ಮಾ.3ರಂದು ಚಂದ್ರಗ್ರಹಣ : ದೇವಸ್ಥಾನದೊಳಗೆ ಉಡುಪಿ ಕೃಷ್ಣಮಠದಲ್ಲಿ ಪ್ರವೇಶವಿದೆಯೇ? ಏನಿರುತ್ತೆ, ಏನಿರಲ್ಲ?

Udupi Krishna Matha

ಉಡುಪಿ: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ, ಭಕ್ತರ ಆರಾಧ್ಯ ದೈವ ನೆಲೆಸಿರುವ ಉಡುಪಿ ಶ್ರೀ ಕೃಷ್ಣಮಠದಲ್ಲಿ (Udupi Shri Krishna Temple) ಮುಂಬರುವ ಚಂದ್ರಗ್ರಹಣದ (Chandra Grahan) ಪ್ರಯುಕ್ತ ವಿಶೇಷ ಆಚರಣೆಗಳು ಹಾಗೂ ಪೂಜಾ ಕೈಂಕರ್ಯಗಳು ನಡೆಯಲಿವೆ. ಗ್ರಹಣದ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆಯೇ? ಊಟದ ವ್ಯವಸ್ಥೆ ಇರುತ್ತದೆಯೇ? ಪೂಜಾ ಸಮಯಗಳೇನು? ಎಂಬೆಲ್ಲಾ ಗೊಂದಲಗಳಿಗೆ ಕೃಷ್ಣಮಠದ ದಿವಾಣರಾದ ಡಾ. ಉದಯ ಸರಳತ್ತಾಯರು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಗ್ರಹಣದ ಸಮಯ ಮತ್ತು ಗೋಚರತೆ
ಮಾರ್ಚ್ 3ರ ಮಂಗಳವಾರದಂದು ‘ಗ್ರಸ್ತೋದಯ ಚಂದ್ರಗ್ರಹಣ’ ಸಂಭವಿಸಲಿದೆ. ಇದು ಉಡುಪಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸೀಮಿತ ಅವಧಿಗೆ ಮಾತ್ರ ಗೋಚರವಾಗಲಿದೆ.
ಸೂರ್ಯಾಸ್ತ ಹಾಗೂ ಗ್ರಹಣದ ಸಮಯ: ಸಂಜೆ 6:19 ರಿಂದ 6:47 ರವರೆಗೆ ಈ ಗ್ರಹಣದ ಪ್ರಭಾವ ಇರಲಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಗೋಚರ ಅವಧಿ: ನಮ್ಮ ಭಾಗದಲ್ಲಿ ಈ ಚಂದ್ರಗ್ರಹಣವು ಕೇವಲ ಎಂಟು (8) ನಿಮಿಷಗಳ ಕಾಲ ಮಾತ್ರ ಸ್ಪಷ್ಟವಾಗಿ ಗೋಚರವಾಗಲಿದೆ ಎಂದು ಡಾ. ಉದಯ ಸರಳತ್ತಾಯರು ತಿಳಿಸಿದ್ದಾರೆ.

ಇದನ್ನು ಮಿಸ್‌ ಮಾಡದೇ ಓದಿ : ಖಾಕಿ ಬಿಟ್ಟು ನೇಗಿಲು ಹಿಡಿದ ಪೇದೆ: 10 ಎಕರೆ ಕೃಷಿಗಾಗಿ ಸರ್ಕಾರಿ ಕೆಲಸಕ್ಕೆ ತೇಜಸ್ವಿ ‘ಗುಡ್ ಬೈ’!

ಏನಿರಲ್ಲ?

ಅನ್ನದಾನ ಇರುವುದಿಲ್ಲ: ಗ್ರಹಣದ ದಿನದಂದು ಕೃಷ್ಣಮಠದಲ್ಲಿ ಏಕಾದಶಿಯ ದಿನದಂತೆ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತದೆ. ಹೀಗಾಗಿ ಅಂದು ಯಾವುದೇ ರೀತಿಯ ಆಹಾರ ಸ್ವೀಕಾರಕ್ಕೆ ಅವಕಾಶವಿಲ್ಲ.

