2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ : ಶಾಲೆ ಆರಂಭ ಮತ್ತು ರಜೆಗಳ ಸಂಪೂರ್ಣ ವಿವರ

ಬೆಂಗಳೂರು : ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿಗೆ (Academic Year) ಸಂಬಂಧಿಸಿದಂತೆ ಶಾಲಾ ಅವಧಿ, ರಜಾ ದಿನಗಳು ಹಾಗೂ ವಾರ್ಷಿಕ ಕ್ರಿಯಾಯೋಜನೆಯನ್ನು ಒಳಗೊಂಡ ಅಧಿಕೃತ ಜ್ಞಾಪನ ಪತ್ರವನ್ನು ಆಯುಕ್ತರ ಕಚೇರಿಯಿಂದ ಹೊರಡಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ರವರ ಅಧಿಸೂಚನೆ ಸಂಖ್ಯೆ: DPAR/16/HHL/2024 ರ ದಿನಾಂಕ 21.11.2024 ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲಿದ್ದು, ಮುಂದಿನ 2026-27ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2026 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಪ್ರಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯಕವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ತಿಳಿಸಿದೆ.

ಶೈಕ್ಷಣಿಕ ವರ್ಷದ ಆರಂಭ ಮತ್ತು ಅವಧಿಗಳು
ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಮುಂದಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಮೇ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಮತ್ತು ಶಿಕ್ಷಕರಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಈ ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಲಾಗಿದೆ

 [ಕನ್ನಡ ವಿವರಣೆ: ಕರ್ನಾಟಕ ಶಾಲಾ ರಜೆ ಪಟ್ಟಿ 2026-27] - [English Keywords: Karnataka School Holiday List 2026-27, Academic Calendar, Education Department Karnataka]
2026-27ನೇ ಶೈಕ್ಷಣಿಕ ಸಾಲಿನ ಶಾಲಾ ಅವಧಿ ಮತ್ತು ರಜೆ ದಿನಗಳ ವಿವರವಾದ ಇನ್ಫೋಗ್ರಾಫಿಕ್.

2026-27ನೇ ಶೈಕ್ಷಣಿಕ ಸಾಲಿನ ಮೊದಲನೇ ಅವಧಿಯು (First Term) ದಿನಾಂಕ 29-05-2026 ರಿಂದ ಪ್ರಾರಂಭವಾಗಿ 02-10-2026 ರವರೆಗೆ ಇರಲಿದೆ. ಇದಾದ ನಂತರ ಅಕ್ಟೋಬರ್ ತಿಂಗಳಿನಲ್ಲಿ ದಸರಾ ರಜೆ ಇರಲಿದ್ದು, ಎರಡನೇ ಅವಧಿಯು (Second Term) ದಿನಾಂಕ 22-10-2026 ರಿಂದ ಆರಂಭಗೊಂಡು 10-04-2027 ರವರೆಗೆ ಮುಂದುವರಿಯಲಿದೆ.

ಶೈಕ್ಷಣಿಕ ವರ್ಷದ ಒಟ್ಟು ದಿನಗಳಲ್ಲಿ ಬೋಧನೆ ಮತ್ತು ಕಲಿಕೆಗೆ ಗರಿಷ್ಠ ಸಮಯವನ್ನು ಮೀಸಲಿಡಲಾಗಿದೆ. ಈ ಸಾಲಿನಲ್ಲಿ ಒಟ್ಟು 245 ಶಾಲಾ ಕರ್ತವ್ಯದ ದಿನಗಳು (Working Days) ಲಭ್ಯವಿವೆ ಎಂದು ಇಲಾಖೆ ತಿಳಿಸಿದೆ.

ಅವಧಿ ದಿನಾಂಕ
ಮೊದಲನೇ ಅವಧಿ ದಿನಾಂಕ: 29.05.2026 ರಿಂದ ದಿನಾಂಕ: 02.10.2026ರವರೆಗೆ
ಎರಡನೇ ಅವಧಿ ದಿನಾಂಕ: 22.10.2026 ರಿಂದ ದಿನಾಂಕ: 10.04.2027ರವರೆಗೆ

ಇದನ್ನೂ ಓದಿ : ವಾರದ ಮೊದಲೇ ದಿನವೇ ಭರ್ಜರಿ ಏರಿಕೆ ಕಂಡ ಇಂದಿನ ಅಡಿಕೆ ದರ ಯಾವ್ಯಾವ ಮಾರುಕಟ್ಟೆಗಳಲ್ಲಿ ಎಷ್ಟಿದೆ.?

ಇದನ್ನೂ ಓದಿ : ಅಕ್ಷಯ ತೃತೀಯದಂದು ಮಾಲವ್ಯ ರಾಜಯೋಗ: ಈ 6 ರಾಶಿಯವರ ಬದುಕಿನಲ್ಲಿ ಚಿನ್ನದಂತಹ ಸುಗ್ಗಿ ಕಾಲ

ರಜೆ ದಿನಾಂಕ
ದಸರಾ ರಜೆ ದಿನಾಂಕ: 03.10.2026 ರಿಂದ ದಿನಾಂಕ: 21.10.2026 ರವರೆಗೆ
ಬೇಸಿಗೆ ರಜೆ ದಿನಾಂಕ: 11.04.2027 ರಿಂದ ದಿನಾಂಕ: 28.05.2027ರವರೆಗೆ
Karnataka School Academic Calendar 2026-27 Infographic
ಈ ಚಿತ್ರವು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ 2026-27ನೇ ಸಾಲಿನ ಶಾಲಾ ಪ್ರಾರಂಭದ ದಿನಾಂಕ, ದಸರಾ ರಜೆ, ಬೇಸಿಗೆ ರಜೆ ಮತ್ತು ಒಟ್ಟು ಕೆಲಸದ ದಿನಗಳ ಮಾಹಿತಿಯನ್ನು ಒಳಗೊಂಡಿದೆ.
Karnataka School Academic Calendar 2026-27 Infographic
ಈ ಚಿತ್ರವು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ 2026-27ನೇ ಸಾಲಿನ ಶಾಲಾ ಪ್ರಾರಂಭದ ದಿನಾಂಕ, ದಸರಾ ರಜೆ, ಬೇಸಿಗೆ ರಜೆ ಮತ್ತು ಒಟ್ಟು ಕೆಲಸದ ದಿನಗಳ ಮಾಹಿತಿಯನ್ನು ಒಳಗೊಂಡಿದೆ.
Karnataka School Academic Calendar 2026-27 Infographic
ಈ ಚಿತ್ರವು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ 2026-27ನೇ ಸಾಲಿನ ಶಾಲಾ ಪ್ರಾರಂಭದ ದಿನಾಂಕ, ದಸರಾ ರಜೆ, ಬೇಸಿಗೆ ರಜೆ ಮತ್ತು ಒಟ್ಟು ಕೆಲಸದ ದಿನಗಳ ಮಾಹಿತಿಯನ್ನು ಒಳಗೊಂಡಿದೆ.
ಕ್ರ.ಸಂ ತಿಂಗಳು ಮತ್ತು ವರ್ಷ ಲಭ್ಯವಿರುವ ತಿಂಗಳ ಒಟ್ಟು ದಿನಗಳು ಒಟ್ಟು ರಜಾ ದಿನಗಳು ಲಭ್ಯವಿರುವ ಶಾಲಾ ಕರ್ತವ್ಯದ ದಿನಗಳು
01 ಮೇ-2026 31 28 02
02 ಜೂನ್-2026 30 05 25
03 ಜುಲೈ-2026 31 04 27
04 ಆಗಸ್ಟ್-2026 31 06 25
05 ಸೆಪ್ಟೆಂಬರ್ 2026 30 05 25
06 ಅಕ್ಟೋಬರ್ 2026 31 20 11
07 ನವೆಂಬರ್ 2026 30 07 23
08 ಡಿಸೆಂಬರ್ 2026 31 05 26
09 ಜನವರಿ 2027 31 06 25
10 ಫೆಬ್ರವರಿ 2027 28 04 24
11 ಮಾರ್ಚ್ 2027 31 07 24
12 ಏಪ್ರಿಲ್ 2027 30 22 08
ಒಟ್ಟು 365 119 245

