ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ಹಾಡು ಬಿಡುಗಡೆ

Darling Krishna starrer 'Love Mocktail-3' song released

ಕನ್ನಡ ನಾಡು ಡಿಜಿಟಲ್‌ ಡೆಸ್ಕ್ : ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ‘ಒಬ್ಬಂಟಿಯಾದೆ ನಾ’ ಹಾಡು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು ಹೊಸ ಸದ್ದು ಮಾಡುತ್ತಿದೆ.

ಈ ಹಾಡು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಾ, ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಹಿಂದೆ ‘ಲವ್ ಮಾಕ್ಟೇಲ್‘ ಹಾಗೂ ‘ಲವ್ ಮಾಕ್ಟೇಲ್-2‘ ಚಿತ್ರದ ‘ದೂರ ಹೋದರು ನನ್ನೊಲವೇ‘, ‘ಲವ್ ಯೂ ಚಿನ್ನಾ‘ ಮತ್ತು ‘ಜನುಮಗಳೇ ಕಾಯುವೆ‘ ಹಾಡುಗಳು ಪ್ರೇಕ್ಷಕರನ್ನು ಸೆಳೆದಿದ್ದವು ಕೂಡ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ ಎಂಬ ಸಾಲುಗಳೊಂದಿಗೆ ಶುರುವಾಗುವ ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿಯಾಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿರುವ ಲವ್ ಮಾಕ್ಟೇಲ್3 ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

Darling Krishna starrer ‘Love Mocktail-3’ song released