ಬೆಂಗಳೂರಿನ ಮಾರುಕಟ್ಟೆಗಳಲ್ಲಿ ನೀವು ನಿತ್ಯ ಖರೀದಿಸುವ ತರಕಾರಿಗಳು ಅಂದುಕೊಂಡಷ್ಟು ಸುರಕ್ಷಿತವಾಗಿಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಡೆಸಿರುವ ಇತ್ತೀಚಿನ ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯವೊಂದು ಹೊರಬಿದ್ದಿದೆ. ಸಿಲಿಕಾನ್ ಸಿಟಿಯ ಸುತ್ತಮುತ್ತ ಬೆಳೆಯುವ ತರಕಾರಿಗಳಲ್ಲಿ ಮಿತಿಮೀರಿದ ಪ್ರಮಾಣದ ಸೀಸ (Lead) ಮತ್ತು ಕೀಟನಾಶಕಗಳು ಪತ್ತೆಯಾಗಿವೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ದೂರಿನ ಅನ್ವಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಜಂಟಿ ಸಮಿತಿ ಈ ವರದಿ ನೀಡಿದೆ.
ಇದನ್ನು ಮಿಸ್ ಮಾಡದೇ ಓದಿ : ದಿವಾಳಿಯಾದ ರಾಜ್ಯ ಸರ್ಕಾರಕ್ಕೆ ಸಂಬಳ ನೀಡಲೂ ಹಣವಿಲ್ಲ ಆರ್. ಅಶೋಕ್
ಇದನ್ನು ಮಿಸ್ ಮಾಡದೇ ಓದಿ : ತಿರುಪತಿಯಲ್ಲಿ ಇನ್ಮುಂದೆ ಅನ್ಯಧರ್ಮೀಯರಿಗೆ ಡಿಕ್ಲರೇಷನ್ ಕಡ್ಡಾಯ!
ಸೀಸದ ಪ್ರಮಾಣ: ಸಂಗ್ರಹಿಸಲಾದ 72 ಮಾದರಿಗಳ ಪೈಕಿ 19 ಮಾದರಿಗಳಲ್ಲಿ ಸೀಸದ ಅಂಶ ಮಿತಿಮೀರಿದೆ.
ಸೋರೆಕಾಯಿ ಡೇಂಜರ್: ವಿಶೇಷವಾಗಿ ಸೋರೆಕಾಯಿಯಲ್ಲಿ ಪ್ರತಿ ಕೆಜಿಗೆ 1.75 ಎಂಜಿ ಸೀಸ ಪತ್ತೆಯಾಗಿದ್ದು, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು.
ಕಲುಷಿತ ಮಣ್ಣು: ಕೇವಲ ತರಕಾರಿ ಮಾತ್ರವಲ್ಲ, ಅವುಗಳನ್ನು ಬೆಳೆಯುವ ಮಣ್ಣು ಕೂಡ ವಿಷಕಾರಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲದ 23 ಮಣ್ಣಿನ ಮಾದರಿಗಳು ಕಲುಷಿತಗೊಂಡಿರುವುದು ದೃಢಪಟ್ಟಿದೆ.
ಕೀಟನಾಶಕಗಳ ಅವಶೇಷ: 10 ಮಾದರಿಗಳಲ್ಲಿ ಬರೋಬ್ಬರಿ 8 ವಿವಿಧ ಬಗೆಯ ಅಪಾಯಕಾರಿ ಕೀಟನಾಶಕಗಳ ಅಂಶಗಳು ಪತ್ತೆಯಾಗಿವೆ.
ಆರೋಗ್ಯದ ಮೇಲೆ ಏನು ಪರಿಣಾಮ : ಈ ಕಲುಷಿತ ತರಕಾರಿಗಳನ್ನು ದೀರ್ಘಕಾಲ ಸೇವಿಸುವುದರಿಂದ ದೇಹದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ:
ಕಿಡ್ನಿ ಸಮಸ್ಯೆ: ರಕ್ತದಲ್ಲಿ ಸೀಸದ ಅಂಶ ಹೆಚ್ಚಾದಂತೆ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಸಿಯುತ್ತದೆ.
ಮೆದುಳಿಗೆ ಹಾನಿ: ನರಮಂಡಲದ ಮೇಲೆ ಪ್ರಭಾವ ಬೀರಲಿದ್ದು, ಮೆದುಳಿನ ಬೆಳವಣಿಗೆ ಮತ್ತು ಸ್ಮರಣಶಕ್ತಿಯಲ್ಲಿ ವ್ಯತ್ಯಯ ಉಂಟಾಗಬಹುದು.
ಮಕ್ಕಳಲ್ಲಿ ಅಪಾಯ: ಬೆಳೆಯುವ ಮಕ್ಕಳಲ್ಲಿ ಈ ವಿಷಕಾರಿ ಅಂಶಗಳು ತೀವ್ರ ಆರೋಗ್ಯ ಏರುಪೇರಿಗೆ ಕಾರಣವಾಗುತ್ತವೆ.
ಗ್ರಾಹಕರು ಏನು ಮಾಡಬಹುದು : ಮಾರುಕಟ್ಟೆಯಿಂದ ತಂದ ತರಕಾರಿಗಳನ್ನು ಬಳಸುವ ಮುನ್ನ ಈ ಕ್ರಮಗಳನ್ನು ಪಾಲಿಸುವುದು ಉತ್ತಮ:
ತರಕಾರಿಗಳನ್ನು ಕನಿಷ್ಠ 15-20 ನಿಮಿಷಗಳ ಕಾಲ ಉಪ್ಪು ಬೆರೆಸಿದ ನೀರಿನಲ್ಲಿ ಅಥವಾ ವಿನೆಗರ್ ನೀರಿನಲ್ಲಿ ನೆನೆಸಿಡಿ.
ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಿ.
ಸಾಧ್ಯವಾದಷ್ಟು ಸಾವಯವ (Organic) ತರಕಾರಿಗಳಿಗೆ ಆದ್ಯತೆ ನೀಡಿ.