ಹಾಸನ : ಕೆಎಸ್‌ಆರ್‌ಟಿಸಿ ಬಸ್ ತಡೆದು ಚಾಲಕನ ಮೇಲೆ ಹಲ್ಲೆ; ಪ್ರಮುಖ ಆರೋಪಿ ಅರೆಸ್ಟ್!

KSRTC bus stopped and driver attacked; main accused arrested

ಹಾಸನ: ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡಸಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಯಾರು : ಬಾಗೇಶಪುರ ನಿವಾಸಿಯಾದ ಶಶಿಕುಮಾರ್ (32) ಬಂಧಿತ ವ್ಯಕ್ತಿ. ಫೆಬ್ರವರಿ 20 ರಂದು ನಡೆದಿದ್ದ ಈತನನ್ನು ಸೆರೆಹಿಡಿಯಲಾಗಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಎಚ್ಚರಿಕೆ : ಬೆಂಗಳೂರಿಗರ ತಟ್ಟೆ ಸೇರುತ್ತಿದೆ ‘ವಿಷಕಾರಿ’ ತರಕಾರಿ! ಕಿಡ್ನಿ, ಮೆದುಳಿಗೆ ಅಪಾಯ ಫಿಕ್ಸ್?

ಇದನ್ನು ಮಿಸ್‌ ಮಾಡದೇ ಓದಿ : ದಿವಾಳಿಯಾದ ರಾಜ್ಯ ಸರ್ಕಾರಕ್ಕೆ ಸಂಬಳ ನೀಡಲೂ ಹಣವಿಲ್ಲ ಆರ್. ಅಶೋಕ್

ಏನಿದು ಘಟನೆ : ಬಸ್ಸಿನಲ್ಲಿ ಭಾರಿ ಜನಸಂದಣಿ: ಚಾಲಕ ಮೋಹನ್ ಅವರು ಸುಮಾರು 78 ಪ್ರಯಾಣಿಕರನ್ನು ಹೊತ್ತ ಬಸ್ಸನ್ನು ಚಲಾಯಿಸುತ್ತಿದ್ದರು. ಜನಸಂದಣಿ ಹೆಚ್ಚಿದ್ದ ಕಾರಣ ಬಾಗಿಲು ಮುಚ್ಚಲು ಸಾಧ್ಯವಾಗಿರಲಿಲ್ಲ.

ವಾಗ್ವಾದದ ಕಿಡಿ: ಸುರಕ್ಷತೆಯ ದೃಷ್ಟಿಯಿಂದ ಚಾಲಕ ಬಸ್ ನಿಲ್ಲಿಸಿ ಬಾಗಿಲು ಮುಚ್ಚಲು ಯತ್ನಿಸಿದಾಗ, ಅಲ್ಲೇ ನಿಂತಿದ್ದ ಮಹಿಳಾ ಪ್ರಯಾಣಿಕರೊಬ್ಬರು “ಯಾಕೆ ತಳ್ಳುತ್ತಿದ್ದೀಯಾ?” ಎಂದು ಚಾಲಕನೊಂದಿಗೆ ಕಿರಿಕ್ ತೆಗೆದಿದ್ದರು.

ತಪ್ಪಾದ ಮಾಹಿತಿ & ಹಲ್ಲೆ: ಸದರಿ ಮಹಿಳೆ ತನ್ನ ಪರಿಚಯಸ್ಥರಿಗೆ ಕರೆ ಮಾಡಿ, ಚಾಲಕ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸುಳ್ಳು ದೂರು ನೀಡಿದ್ದರು. ಬಸ್ ಬಾಗೇಶಪುರ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಕಾಯುತ್ತಿದ್ದ ಶಶಿಕುಮಾರ್, ಬಸ್ಸನ್ನು ಅಡ್ಡಗಟ್ಟಿ ಚಾಲಕ ಮೋಹನ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ.

ಬಸ್ ಗಾಜು ಪುಡಿಪುಡಿ : ಆಕ್ರೋಶಗೊಂಡ ಆರೋಪಿಗಳು ಕೆಎಸ್‌ಆರ್‌ಟಿಸಿ ಬಸ್ಸಿನ ಗಾಜುಗಳನ್ನು ಒಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರು.

ಪೊಲೀಸ್ ಕ್ರಮ : ಬಸ್ ಚಾಲಕ ಮೋಹನ್ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಸ್ತುತ ಪ್ರಮುಖ ಆರೋಪಿಯನ್ನು ಜೈಲಿಗಟ್ಟಿರುವ ಪೊಲೀಸರು, ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಗಮನಿಸಿ: ಸರ್ಕಾರಿ ನೌಕರರ ಮೇಲೆ ಕರ್ತವ್ಯದ ವೇಳೆ ಹಲ್ಲೆ ನಡೆಸುವುದು ಗಂಭೀರ ಅಪರಾಧವಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Hassan: KSRTC bus stopped and driver attacked; main accused arrested!

RECENT NEWS