ಮೊಟ್ಟೆಯಲ್ಲಿ ತಿನ್ನುವುದರಿಂದ ಕ್ಯಾನ್ಸರ್: ಸಚಿವ ದಿನೇಶ್ ಗುಂಡೂರಾವ್’ ಹೇಳಿದ್ದೇನು ಗೊತ್ತಾ?

egg cancer news
egg cancer news

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯ ವಿಚಾರ ಬಿಸಿ ಬಿಸಿಯಾಗಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನು ಹೇಳಿದ್ದಾರೆ ಅಂತ ಮುಂದೆ ಓದಿ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಮೊಟ್ಟೆಯಲ್ಲಿ ಕ್ಯಾನ್ಸರ್‌ ಉಂಟುಮಾಡುವ ಅಂಶಗಳು ಕಂಡುಬಂದಿವೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವದಂತಿಗೆ ಜನರು ಭಯಪಡುವ ಅಗತ್ಯ ಇಲ್ಲ. ರಾಜ್ಯಾದ್ಯಂತ ಉಂಟಾಗಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಮೊಟ್ಟೆಗಳ ಬಗೆಗೆ ಉಂಟಾಗಿರುವ ಸಂಶಯಕ್ಕೆ ಅನುಸಾರವಾಗಿ ಪರೀಕ್ಷೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.

ಮೊಟ್ಟೆಯಲ್ಲಿ ತಿನ್ನುವುದರಿಂದ ಕ್ಯಾನ್ಸರ್: ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ವಿಧಿವಿಧಾನದಂತೆ ಡಾ; ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರ

ಮೊಟ್ಟೆಯಲ್ಲಿ ತಿನ್ನುವುದರಿಂದ ಕ್ಯಾನ್ಸರ್: ಪ್ರಧಾನಿ ಮೋದಿಯವರ ಪರೀಕ್ಷಾ ಭಾಷಣದಲ್ಲಿ 32 ಲಕ್ಷಕ್ಕೂ ಹೆಚ್ಚು ಜನರು ಭಾಗಿ

 

dinesh gundu rao
dinesh gundu rao

ಇದೇ ರೀತಿಯಲ್ಲಿ ಈ ಹಿಂದೆ ಮೊಟ್ಟೆ ವಿಚಾರದಲ್ಲಿ ವದಂತಿ ಹರಡಿದಾಗ ನಡೆಸಿದ್ದ ಪರೀಕ್ಷೆಗಳಲ್ಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಕಂಡುಬಂದಿರಲಿಲ್ಲ ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ. ನಾಗರೀಕರು ನಿರ್ಭೀತಿಯಿಂದ ಇರುವಂತೆ ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಎಗ್ಗೋಜ್ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ನಿಷೇಧಿತ ರಾಸಾಯನಿಕಗಳು ಇರಬಹುದು ಎಂಬ ಆತಂಕಕಾರಿ ಹೇಳಿಕೆಗಳು ಹರಿದಾಡುತ್ತಿವೆ. ವೀಡಿಯೊಗಳು, ಫಾರ್ವರ್ಡ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳು ವೇಗವಾಗಿ ಹರಡಿವೆ, ಅನೇಕ ಜನರು ತಮ್ಮ ದೈನಂದಿನ ಮೊಟ್ಟೆ ಸೇವನೆಯ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.

ಮಾರುಕಟ್ಟೆಯಲ್ಲಿ ಮೊಟ್ಟೆಗಳು ಮತ್ತು ಇತರ ಆಹಾರ ಉತ್ಪನ್ನಗಳು ಕಲಬೆರಕೆಯಿಲ್ಲದವು ಎಂದು FSSAI ನಂತಹ ಏಜೆನ್ಸಿಗಳು ಪರಿಶೀಲಿಸಬೇಕು, ಏಕೆಂದರೆ ಗ್ರಾಹಕರು ಇದನ್ನು ಪ್ರತ್ಯೇಕವಾಗಿ ಪರಿಶೀಲಿಸಲು ಸಾಧ್ಯವಿಲ್ಲ.

Eating eggs can cause cancer: Do you know what Minister Dinesh Gundurao said