ಬೆಂಗಳೂರು: ರೇಷನ್ ಕಾರ್ಡ್‌ಗೆ ಅರ್ಜಿ ಹಾಕಿ ಕಾಯುತ್ತಿದ್ದವರಿಗೆ ಗುಡ್‌ನ್ಯೂಸ್ ಅನ್ನು ಆಹಾರ ಸಚಿವ ಕೆಎಚ್ ಮುನಿಯಪ್ಪ ನೀಡಿದ್ದಾರೆ. ಹೌದು, ಅವರು ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವವ ಸಲುವಾಗಿ ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದವು, ಈ ಪೈಕಿ ಮಾನದಂಡವನ್ನು ಪೂರೈಸಿರುವ ಪೈಕಿ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಲಾಗಿದ್ದು, ಬಾಳಿ ಉಳಿದ ಮಂದಿಗೆ ಶೀಘ್ರದಲ್ಲಿ ಅಂದರೆ ಒಂದು ತಿಂಗಳೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂತ ಅವರು ಹೇಳಿದರು.
ಇದನ್ನು ಮಿಸ್ ಮಾಡದೇ ಓದಿ: ಕೋಳಿ ಮಾಂಸ, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ

ಇನ್ನೂ ಇದೇ ವೇಳೆ ಅವರು ಮಾತನಾಡುತ್ತ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಹತ್ತಿಕ್ಕಿವ ನಿಟ್ಟಿನಲ್ಲಿ ಎಪಿಎಲ್‌ಗೆ ಬದಲಾವಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಅಂಥ ತಿಳಿಸಿದರು. ಇನ್ನೂ ಈ ತಿಂಗಳ ಅಂತ್ಯದೊಳಗೆ ಪ್ರತಿ ಜಿಲ್ಲೆಗಳಲ್ಲಿ ಸಭೆ ನಡೆಸಿ, ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಹೊಸ ಒಳ ಮೀಸಲಾತಿ ಅನ್ವಯ, 3,517 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ನ್ಯಾಯಬೆಲೆ ಅಂಗಡಿಗಳು ದೊರೆಯಲಿವೆ ಅಂತ ತಿಳಿಸಿದರು.
ಈ ಬಾರಿ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅವಕಾಶ ನೀಡಿದೆ. ಇದರಂತೆ, ಈಗಾಗಲೇ 2.57 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ, ಕೇಂದ್ರ ಸರ್ಕಾರ 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಗೆ ಅವಕಾಶ ನೀಡಿದ್ದು, ಜೋಳ ಖರೀದಿಗೆ ಅಗತ್ಯ ಕ್ರಮವನ್ನು ವಹಿಸಲಿದ್ದಾರೆ ಅಂತ ಅವರು ತಿಳಿಸಿದರು. ಇನ್ನೂ ತಾಲೂಕು ಕಚೇರಿಯ ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲಾ ಕೇಂದ್ರ/ ನಗರ ವ್ಯಾಪ್ತಿಯಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಅಂತ ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದದಾರೆ.
Good news for those who have applied for and are waiting for a ration card













Follow Me