ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ‘ಸಾಂದೀಪನಿ ಶಿಷ್ಯವೇತನ’ ಯೋಜನೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡೆಳಿಯು ‘ಸಾಂದೀಪನಿ ಶಿಷ್ಯವೇತನ’ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಸಕಾಲದಲ್ಲಿ ನೀಡುವ ಮೂಲಭೂತ ಉದ್ದೇಶವನ್ನು ಹೊಂದಿರುತ್ತದೆ. 2025-26ನೇ ಸಾಲಿನ ಈ ಯೋಜನೆಗೆ 2026 ನೇ ಫೆಬ್ರವರಿ 28 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ಇನ್ಮುಂದೆ ತತ್ಕಾಲ್ ರೈಲಿನ ಟಿಕೆಟ್ ಬುಕ್ಕಿಗ್ಗೆ OTP ಕಡ್ಡಾಯ
ಮಂಡಳಿಗೆ ಮಂಜೂರಾದ ಸಾಂದೀಪನಿ ಶಿಷ್ಯವೇತನ ಯೋಜನೆಯಲ್ಲಿ ಉನ್ನತ ಶಿಕ್ಷಣ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಾಂದೀಪನಿ ಶಿಷ್ಯವತನ ಯೋಜನೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅಂದರೆ ಪಿ.ಯು.ಸಿ, ಡಿಪ್ಲೋಮಾ ಹಾಗೂ ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚವಾಗಿ ರೂ. 15,000/- ಗಳನ್ನು ನೀಡಲಾಗುವುದು.

ಸಾಂದೀಪನಿ ಶಿಷ್ಯವತನ ಯೋಜನೆಯ ಮುಂದುವರೆದ ಭಾಗವಾಗಿ ಪದವಿ / ಸ್ನಾತಕೋತ್ತರ ವಿವಿಧ ಕೋರ್ಸ್ ಗಳಿಗೆ (ಸಿಇಟಿ ಅಥವಾ UG PG entrance exam, NEET) ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅರ್ಹತೆ ಪಡೆದು ದಾಖಲಾದ ವಿದ್ಯಾರ್ಥಿಗಳು ದಾಖಲಾತಿಗೆ ಪಾವತಿಸಿರುವ ಸರ್ಕಾರಿ ಶುಲ್ಕದ 2/3 ಭಾಗವನ್ನು ಗರಿಷ್ಠ ಮೊತ್ತ ರೂ.1.00 ಲಕ್ಷಗಳಿಗೆ ಮಿತಿಗೊಳಿಸಿ ಪಾವತಿ ಮಾಡಲಾಗುವುದು. ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಆಸಕ್ತರು ವೆಬ್ ಸೈಟ್: State Scholarship Portal: https://ssp.postmatric.karnataka.gov.in ನ ಮೂಲಕ ಅರ್ಜಿಯನ್ನು ಫೆಬ್ರವರಿ 28 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 080 29605888 ಹಾಗೂ ಇ-ಮೇಲ್ [email protected] / [email protected] ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
2024 ರ ಏಕಲವ್ಯ ಪ್ರಶಸ್ತಿ, ವಿವಿಧ ಕ್ರೀಡಾ ಪ್ರಶಸ್ತಿ ಹಾಗೂ ನಗದು ಪ್ರೋತ್ಸಾಹಧನಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಏಕಲವ್ಯ ಪ್ರಶಸ್ತಿ -2024, ಜೀವಮಾನ ಸಾಧನೆ ಪ್ರಶಸ್ತಿ-2024, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ-2024, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ-2024, ಗುರಿ-ಒಲಂಪಿಕ್ ಪದಕ, 2023 ಮತ್ತು 2024 ರ ಕ್ರೀಡಾ ಸಾಧನೆಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆ ಹಾಗೂ ಕ್ರೀಡಾ ವಿದ್ಯಾರ್ಥಿ ವೇತನ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 10 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಸಹಕಾರಿಯಾಗುವಂತೆ ಈ ಸೇವೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 3 ಕ್ಕೆ ನಿಗಧಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಡಿಸೆಂಬರ್ 10 ವರೆಗೆ ವಿಸ್ತರಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಆನ್ಲೈನ್ನಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ https://sevasindhuservices.karnataka.gov.in ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Sandipani Scholarship is primarily a program by the Karnataka State Brahmin Development Board to provide financial assistance for higher education to economically weaker students from the Brahmin community in Karnataka.












Follow Me