಕೋಪ ಪರಿಣಿತ ಪರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿದ್ದು, ಎನ್‌ಡಿಆರ್‌ಎಫ್ ತಂಡದ ಸದಸ್ಯರು ಪ್ರತಿ ವಿಪತ್ತುಗಳ ಕುರಿತು ಅರಿವು ಮೂಡಿಸುವರು. ವಿಪತ್ತುಗಳು ಸಂಭವಿಸಿದಾಗ ಸನ್ನದ್ಧಗೊಳಿಸಲು ಕೌಶಲ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅಭ್ಯಾಸ ಮಾಡಿಸುವರು ಹಾಗೂ ಪ್ರಥಮ ಚಿಕಿತ್ಸೆ, ಸಿಪಿಆರ್ ವಿಧಾನಗಳು ತಿಳಿಸುವರು. ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಎನ್‌ಡಿಆರ್‌ಎಫ್ ಸಿಬ್ಬಂದಿ ನಾಗರಾಜ್ ಮತ್ತು ತಂಡದ ಎಲ್ಲಾ ಸದಸ್ಯರು ಬೆಂಕಿ ಅವಘಡಗಳು, ಪ್ರವಾಹ, ಭೂಕಂಪ ಇತ್ಯಾದಿ ವಿಪತ್ತುಗಳ ಮುಂಜಾಗೃತೆ, ಸನ್ನದ್ಧತೆ ಬಗ್ಗೆ ತಿಳಿಸುತ್ತಾ ಕೆಲವು ಶಿಬಿರಾರ್ಥಿಗಳಿಂದ ಅಭ್ಯಾಸಿಸಿದರು. ಈ ವೇಳೆ ಎನ್‌ಡಿಆರ್‌ಎಫ್ ಸಬ್ ಇನ್ಸ್ ಪೆಕ್ಟರ್ ಮುನ್ನಿಕೃಷ್ಣ, ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಡಿಜಿಎಂ ರಾಜಬಾಬು, ಸಿರುಗುಪ್ಪ ತಾಲ್ಲೂಕು ಕಂದಾಯ ನಿರೀಕ್ಷಕ ಮಂಜುನಾಥ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.