ಕ್ರ.ಸಂ ವಿವರ ದಿನಗಳು
01 2026-27ನೇ ಶೈಕ್ಷಣಿಕ ಲಭ್ಯವಾಗುವ ಒಟ್ಟು ಶಾಲಾ ಕರ್ತವ್ಯದ ದಿನಗಳು 245
02 ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ (FA & SA) 26
03 ಪಠ್ಯೇತರ ಚಟುವಟಿಕೆಗಳ/ ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 24
04 ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10
05 ಶಾಲಾ ಸ್ಥಳೀಯ ರಜೆಗಳು 04
06 ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯಬಹುದಾದ ಕರ್ತವ್ಯ ದಿನಗಳು 181

ವಿಶೇಷ ಸೂಚನೆಗಳು:
A. 2025-26ನೇ ಶೈಕ್ಷಣಿಕ ಸಾಲಿನ ಮುಕ್ತಾಯ ಹಂತದಲ್ಲಿ ನಿರ್ವಹಿಸಬೇಕಾದ ಅಂಶಗಳ ಕುರಿತು:

  1. 1 ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಫಲಿತಾಂಶವನ್ನು ಶೇ 100 ಅಂಕಗಳಿಗೆ ಕ್ರೋಢೀಕರಿಸಿ ನಿಯಮಾನುಸಾರ ಗ್ರೇಡ್ ದಾಖಲಿಸಿ SATS ನಲ್ಲಿ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ: 07-04-2026 ರೊಳಗೆ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ದಿನಾಂಕ: 08-04-2026ರೊಳಗೆ ಇಂದೀಕರಿಸತಕ್ಕದ್ದು.
  2. 5, 8 ಮತ್ತು 9ನೇ ತರಗತಿಯ SA-2 ಮೌಲ್ಯಾಂಕನ ಸೇರಿದಂತೆ ಉಳಿದ 1 ರಿಂದ 9 ನೇ ತರಗತಿಗಳ ಫಲಿತಾಂಶವನ್ನು ನಿಯಮಾನುಸಾರ ವಿಶ್ಲೇಷಿಸಿ, ನಿಗದಿಪಡಿಸಿದಂತೆ ದಿನಾಂಕ 09.04.2026 ರಂದು ಪ್ರಾಥಮಿಕ ಶಾಲಾ ಹಂತದಲ್ಲಿ ಹಾಗೂ ದಿನಾಂಕ 10.04.2026 ರಂದು ಪ್ರೌಢಶಾಲಾ ಹಂತದಲ್ಲಿ ಎರಡನೇ ಸಮುದಾಯ ದತ್ತ ಶಾಲೆ/ಪೋಷಕರ ಸಭೆ ಕರೆದು ಪ್ರಕಟಣೆ ಮಾಡಲು ಈಗಾಗಲೇ ದಿನಾಂಕ: 4.4.2026 ರಂದು ಸುತ್ತೋಲೆಯನ್ನು ಹೊರಡಿಸಲಾಗಿದೆ.
  3. ದಿನಾಂಕ: 14-04-2026 ರಂದು ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಆಚರಿಸತಕ್ಕದ್ದು.
  4. ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್-2026 ರ ಮೊದಲನೇ ವಾರದಲ್ಲಿ ಅನುಮೋದನೆ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಹೊಂದುವುದು.
  5. 2026-27 ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ 02 ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸಂಬಂಧಿಸಿದ ತಾಲೂಕುಗಳಿಗೆ ಸರಬರಾಜು ಆದ ತಕ್ಷಣ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸುವ ಕುರಿತು ಕ್ರಮವಹಿಸುವುದು.
  6. ದಿನಾಂಕ: 11-04-2026 ರಿಂದ ದಿನಾಂಕ: 28-05-2026 ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಿರುವುದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಹಾಗೂ ಬರಪೀಡಿತ ತಾಲೂಕುಗಳಲ್ಲಿ ರಜಾ ಅವಧಿಯಲ್ಲಿ ಮಕ್ಕಳಿಗೆ ಬಿಸಿ ಊಟ ನೀಡುವ ಕುರಿತು ಸಂಬಂಧಿಸಿದ ನಿರ್ದೇಶನಾಲಯದಿಂದ ನೀಡುವ ಸೂಚನೆಗಳಂತೆ ಕ್ರಮವಹಿಸುವುದು. ಒಂದು ವೇಳೆ ಈ ಅವಧಿಯಲ್ಲಿ ಅಧಿಕೃತ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಸಲು ಸಂಬಂಧಿಸಿದ ಪ್ರಾಧಿಕಾರ ಕೋರಿದ್ದಲ್ಲಿ ಸಹಕರಿಸಲು ಸೂಚಿಸಿದೆ.

