ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್’ ಪಡೆಯಲು ಇನ್ಮುಂದೆ `OTP’ ಸಾಕು

ration card

ಬೆಂಗಳೂರು: ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು 01 ರಿಂದ 05 ರೊಳಗಾಗಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ ಮುಖಾಂತರ ಪಡೆಯಬೇಕು. ನಂತರ ದಿನಾಂಕ 06 ರಿಂದ 15 ರೊಳಗೆ ದಿನಾಂಕವನ್ನು ನಿಗಧಿಪಡಿಸಿ, ನಿಗಧಿಪಡಿಸಿದ ದಿನದಂತೆ ಓ.ಟಿ.ಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮನೆಯ ಬಾಗಿಲಿಗೆ ಪಡಿತರವನ್ನು ವಿತರಿಸುತ್ತಿರುತ್ತಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವ ಕಾರ್ಯಕ್ರಮ ಪ್ರಾರಂಭಿಸಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ಇಂದು ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಕೆ ಆರಂಭ

ಇದನ್ನು ಮಿಸ್‌ ಮಾಡದೇ ಓದಿ : ರಾಜ್ಯ ಸರ್ಕಾರಿ ನೌಕರರು ರಾಜಕೀಯ & ಚುನಾವಣೆಯಲ್ಲಿ ಭಾಗವಹಿಸಬಹುದಾ? ಇಲ್ಲಿದೆ ಮಾಹಿತಿ

ಮುಖ್ಯಮಂತ್ರಿಯವರು ಕಳೆದ ಬಜೆಟ್‍ನಲ್ಲಿ, 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವಂತೆ ಘೋಷಿಸಿರುತ್ತಾರೆ. ಅದರನ್ವಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿ-2026ರ ಅನ್ನಸುವಿಧ ಮಾಡ್ಯುಲ್‍ನಲ್ಲಿ ಇ.ಕೆ.ವೈ.ಸಿಯಾದ ಒಟ್ಟು 6,336 ಏಕ ಸದಸ್ಯ ಪಡಿತರ ಚೀಟಿದಾರರ ಆಯಾ ನ್ಯಾಯಬೆಲೆ ಅಂಗಡಿ ಲಾಗಿನ್‍ನಲ್ಲಿ ಲಭ್ಯವಿದ್ದು, “ಅನ್ನ ಸುವಿಧ” ಯೋಜನೆಯಡಿ ಅವರ ಮನೆಯ ಬಾಗಿಲಿಗೆ ಪಡಿತರ ಧಾನ್ಯ ತಲುಪಿಸುವ ಕಾರ್ಯ ಪ್ರಾರಂಭಿಸಿದೆ.

ration card karnataka

ಜನವರಿ-2026ರ ಅನ್ನಸುವಿಧ ಮಾಡ್ಯುಲ್‍ನಲ್ಲಿ ಇಕೆವೈಸಿಯಾದ ಶೇ.75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ ಸದಸ್ಯ ಹಿರಿಯ ನಾಗರಿಕರ ತಾಲ್ಲೂಕುವಾರು ವಿವರ ಇಂತಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 123 ನ್ಯಾಯಬೆಲೆ ಅಂಗಡಿಗಳು, 1,517 ಪಡಿತರ ಚೀಟಿಗಳು ಇವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 151 ನ್ಯಾಯಬೆಲೆ ಅಂಗಡಿಗಳು, 1,127 ಪಡಿತರ ಚೀಟಿಗಳು ಇವೆ. ಹಿರಿಯೂರು ತಾಲ್ಲೂಕಿನಲ್ಲಿ 92 ನ್ಯಾಯಬೆಲೆ ಅಂಗಡಿಗಳು, 1,467 ಪಡಿತರ ಚೀಟಿಗಳು ಇವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 96 ನ್ಯಾಯಬೆಲೆ ಅಂಗಡಿಗಳು, 869 ಪಡಿತರ ಚೀಟಿಗಳು ಇವೆ. ಹೊಸದುರ್ಗ ತಾಲ್ಲೂಕಿನಲ್ಲಿ 110 ನ್ಯಾಯಬೆಲೆ ಅಂಗಡಿಗಳು, 921 ಪಡಿತರ ಚೀಟಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 50 ನ್ಯಾಯಬೆಲೆ ಅಂಗಡಿಗಳು, 435 ಪಡಿತರ ಚೀಟಿಗಳು ಇವೆ.

ration card karnataka
ration card karnataka

ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು 01 ರಿಂದ 05 ರೊಳಗಾಗಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ ಮುಖಾಂತರ ಪಡೆಯಬೇಕು. ನಂತರ ದಿನಾಂಕ 06 ರಿಂದ 15 ರೊಳಗೆ ದಿನಾಂಕವನ್ನು ನಿಗಧಿಪಡಿಸಿ, ನಿಗಧಿಪಡಿಸಿದ ದಿನದಂತೆ ಓ.ಟಿ.ಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮನೆಯ ಬಾಗಿಲಿಗೆ ಪಡಿತರವನ್ನು ವಿತರಿಸುತ್ತಿರುತ್ತಾರೆ.

ಆದರೆ ಪ್ರಸ್ತುತ ಪಡಿತರ ಚೀಟಿದಾರರಿಗೆ ಅನುಕೂಲವಾಗುವ ಸಲುವಾಗಿ ಪ್ರತಿ ಮಾಹೆ ಮೊದಲನೇಯ ದಿನಾಂಕದಿಂದ ಮಾಹೆಯ ಕೊನೆಯ ದಿನಾಂಕದವರೆಗೂ ನ್ಯಾಯಬೆಲೆ ಅಂಗಡಿ ಮಾಲೀಕರ ಲಾಗಿನ್‍ನಲ್ಲಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ.ಮುಖಾಂತರ ಪಡೆದು, ನಂತರ ದಿನಾಂಕವನ್ನು ನಿಗದಿಪಡಿಸಿ, ಓಟಿಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು ಶೇ.75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರ ಮನೆಯ ಬಾಗಿಲಿಗೆ ಪಡಿತರ ಆಹಾರಧಾನ್ಯವನ್ನು ವಿತರಿಸಲು ಅವಕಾಶ ಕಲ್ಪಿಸಲಾಗಿದೆ.

75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ (ಒಬ್ಬ) ಸದಸ್ಯ ಹಿರಿಯ ನಾಗರಿಕರು ಪಡಿತರವನ್ನು ತಮ್ಮ ಮನೆಯ ಬಾಗಿಲಿಗೆ ಪಡೆದು “ಅನ್ನಸುವಿಧ” ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Good news for state ration card holders: From now on ‘OTP’ is enough to get ‘ration’