ಬೆಂಗಳೂರು: ಒಂದು ವಾರದಲ್ಲಿ ಗೃಹಲಕ್ಷ್ಮಿಯ (Gruhalakshmi scheme) 23ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಹಣವನ್ನು ಬಿಡುಗಡೆ ಮಾಡಲಾಗುವುದು ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ (Minister Lakshmi Hebbalwar) ಭರವಸೆ ನೀಡಿದ್ದಾರೆ.
ಅವರು ದೇವನಹಳ್ಳಿಯಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 1.27ಕೋಟಿ ಫಲಾನುಭವಿಗಳಿದ್ದಾರೆ. ಈವರೆಗೆ 22 ಕಂತಿನ ಯೋಜನೆಯ ಹಣ ಜಮಾವಣೆಯಾಗಿದೆ. ಈವರೆಗೂ ತಲಾ 44000 ರೂ ಖಾತೆಗೆ ಹಾಕಲಾಗಿದೆ. ಇದೀಗ ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣವನ್ನು ಒಂದು ವಾರದಲ್ಲಿ ಮಹಿಳೆಯರ ಖಾತೆಗೆ ಕಳುಹಿಸಲಾಗುವುದು ಅಂತ ತಿಳಿಸಿದರು.
ಇದನ್ನು ಮಿಸ್ ಮಾಡದೇ ಓದಿ: ಇಲ್ಲಿವೆ `ಕರ್ನಾಟಕದ CM, DCM, ಎಲ್ಲಾ ಸಚಿವರುಗಳ ದೂರವಾಣಿ ಸಂಖ್ಯೆ’ ಪಟ್ಟಿ.!
ಇದನ್ನು ಮಿಸ್ ಮಾಡದೇ ಓದಿ: ದ್ವಿಚಕ್ರ ವಾಹನಗಳಲ್ಲಿ ‘ಮಕ್ಕಳಿಗೆ ಹೆಲ್ಮೆಟ್’ ಕಡ್ಡಾಯ, ಕರ್ನಾಟಕ ಹೈಕೋರ್ಟ್…!
ಇದನ್ನು ಮಿಸ್ ಮಾಡದೇ ಓದಿ: ಇಲ್ಲಿವೆ `ಕರ್ನಾಟಕದ CM, DCM, ಎಲ್ಲಾ ಸಚಿವರುಗಳ ದೂರವಾಣಿ ಸಂಖ್ಯೆ’ ಪಟ್ಟಿ.!
ಇದೇ ವೇಳೆ ಅವರು ಮಾತನಾಡಿ ಗೃಹಲಕ್ಷ್ಮಿ ಬ್ಯಾಂಕ್ (Gruhalakshmibank) ಯೋಜನೆಯು ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಶುರು ಮಾಡಲಾಗುತ್ತಿದ್ದು ಮಹಿಳೆಯು ಒಂದು ಸಾವಿರ ರೂ.ಗಳಿಂದ ಖಾತೆಯನ್ನು ಪ್ರಾರಂಭಿಸಿ ಪ್ರತಿ ತಿಂಗಳು 200 ರೂಗಳನ್ನು ಉಳಿತಾಯ ಮಾಡಿದರೆ, ಆರು ತಿಂಗಳ ನಂತರ ಮಹಿಳೆಯು 30 ಸಾವಿರ ರೂ.ಗಳಿಂದ 3 ಲಕ್ಷಗಳ ವರೆಗೆ ರಾಷ್ಟ್ರೀಕೃತ ಬ್ಯಾಂಕ್ ದರದಲ್ಲಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಅಂತ ತಿಳಿಸಿದರು.

ಇನ್ನೂ ಇದೇ ವೇಳೆ ಅವರು ಮಾತನಾಡುತ್ತ ಇದೇ ನವೆಂಬರ್ 28 ರಂದು ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಅಕ್ಕ ಪಡೆ ಪ್ರಾರಂಭವಾಗುತ್ತಿದೆ. ಇದರಲ್ಲಿ ಆರು ಜನ ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಮಹಿಳೆಯರು ಕ್ಯೂಆರ್ ಕೋಡ್ ಆಪ್ ಅಥವಾ ಫೋನ್ ನಂಬರ್ ಮೂಲಕ ಅಕ್ಕಪಡೆಯನ್ನು ಸಂಪರ್ಕಿಸಿ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ ಅಂತ ತಿಳಿಸಿದರು.ಇದಲ್ಲದೇ ಕಳೆದ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನವನ್ನು 1000 ಹೆಚ್ಚಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತೊಂದು ಸಾವಿರ ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದು ಅಂತ ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ(Government of Karnataka) ಯೋಜನೆಯಾಗಿದ್ದು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಮನೆಯ ಖರ್ಚುಗಳನ್ನು ನಿರ್ವಹಿಸಲು ಸಹಾಯ ಮಾಡಲು ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ₹ 2,000 ಆರ್ಥಿಕ ನೆರವು ನೀಡುತ್ತದೆ. ಅರ್ಹತೆ ಪಡೆಯಲು, ಅರ್ಜಿದಾರರು ಕರ್ನಾಟಕ ಮೂಲದ ಕುಟುಂಬದ ಮಹಿಳೆಯಾಗಿರಬೇಕು, ಅಂತ್ಯೋದಯ, ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ (Ration card)ಯಲ್ಲಿ ಕುಟುಂಬದ ಮುಖ್ಯಸ್ಥರಾಗಿ ಪಟ್ಟಿ ಮಾಡಿರಬೇಕು ಮತ್ತು ಆದಾಯ ತೆರಿಗೆ ಅಥವಾ ಜಿಎಸ್‌ಟಿ ಸಲ್ಲಿಸುವವರಲ್ಲ. ನೇರ ಬ್ಯಾಂಕ್ ವರ್ಗಾವಣೆ (DBT) ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಲಾಭವನ್ನು ಪಾವತಿಸಲಾಗುತ್ತದೆ.













Follow Me