B. 2026-27ನೇ ಶೈಕ್ಷಣಿಕ ಸಾಲಿನಲ್ಲಿ ನಿರ್ವಹಿಸಬೇಕಾದ ಅಂಶಗಳ ಕುರಿತು:

  1. ದಿನಾಂಕ: 29-05-2026 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಸದರಿ ದಿನದಂದು ಶಾಲೆಗಳಿಗೆ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು. ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿಯನ್ನು/ದಾಖಲಾತಿಯನ್ನು ದಿನಾಂಕ: 30.05.2026 ರಿಂದ ಪ್ರಾರಂಂಭೋತ್ಸವದೊಂದಿಗೆ ಆರಂಭಿಸಿ, ದಿನಾಂಕ: 30.06.2026 ರಂದು ಮುಕ್ತಾಯಗೊಳಿಸತಕ್ಕದ್ದು.
  2. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ನವೆಂಬರ್-2025 ರಿಂದ ವಿವಿಧ ಕಾರಣಗಳಿಂದ ಶಾಲೆ/ಕಾಲೇಜು ಬಿಟ್ಟ 6 ರಿಂದ 18 ವಯೋಮಾನದ ಮಕ್ಕಳನ್ನು ಪುನಃ ಶಾಲೆ/ಕಾಲೇಜಿಗೆ ಕರೆ ತರಲು ಹಾಗೂ 2026-27ನೇ ಸಾಲಿನ ದಾಖಲಾತಿ ಸಂಬಂಧಿಸಿದಂತೆ ಜನವಸತಿ ಪ್ರದೇಶದ ಅರ್ಹ ವಯೋಮಾನದ ಮಕ್ಕಳನ್ನು ಗುರುತಿಸಿ ದಾಖಲಿಸಲು “ದಾಖಲಾತಿ ಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಅಭಿಯಾನವು ನವೆಂಬರ್-2025 ರಿಂದ ಜೂನ್ 2026ರವರೆಗೂ ನಿರಂತರವಾಗಿ ಜಾರಿಯಲ್ಲಿರುತ್ತದೆ.
  3. ದಿನಾಂಕ: 14.11.2025 ರಿಂದ 30.06.2026 ವಯೋಮಾನದ ಅರ್ಹ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನದಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು (ಸರ್ಕಾರದ ಸುತ್ತೋಲೆ ಸಂಖ್ಯೆ: ಇಪಿ 98 ಎಂಪಿಇ 2025, ದಿನಾಂಕ: 13.11.2025ರಲ್ಲಿ) ನಿರ್ದೇಶಿಸಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ದಾಖಲಾತಿ ಆಂದೋಲನವನ್ನು ಅರ್ಥಪೂರ್ಣಗೊಳಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆಯವರಿಗೆ ಸೂಚಿಸಿದೆ.
  4. ಕೆಲವು ಮಕ್ಕಳು ನಿರಂತರವಾಗಿ ಶಾಲೆಗೆ ಗೈರುಹಾಜರಾಗುತ್ತಿರುವುದು ಮತ್ತು ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿ ಅಧಿಕಾರಿಗಳು (ಶಿಕ್ಷಣ ಸಂಯೋಜಕರು) CRP & BRP ಗಳೊಂದಿಗೆ ಸಂಪರ್ಕದಲ್ಲಿದ್ದು ದಾಖಲಾತಿ ಆಂದೋಲನದ ಮುಖಾಂತರ ವ್ಯಾಪಕ ಪ್ರಚಾರ ಕೈಗೊಂಡು ಶಾಲಾ ಮುಖ್ಯವಾಹಿನಿಗೆ ತರುವುದು.
  5. ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಸಲ್ಲಿಸಿದ್ದಲ್ಲಿ ಈ ಬಗ್ಗೆ ಆಯಾ ಉಪನಿರ್ದೇಶಕರು (ಆಡಳಿತ) ರವರು ಈ ಕುರಿತು ಪರಿಶೀಲಿಸಿ ನಿರ್ಧರಿಸುವುದು. ಸದರಿ ಡಿಸೆಂಬರ್ ಮಾಹೆಯಲ್ಲಿ ನೀಡುವ ಕ್ರಿಸ್ ಮಸ್ ರಜಾ ಅವಧಿಯನ್ನು ಅಕ್ಟೋಬರ್ ಮಾಹೆಯ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಲು ಕ್ರಮವಹಿಸತಕ್ಕದ್ದು.
