ಬೆಂಗಳೂರು/ಧಾರವಾಡ: ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪಿನ ಘಳಿಗೆ ಬಂದಿದೆ. ಮಾಜಿ ಸಚಿವ ಮತ್ತು ಪ್ರಭಾವಿ ಕಾಂಗ್ರೆಸ್ ನಾಯಕ, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳ ಭವಿಷ್ಯ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರ್ಧಾರವಾಗಗಿದೆ . 2016 ರಿಂದಲೂ ನಿರಂತರವಾಗಿ ಸುದ್ದಿಯಲ್ಲಿರುವ ಈ ಪ್ರಕರಣವು ಇಂದು ತನ್ನ ಅಂತಿಮ ತೀರ್ಪಿನ ಹಂತಕ್ಕೆ ಬಂದು ನಿಂತಿದ್ದು, ಇಡೀ ರಾಜ್ಯದ ಕಣ್ಣು ನ್ಯಾಯಾಲಯದತ್ತ ನೆಟ್ಟಿತ್ತು. ಮಾಜಿ ಸಚಿವ ವಿನಯ್ ಕುಲಕರ್ಣಿ ಅಪರಾಧಿ ಅಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರ್ಧಾರವಾಗಿದೆ.
ಇದನ್ನೂ ಓದಿ : CBSE 10ನೇ ತರಗತಿ ಫಲಿತಾಂಶ 2026 ಪ್ರಕಟ: ಅಂಕಪಟ್ಟಿ ಡೌನ್ಲೋಡ್ ಮಾಡಲು ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ
ಕೋರ್ಟ್ ಆವರಣದಲ್ಲಿ ಬಿಗುವಿನ ವಾತಾವರಣ: ಆರೋಪಿಗಳ ಹಾಜರಾತಿ
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿನಯ್ ಕುಲಕರ್ಣಿ ಅವರ ನಿವಾಸದ ಸುತ್ತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ, ಪ್ರಕರಣದ 15ನೇ ಆರೋಪಿ (A15) ಆಗಿರುವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.
ಆರೋಪಿಗಳ ಪಟ್ಟಿಯಲ್ಲಿ ವಿಕ್ರಂ ಬಳ್ಳಾರಿ (A2), ಕೀರ್ತಿಕುಮಾರ್ ಬೆಳ್ಳಟ್ಟಿ (A3), ಸಂದೀಪ್ ಸವದತ್ತಿ (A4), ವಿನಾಯಕ್ ಕಟಗಿ (A5), ಮಹಾಬಳೇಶ್ವರ ಹೊಂಗಲ (A6), ಸಂತೋಷ್ ಸವದತ್ತಿ (A7), ದಿನೇಶ್ (A8), ಅಶ್ವತ್ (A9), ಸುನಿಲ್ (A10), ನಜೀರ್ ಅಹಮದ್ (A11), ಶಾನವಾಜ (A12), ನೂತನ್ (A13), ಹರ್ಷಿತ್ ಸಿ (A14), ಚಂದ್ರಶೇಖರ್ ಇಂಡಿ (A16), ವಿಕಾಸ್ ಕಲ್ಬುರ್ಗಿ (A18), ಚನ್ನಕೇಶವ ಟಿಂಗರಿಕರ (A19), ವಾಸುದೇವ್ ನಾಯಕ (A20) ಮತ್ತು ಸೋಮಶೇಖರ್ ನ್ಯಾಮಗೌಡರ (A21) ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ವಿಶೇಷವೆಂದರೆ, ತಂದೆಯ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ವಿನಯ್ ಕುಲಕರ್ಣಿ ಅವರ ಮಕ್ಕಳು ಸಹ ನ್ಯಾಯಾಲಯಕ್ಕೆ ಆಗಮಿಸಿದ್ದು, ತೀರ್ಪಿಗಾಗಿ ಕಾದು ಕುಳಿತ್ತಿದ್ದರು.
ಪ್ರಕರಣದ ಹಿನ್ನೆಲೆ: ಏನಿದು ಯೋಗೇಶ್ ಗೌಡ ಕೊಲೆ ಕೇಸ್?
ಜೂನ್ 15, 2016 ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆಯು ಕೇವಲ ವೈಯಕ್ತಿಕ ದ್ವೇಷವೋ ಅಥವಾ ರಾಜಕೀಯ ಪ್ರೇರಿತವೋ ಎಂಬ ಪ್ರಶ್ನೆ ಅಂದಿನಿಂದಲೂ ಚರ್ಚೆಯಲ್ಲಿದೆ. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ, ಯೋಗೇಶ್ ಗೌಡ ಅವರ ಕುಟುಂಬಸ್ಥರು ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.
ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (CBI) ವಹಿಸಲಾಯಿತು. ಸಿಬಿಐ ತನಿಖೆ ಆರಂಭವಾದ ಮೇಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. ಸುಮಾರು 200ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿದ ಸಿಬಿಐ, ಹತ್ಯೆಯ ಹಿಂದೆ ದೊಡ್ಡ ಮಟ್ಟದ ರಾಜಕೀಯ ಸಂಚು ಇರುವುದನ್ನು ಪತ್ತೆ ಹಚ್ಚಿತು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಪ್ರಸ್ತುತ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಅವರು ಕೊಲೆಯ ‘ಮಾಸ್ಟರ್ ಮೈಂಡ್’ ಅಥವಾ ಒಳಸಂಚು ರೂಪಿಸಿದ ವ್ಯಕ್ತಿ (A15) ಎಂದು ಉಲ್ಲೇಖಿಸಲಾಗಿದೆ. ಕೇವಲ ವೈಯಕ್ತಿಕ ದ್ವೇಷಕ್ಕಾಗಿ ಅಡಗಿದ್ದವರನ್ನು ಬಳಸಿ ಯೋಗೇಶ್ ಗೌಡರನ್ನು ಹತ್ಯೆ ಮಾಡಿಸಲಾಗಿದೆ ಎಂಬುದು ಸಿಬಿಐ ವಾದ ಮಾಡಿತ್ತು., ಒಟ್ಟಾರೆಯಾಗಿ, ದಶಕದ ಹಳೆಯ ಈ ಹತ್ಯೆ ಪ್ರಕರಣವು ಇಂದು ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿದೆ.