ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಭಕ್ತಾದಿಗಳು ಮಾರ್ಚ್ 3ರಂದು ದರ್ಶನದ ಸಮಯದ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಅಂದು ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವರ ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
ಗ್ರಹಣದ ಸೂತಕ ಮತ್ತು ಧಾರ್ಮಿಕ ವಿಧಿವಿಧಾನಗಳ ಕಾರಣದಿಂದ ಅಂದು ಮಧ್ಯಾಹ್ನ ದರ್ಶನ ಸ್ಥಗಿತಗೊಳ್ಳಲಿದ್ದು, ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ಮುನ್ನ ಈ ಕೆಳಗಿನ ಸಮಯದ ಪಟ್ಟಿಯನ್ನು ಗಮನಿಸಲು ಕೋರಲಾಗಿದೆ.
ಬದಲಾದ ದರ್ಶನ ಸಮಯದ ವಿವರಗಳು:
ಮಾರ್ಚ್ 03, 2026ರ ಮಂಗಳವಾರದಂದು ದರ್ಶನದ ಅವಧಿ ಹೀಗಿರಲಿದೆ:
ಬೆಳಗಿನ ದರ್ಶನ: ಅಂದು ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ಭಕ್ತರಿಗೆ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿರುತ್ತದೆ.
ದರ್ಶನ ಸ್ಥಗಿತ : ಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 1:30 ರಿಂದ ಸಂಜೆ 7:30 ರವರೆಗೆ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.
ರಾತ್ರಿಯ ದರ್ಶನ: ಗ್ರಹಣದ ಶಾಂತಿ ಮತ್ತು ಧಾರ್ಮಿಕ ಕಾರ್ಯಗಳ ನಂತರ, ರಾತ್ರಿ 7:30 ಗಂಟೆಯ ಬಳಿಕ ಎಂದಿನಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
Lunar Eclipse March 3ದೂರದ ಊರುಗಳಿಂದ ಬರುವ ಭಕ್ತರು ಹಾಗೂ ಪ್ರವಾಸಿಗರು ದರ್ಶನದ ಸಮಯದ ಈ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕು. ಕ್ಷೇತ್ರದ ಆಡಳಿತ ಮಂಡಳಿಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.