  6. ರಾಜ್ಯ/ಜಿಲ್ಲಾ ಕಛೇರಿಗಳಿಂದ ನಿಯೋಜಿಸಿದ ಜಿಲ್ಲಾ ಮತ್ತು ತಾಲ್ಲೂಕು ಶೈಕ್ಷಣಿಕ ಉಸ್ತುವಾರಿ ನೋಡಲ್ ಅಧಿಕಾರಿಗಳು, ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ರವರುಗಳು, ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿಗಳು, ತಮ್ಮ ತಮ್ಮ ವ್ಯಾಪ್ತಿಗನುಗುಣವಾಗಿ ಕ್ರಿಯಾಶೀಲ ಮೇಲ್ವಿಚಾರಣೆ ಮತ್ತು ಶೈಕ್ಷಣಿಕ ಉಸ್ತುವಾರಿ ಕ್ರಿಯಾ ಯೋಜನೆಯನ್ನು ಈ ಮುಂದೆ ನೀಡಲಾಗುವ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸುವಂತೆ ತಯಾರಿಸಿಕೊಂಡು ಶಾಲೆಗಳ ಪ್ರಾರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವುದು, ಶಾಲೆಗಳ ಪ್ರಾರಂಭದ ಸಮಯದಲ್ಲಿ ಇರುವ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳಾದ PM ಪೋಷಣ್, ಕ್ಷೀರ ಭಾಗ್ಯ ಹಾಗೂ ಪೂರೈಸಲಾಗುವ ಸಮವಸ್ತ್ರ, ಪಠ್ಯಪುಸ್ತಕ ವಿತರಣೆಗೆ ಕ್ರಮವಹಿಸುವುದು. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಭಿವೃದ್ಧಿಪಡಿಸಲು ಮಿಂಚಿನ ಸಂಚಾರ ಕೈಗೊಂಡು ಉಸ್ತುವಾರಿ ಮಾಡುವುದು.
  7. ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಮತ್ತು ಇತರೆ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವಪೂರ್ವಕವಾಗಿ ಆಚರಿಸತಕ್ಕದ್ದು.
    ನಿಗದಿಪಡಿಸಿದ ಶೈಕ್ಷಣಿಕ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಮುಷ್ಕರ ಮಳೆಗಾಳಿ, ಇನ್ನಿತರೆ ಅನಿರೀಕ್ಷಿತ ಕಾರಣಗಳಿಂದಾಗಿ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣದಿನದ ಶಾಲೆಗಳನ್ನು ನಡೆಸಿ, ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿಕೊಳ್ಳಲು ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.
    ಪರೀಕ್ಷಾ ದಿನಗಳು, ಮೌಲ್ಯಾಂಕನ ದಿನಗಳು, ಹಾಗೂ ಪೂರಕ ಶೈಕ್ಷಣಿಕ ಚಟುವಟಿಕೆ ನಡೆಸುವ ದಿನಗಳನ್ನು ಕೂಡ ಶಾಲಾ ಕರ್ತವ್ಯದ ದಿನವೆಂದು ನಿಗದಿತ ಅವಧಿಗಳಲ್ಲಿ ಪರಿಗಣಿಸುವುದು.
  8. 2026-27 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಿ ನಂತರ ಪೂರೈಸಲಾಗುವುದು. ಅದರಂತೆ ಶಾಲಾ/ಕ್ಲಸ್ಟರ್/ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಷ್ಠಾನ ಮಾಡತಕ್ಕದ್ದು.

