ಹಾವೇರಿಯಲ್ಲಿ ‘KDM’ ಕಿಂಗ್ ಎಂದೇ ಹೆಸರುವಾಸಿಯಾಗಿದ್ದ ಹೋರಿ ‘ಹೃದಯಾಘಾತದಿಂದ’ ಸಾವು!

Hori, known as the 'KDM' King in Haveri, dies of 'heart attack'!
Hori, known as the 'KDM' King in Haveri, dies of 'heart attack'!

ಹಾವೇರಿ : ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹಾವೇರಿಯಲ್ಲಿ ಹೋರಿಗಳ ಸ್ಪರ್ಧೆ ಅಂದರೆ ಒಂದು ಹಬ್ಬದ ವಾತಾವರಣ ಇದ್ದಂತೆ. ಹೋರಿಗಳ ಸ್ಪರ್ಧೆಯಲ್ಲಿ ಹಾವೇರಿ ಹೋರಿಗಳು ಬಹಳ ಜನಪ್ರಿಯ ಆಗಿವೆ. ಇದೀಗ KDM ಕಿಂಗ್ ಎಂದೇ ಹೆಸರಾಗಿದ್ದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹೋರಿಯು ಹೃದಯಾಘಾತದಿಂದ ಮೃತಪಟ್ಟಿದೆ.

ಹೌದು ಉತ್ತರ ಕರ್ನಾಟಕದ ಅದರಲ್ಲೂ ಜಿಲ್ಲೆಯ ಜಾನಪದ ಸೊಗಡಿನ ಕ್ರೀಡೆ ಅಂದರೆ ಹೋರಿ ಹಬ್ಬ. ಇದಕ್ಕೆ ಹಟ್ಟಿಹಬ್ಬ ದನಬೆದರಿಸುವ ಸ್ಪರ್ಧೆ ಎಂತಲೂ ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಕೆಡಿಎಂ ಕಿಂಗ್ ತನ್ನದೇ ಆದ ಛಾಪು ಮೂಡಿಸಿತ್ತು. ಹಾವೇರಿ, ಹಾನಗಲ್, ಮಲೆನಾಡು ಪ್ರದೇಶ ಸೇರಿ ಬೇರೆ ಎಲ್ಲಿಯೇ ಕೊಬ್ಬರಿ ಹೋರಿ ಸ್ಪರ್ಧೆ ಇರಲಿ ಕೆಡಿಎಂ ಕಿಂಗ್ ಅಲ್ಲಿ ಹಾಜರಿರುತ್ತಿತ್ತು. ಕೆಡಿಎಂ ಕಿಂಗ್ ಸ್ಪರ್ಧೆಯಲ್ಲಿದ್ದರೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎನ್ನುವ ಮಾತಿತ್ತು.

Hori, known as the 'KDM' King in Haveri, dies of 'heart attack
Hori, known as the ‘KDM’ King in Haveri, dies of ‘heart attack

ಸ್ಪರ್ಧೆಯಲ್ಲಿ 11 ಬೈಕ್​, ಬಂಗಾರ, ಎತ್ತಿನಬಂಡಿ, ಟಿವಿ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದು ಹೆಸರು ಮಾಡಿತ್ತು. ಬೆಳ್ಳಿ ಬಸವಣ್ಣ, ಫ್ರಿಡ್ಜ್​, ತಿಜೋರಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿತ್ತು. ಕೆಡಿಎಂ ಕಿಂಗ್ 108 ಅಂದ್ರೆ ಈ ಹೋರಿ ಮುಟ್ಟುವವರು ಪಕ್ಕದಲ್ಲಿ ಆಂಬ್ಯುಲೆನ್ಸ್ ಎಂಬ ತುರ್ತು​ ವಾಹನ ಇಟ್ಟುಕೊಂಡೇ ಮುಟ್ಟಬೇಕು ಎನ್ನುವಂತಿತ್ತು.

ನಿನ್ನೆ ಮಾಲೀಕ ಕಾಂತೇಶ ರಾಯ್ಕರ್ ಅವರ ಮನೆ ಮುಂದೆ ಹೋರಿಯ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಸೇರಿದಂತೆ ತಮಿಳುನಾಡಿನಿಂದ ಆಗಮಿಸಿದ್ದ ಹೋರಿಯ ಅಭಿಮಾನಿಗಳು ನೆಚ್ಚಿನ ಹೋರಿಗೆ ಮಾಲಾರ್ಪಣೆ ಮಾಡಿ ಊದಬತ್ತಿ ಬೆಳಗಿ, ಅಕ್ಷತೆ ಹಾಕಿ ಪೂಜೆ ಸಲ್ಲಿಸಿದರು. ಅಗಲಿದ ಹೋರಿಯ ಆತ್ಮಕ್ಕೆ ಶಾಂತಿ ಕೋರಿ ಕೆಲ ನಿಮಿಷ ಮೌನ ಪ್ರಾರ್ಥನೆ ಕೂಡ ಸಲ್ಲಿಸಿದರು.

Hori, known as the ‘KDM’ King in Haveri, dies of ‘heart attack