ಮಧ್ಯಾಹ್ನ ಮತ್ತು ರಾತ್ರಿ ಊಟ ರದ್ದು: ಭಕ್ತರಿಗೆ ಹಾಗೂ ಮಠದ ಸಿಬ್ಬಂದಿಗೆ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಇರುವುದಿಲ್ಲ.
ಏನಿರುತ್ತೆ? (ಆಚರಣೆಗಳು):

ತೆರೆದಿರುವ ದೇಗುಲ: ವಿಶೇಷವೆಂದರೆ, ಗ್ರಹಣ ಕಾಲದಲ್ಲಿಯೂ ಉಡುಪಿ ಶ್ರೀ ಕೃಷ್ಣಮಠವು ಭಕ್ತರ ದರ್ಶನಕ್ಕಾಗಿ ತೆರೆದಿರುತ್ತದೆ. ಗ್ರಹಣದ ಕಾರಣಕ್ಕೆ ಬಾಗಿಲು ಮುಚ್ಚುವುದಿಲ್ಲ.

ಮಧ್ವ ಸರೋವರದಲ್ಲಿ ಅನುಷ್ಟಾನ: ಗ್ರಹಣದ ನಿಖರ ಸಮಯದಲ್ಲಿ ಮಠದ ಪವಿತ್ರ ‘ಮಧ್ವ ಸರೋವರ’ದಲ್ಲಿ ವಿಶೇಷ ಜಪ, ತಪ ಹಾಗೂ ಅನುಷ್ಟಾನಗಳು ಜರುಗಲಿವೆ.

ರಾತ್ರಿ ಪೂಜೆ: ಗ್ರಹಣ ಮೋಕ್ಷದ ಬಳಿಕ, ಅಂದರೆ ರಾತ್ರಿ 7 ಗಂಟೆಗೆ ಸರಿಯಾಗಿ ಶುದ್ಧಿ ಸ್ನಾನವನ್ನು ಪೂರೈಸಿ, ಕೃಷ್ಣನಿಗೆ ವಿಶೇಷ ರಾತ್ರಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಒಂದೇ ದಿನ ಗ್ರಹಣ ಮತ್ತು ಹೋಳಿ ಹುಣ್ಣಿಮೆ
ಮಾರ್ಚ್ 3ರಂದೇ ಹೋಳಿ ಹುಣ್ಣಿಮೆಯೂ (Holi Hunnime) ಬಂದಿರುವುದು ಮತ್ತೊಂದು ವಿಶೇಷ. ಈ ಹಿನ್ನೆಲೆಯಲ್ಲಿ ಗ್ರಹಣದ ಆಚರಣೆಗಳ ಜೊತೆಗೆ ಹೋಳಿ ಹಬ್ಬದ ಸಂಭ್ರಮವೂ ಮಠದಲ್ಲಿ ಕಳೆಗಟ್ಟಲಿದೆ.

ವಿಶೇಷ ಮೆರವಣಿಗೆ: ಅಂದು ಸಾಯಂಕಾಲ ಹೋಳಿ ಹುಣ್ಣಿಮೆಯ ಪ್ರಯುಕ್ತ ಮಠದಿಂದ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಕಡಿಯಾಳಿ ದೇವಸ್ಥಾನಕ್ಕೆ ಭೇಟಿ: ಈ ಮೆರವಣಿಗೆಯು ಉಡುಪಿಯ ಪ್ರಸಿದ್ಧ ಕಡಿಯಾಳಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ವಿಶೇಷ ಪೂಜೆ ಹಾಗೂ ಸಂಪ್ರದಾಯಗಳನ್ನು ಪೂರೈಸಲಿದೆ.