  1. ನಿಮ್ಮ ಗೊಂದಲಗಳಿಗೆ ಉತ್ತರಗಳು (FAQ)2026-27ನೇ ಸಾಲಿನ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆ?
    ಸರ್ಕಾರದ ಆದೇಶದಂತೆ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ದಿನಾಂಕ 29-05-2026 ರಿಂದ ಆರಂಭವಾಗುತ್ತವೆ. ಮೇ 30 ರಿಂದ ದಾಖಲಾತಿ ಪ್ರಕ್ರಿಯೆ ಮತ್ತು ಶಾಲಾ ಪ್ರಾರಂಭೋತ್ಸವ ನಡೆಯಲಿದೆ.
  2. ಈ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆ ಎಷ್ಟು ದಿನಗಳು ಇರುತ್ತವೆ?
    ಅಕ್ಟೋಬರ್ 03, 2026 ರಿಂದ ಅಕ್ಟೋಬರ್ 21, 2026 ರವರೆಗೆ ಒಟ್ಟು 19 ದಿನಗಳ ಕಾಲ ದಸರಾ ರಜೆ ಇರಲಿದೆ.
  3. ಕ್ರಿಸ್‌ಮಸ್ ರಜೆ ನೀಡುವ ಬಗ್ಗೆ ಇಲಾಖೆಯ ನಿಯಮವೇನು?
    ಕ್ರಿಸ್‌ಮಸ್ ರಜೆಗಾಗಿ ಬೇಡಿಕೆ ಇರುವ ಶಾಲೆಗಳು ಆಯಾ ಜಿಲ್ಲಾ ಉಪನಿರ್ದೇಶಕರಿಂದ ಅನುಮತಿ ಪಡೆಯಬಹುದು. ಆದರೆ, ಈ ರಜೆಗಳನ್ನು ಅಕ್ಟೋಬರ್ ಮಾಹೆಯ ದಸರಾ ರಜೆಯ ಅವಧಿಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಬೇಕಾಗುತ್ತದೆ.
  4. 2026ರ ಬೇಸಿಗೆ ರಜೆ ಯಾವಾಗ ಆರಂಭವಾಗುತ್ತದೆ?
    ಪ್ರಸ್ತುತ ಶೈಕ್ಷಣಿಕ ವರ್ಷದ ಬೇಸಿಗೆ ರಜೆಯು ಏಪ್ರಿಲ್ 11, 2026 ರಿಂದಲೇ ಪ್ರಾರಂಭವಾಗಲಿದೆ

ಶಿಕ್ಷಣ ಎಂಬುದು ಕೇವಲ ಅಂಕಿ-ಅಂಶಗಳ ಅಥವಾ ಪರೀಕ್ಷೆಗಳ ಓಟವಲ್ಲ. ಇದು ಮಗುವಿನ ವ್ಯಕ್ತಿತ್ವ ರೂಪಿಸುವ ಪವಿತ್ರ ಹಾದಿ. ನಮ್ಮ ಮಕ್ಕಳು ಶಾಲೆಯ ಅಂಗಳಕ್ಕೆ ಕಾಲಿಟ್ಟಾಗ ಅಲ್ಲಿ ಕೇವಲ ಪಾಠಗಳಲ್ಲದೆ, ಪ್ರೀತಿ, ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಯುವಂತಾಗಬೇಕು. ಸರ್ಕಾರದ ಈ ಶೈಕ್ಷಣಿಕ ವೇಳಾಪಟ್ಟಿಯು ಮಕ್ಕಳಿಗೆ ಶಿಸ್ತುಬದ್ಧ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದರೂ, ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರದೆ ಅವರನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಮಗುವೂ ದೇಶದ ಆಸ್ತಿ, ಅವರ ಸುಂದರ ಭವಿಷ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ.