DIVYA VASANTHA : ಬಂಧನದ ಭೀತಿಯಲ್ಲಿ ಕನ್ನಡದ ANCHOR ದಿವ್ಯಾ ವಸಂತ…!

ಬೆಂಗಳೂರು: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ (Divya Vasantha) ವಿರುದ್ದ ದೂರು ದಾಖಲಾಗಿದೆ.

ಸ್ವಯಂ ಘೋಷಿತ ಗುರೂಜಿ ಆನಂದ ಎನ್ನುವವವರ ಕಾರು ಅಡ್ಡಗಟ್ಟಿ ಅ***ಶ್ಲೀಲ ಪದಗಳಿಂದ ನಿಂದಿಸಿ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಹಾಗೂ ಜೀವಬೆದರಿಕೆ ಹಾಕಿದ್ದಾಳೆ ಈ ವಸಂತ ಎನ್ನಲಾಗಿದೆ. ಈ ಸಂಬಂಧ ಆನಂದ ಎನ್ನುವವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆಕೆಯ ವಿರುದ್ದ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

Divya Vasantha

ಸದ್ಯ ಚಿಕ್ಕಜಾಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ದಿವ್ಯ ವಸಂತ ಬ್ಲ್ಯಾಕ್‌ ಮಾಡಿದ್ದಾಳೆ ಎನ್ನಲಾಗಿದೆ. ಸಾಮ್ರಾಟ್ ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲೂ ಆಕೆ ಆನಂದ ವಿರುದ್ದ ತೇಜೋವಧೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಕರಣದಲ್ಲಿ ಕೃಷ್ಣಮೂರ್ತಿ ಎ1 ಆರೋಪಿಯಾಗಿದ್ದರೆ, ದಿವ್ಯಾ ವಸಂತ ಎ2 ಆರೋಪಿಯಾಗಿದ್ದು, ಇಬ್ಬರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

Divya Vasantha

ಈ ಹಿಂದೆ ಕೂಡ ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. . ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಆಗ ಆರೋಪಿಸಲಾಗಿತ್ತು. ಸದ್ಯ ಮಾಧ್ಯಮವನ್ನೇ ಈಕೆ ಬಂಡಳವಾಳ ಮಾಡಿಕೊಂಡಿದ್ದು, ಈಕೆಯ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಜನತೆ ಆಗ್ರಹಿಸಿದ್ದಾರೆ. ಇದಲ್ಲದೇ ಅನಂದ್ ಎನ್ನುವರು ಕೂಡ ಕೆಲ ದಿನಗಳ ಹಿಂದೆ ತಮ್ಮ ಮಗನಿಗೆ ಸರಿಯಾಗಿ ಬುದ್ದಿ ಹೇಳದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.