G. Parameshwar | ಸಂಚಾರಿ ಪೊಲೀಸರಿಗೆ ‘ಹೈಜೀನ್ ಆನ್ ಗೋ’ ಮೊಬೈಲ್ ಟಾಯ್ಲೆಟ್ ವಾಹನಗಳು ಲಭ್ಯ : ಗೃಹ ಸಚಿವ ಡಾ. ಜಿ.ಪರಮೇಶ್ವರ್

'Hygiene on Go' mobile toilet vehicles available for traffic police: Home Minister Daji Parameshwara
'Hygiene on Go' mobile toilet vehicles available for traffic police: Home Minister Daji Parameshwara

ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರಿಗೆ ಮೂರು ‘ಹೈಜೀನ್ ಆನ್ ಗೋ’ ಹೆಸರಿನ ಮೊಬೈಲ್ ಟಾಯ್ಲೆಟ್ ವಾಹನಗಳು ಇನ್ನು ಮುಂದೆ ಲಭ್ಯವಾಗಲಿವೆ ಎಂದು ಗೃಹ ಸಚಿವ ಡಾಜಿ.ಪರಮೇಶ್ವರ್ ಅವರು ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ “ಹೈಜಿನ್ ಆನ್ ಗೋ” ವಾಹನಗಳಿಗೆ ಚಾಲನೆ ನೀಡಲು ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವರು. ಟ್ರಾಫಿಕ್ ಪೊಲೀಸರು ಹಗಲು-ಇರುಳು, ಚಳಿ-ಮಳೆ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಟ್ರಾಫಿಕ್ ಸಿಗ್ನಲ್‍ಗಳನ್ನು ನಿರ್ವಹಣೆ ಮಾಡುವಾಗ ಅವರಿಗ ಶೌಚಾಲಯಕ್ಕೆ ಹೋಗಿ ಬರುವುಕ್ಕೂ ಸಮಯ ಸಿಗುವುದಿಲ್ಲ. ಮಹಿಳಾ ಸಿಬ್ಬಂದಿಯವರು ಜನಬಿಡ ರಸ್ತೆಗಳಲ್ಲಿ ಕಾಯನಿರ್ವಹಿಸುವಾಗ ನ್ನೂ ಹೆಚ್ಚು ಕಷ್ಠ ಅನುಭವಿಸುತ್ತಾರೆ. ಇದನ್ನು ಮನಗಂಡ ಸರ್ಕಾರ ಈ ಸಮಸ್ಯೆ ಬಗೆಹರಿಸಲು “ಹೈಜಿನ್ ಆನ್ ಗೋ” ವಾಹನ ಲಭ್ಯವಾಗುವಂತೆ ಮಾಡಿದೆ ಎಂದರು.

ಇದನ್ನು ಮಿಸ್‌ ಮಾಡದೇ ಓದಿ: ಮನೆಯಲ್ಲಿ `ಗೀಸರ್’ ಬಳಸುವವರೇ ಎಚ್ಚರ

ಇದನ್ನು ಮಿಸ್‌ ಮಾಡದೇ ಓದಿ: ಇನ್ಮುಂದೆ ರಾಜ್ಯದ ಪೊಲೀಸರು ಸಿಬ್ಬಂದಿ ಅಪರಾಧ ಕೃತ್ಯಗಳಲ್ಲಿ ಪೊಲೀಸ್ ಶಿಸ್ತು ಕ್ರಮದ ಎಚ್ಚರಿಕೆ‌

 

“ಹೈಜಿನ್ ಆನ್ ಗೋ’ ಮೂರು ವಾಹನಗಳಿಗೆ 80 ಲಕ್ಷ ರೂ.ಗಳ ವೆಚ್ಚವಾಗಿದ್ದು, ಈ ವಾಹನಗಳು ಬೆಂಗಳೂರಿನ ಮೂರು ಅತ್ಯಧಿಕ ಸಂಚಾರ ದಟ್ಟಣೆಯ ಮಾರ್ಗಗಳಾದ ಧಣಿಸಂದ್ರ, ಆಡುಗೋಡಿ ಮತ್ತು ಮೈಸೂರು ರಸ್ತೆಗಳ 91 ಪೂರ್ವನಿಗಧಿತ ಜಾಗಗಳಲ್ಲಿ ಕಾಲಕಾಲಕ್ಕೆ ಬಂದು ನಿಲ್ಲುತ್ತವೆ. ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ ಟ್ರಾಫಿಕ್ ಪೊಲೀಸರು ಇವುಗಳನ್ನು ಬಳಸಿಕೊಳ್ಳಬಹುದು. ಒಟ್ಟಾರೆ 2.06 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

'Hygiene on Go' mobile toilet vehicles available for traffic police: Home Minister Daji Parameshwara
‘Hygiene on Go’ mobile toilet vehicles available for traffic police: Home Minister Daji Parameshwara

ಈ ವಾಹನಗಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವಿದ್ದು, ಹ್ಯಾಂಡ್ ವಾಶ್ ಮತ್ತು ನೈರ್ಮಲ್ಯ ಸಾಧನಗಳು, ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‍ಕಿನ್ ವ್ಯವಸ್ಥೆ, ಕನ್ನಡಿÀ ಮತ್ತು ಮೂಲಭೂತ ಸೌಕಯಗಳು, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ಸಲಕರಣೆ, ಜಿಪಿಎಸ್ ಟ್ರ್ಯಾಕಿಂಗ್, ಹೊರಾವರಣದಲ್ಲಿ ಸಿಸಿಟಿವಿ ಕ್ಯಾಮೆರಾ, ರಸ್ತೆ ಸುರಕ್ಷತೆಗಾಗಿ ಎಲ್ ಇಡಿ ಡಿಸ್‍ಪ್ಲೇ ಅಳವಡಿಸಲಾಗಿದೆ.

'Hygiene on Go' mobile toilet vehicles available for traffic police: Home Minister Daji Parameshwara
‘Hygiene on Go’ mobile toilet vehicles available for traffic police: Home Minister Daji Parameshwara

ಟ್ರಾಫಿಕ್ ಪೊಲೀಸರು ನಿಸರ್ಗದ ಕರೆ ಬಂದಾಗ ದೇಹಬಾಧೆ ತೀರಿಸಿಕೊಳ್ಳಲು ಸಾಧ್ಯವಾಗದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇವರ ಸಮಸ್ಯೆ ಪರಿಹಾರಕ್ಕೆ ರೆನಾಲ್ಟ್ ಕಂಪನಿಯವರು “ಹೈಜಿನ್ ಆನ್ ಗೋ” ವಾಹನ ಸಿದ್ಧಪಡಿಸಿರುವುದಕ್ಕಾಗಿ ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಹಾಗೂ ರೆನಾಲ್ಟ್ ನಿಸಾನ್ ಕಂಪನಿಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

‘Hygiene on Go’ mobile toilet vehicles available for traffic police: Home Minister Dr. G. Parameshwar