ಹಿಂದೂ ಧರ್ಮ, ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಮಂಗಳೂರು ಯುವತಿ, ಪೊಲೀಸರಿಂದ ದೂರು ದಾಖಲು..!

Mangaluru woman booked for posting anti-Hindu, anti-national posts

ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯೆಟಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಅಫೀಫ ಫಾರೀಮಾ, ಸೋಷಿಯಲ್‌ ಮೀಡಿಯಾದಲ್ಲಿ . ‘help stinky hindus are behind me’ (ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ). am i indian? yes. do i hate india? yes (ಹೌದು, ನಾನು ಭಾರತೀಯಳು.. ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ) ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದು ಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಈ ನಡುವೆ ಆಕೆ ಸಾಮಾಜಿಕ ಮಾಧ್ಯಮದಲ್ಲಿ ಬರೆದು ಕೊಂಡ ಬಳಿಕ ಆಸ್ಪತ್ರೆಯವರು ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದೇ ವೇಳೆ ಆಕೆ ವಿರುದ್ದ ಪೊಲೀಸರು FIR ದಾಖಲಿಸಿದ್ದಾರೆ. ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆಸ್ಪತ್ರೆಯ ಹೆಚ್‌ಆರ್ ಅಧಿಕಾರಿ ಮಹಮ್ಮದ್ ಅಸ್ಲಾಂ ಅವರಿಂದ ಅಫೀಫ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದರಂತೆ ಘಟನೆ ಸಂಬಂಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಆರೋಪಿ ವೈದ್ಯೆ ಆಫೀಫ ವಿರುದ್ಧ BNS ಕಲಂ 196 (1) (a), 353 (2) ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.